ಬಿಜೂರು: ರಸ್ತೆ ಕಾಮಗಾರಿ ಆರಂಭಕ್ಕೆ ಆಗ್ರಹಿಸಿ ಗ್ರಾ.ಪಂ.ಗೆ ಮುತ್ತಿಗೆ
Team Udayavani, Jun 8, 2019, 6:00 AM IST
ಉಪ್ಪುಂದ: ಬಿಜೂರು ಸಾಲಿಮಕ್ಕಿ ರಸ್ತೆಯು ಸಂಪೂರ್ಣ ಹದ ಗೆಟ್ಟಿದ್ದು, ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವುದನ್ನು ಗ್ರಾಮಸ್ಥರು ಗ್ರಾಮ ಪಂಚಾಯತ್‌ಗೆ ಜೂ. 7ರಂದು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ರಾ.ಹೆದ್ದಾರಿ 66ರ ಮೂಲಕ ಹಾದು ಹೋಗುವ ರಸ್ತೆಯು ಬಿಜೂರು, ದೀಟಿ ದೇವಸ್ಥಾನ, ಸಾಲಿಮಕ್ಕಿ, ಹೊಳೆತೋಟ ಹಾಗೂ ನಾರಂಬಳ್ಳಿ ಪ್ರದೇಶಗಳ ಮೂಲಕ ನೂರಾರು ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಸಾಧ್ಯವಾಗದೇ ಪ್ರಯಾಣಿಕರು ನಿತ್ಯ ಸಂಕಟ ಪಡುವಂತಾಗಿದೆ.
2017-18ನೇ ಸಾಲಿನಲ್ಲಿ ರೈಲ್ವೇ ಗೇಟಿನ ದೀಟಿ ಮಹಾಲಿಂಗೇಶ್ವರ ರಸ್ತೆಗೆ ರೂ.15ಲಕ್ಷ ಹಾಗೂ ಬಿಜೂರು ಪಂಚಾಯತ್‌ನಿಂದ ಕೋಣೂರು ಕೋಟ್ಯಾಡಿ ರಸ್ತೆಗೆ ರೂ.15ಲಕ್ಷ ಕಾಂಕ್ರೀಟೀಕರಣಕ್ಕೆ ಕೆಡಿಆರ್‌ಡಿಐಎಲ್ನಿಂದ ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ನಡೆದಿಲ್ಲ. ಈ ಕುರಿತು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರ ಗಮನಕ್ಕೆ ತಂದಾಗ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು ಆದರು ಕೆಲಸ ಅರಂಭಗೊಂಡಿಲ್ಲ.
ಚುನಾವಣೆಯ ಸಂದರ್ಭ ಜಲ್ಲಿಕಲ್ಲು
ಆದರೆ ಚುನಾವಣೆಯ ದಿನಾಂಕ ಪ್ರಕಟ ವಾಗುವ ಮುಂಚಿತವಾಗಿ ಮತದಾರರ ಓಲೈಕೆಗಾಗಿ ರಸ್ತೆಗೆ ಜಲ್ಲಿ ಕಲ್ಲುಗಳನ್ನು ಹಾಕಿ ಕಾಮಗಾರಿ ಪ್ರಾರಂಭ ಮಾಡಿರುವ ಸೂಚನೆ ನೀಡಿದರು. ಬಳಿಕ ಗ್ರಾಮಸ್ಥರಿಗೆ ಚುನಾವಣೆಯ ನೀತಿ ಸಂಹಿತೆಯ ಕಾರಣ ನೀಡಿ ಕಾಮಗಾರಿಯನ್ನು ನಿಲ್ಲಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಚುನಾವಣೆ ಮುಗಿದರು ಕಾಮಗಾರಿಯು ಪ್ರಾರಂಭಗೊಳ್ಳದಿರುವುದು, ಈ ಕುರಿತು ಗುತ್ತಿಗೆದಾರರನ್ನು ವಿಚಾರಿಸಿ ದಾಗ ಬೇಜವಾಬ್ದಾರಿಯಿಂದ ಮಾತನಾಡಿರು ವುದು ಸ್ಥಳೀಯರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿದ್ದು ಗ್ರಾಮ ಪಂಚಾಯತ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಗ್ರಾ.ಪಂ.ಅಧ್ಯಕ್ಷೆ ಲೋಲಾಕ್ಷಿ ದೇವಾಡಿಗ ಗ್ರಾಮಸ್ಥರ ಮನವಿ ಪಡೆದರು. ಈ ಸಂದರ್ಭ ತಾ.ಪಂ. ಸದಸ್ಯ ಜಗದೀಶ ದೇವಾಡಿಗ, ಪಂ. ಸದಸ್ಯರಾದ ವೀರೇಂದ್ರ ಶೆಟ್ಟಿ, ರಮೇಶ ವಿ. ದೇವಾಡಿಗ, ಗಣೇಶ ದೇವಾಡಿಗ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.