![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Mar 18, 2024, 12:20 AM IST
ಉಡುಪಿ: ಅತೀ ವೇಗದಲ್ಲಿ ಚಲಾಯಿಸುತ್ತಿದ್ದ ಬೈಕ್ ಸ್ಕಿಡ್ ಆಗಿ ಸಹಸವಾರ ಸ್ಥಳದಲ್ಲೇ ಮೃತಪಟ್ಟು ಸವಾರ ಗಾಯಗೊಂಡ ಘಟನೆ ಮಣಿಪಾಲದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ಉದ್ಯಾವರದಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದ ಕಾಪು ವಿನ ನಿವಾಸಿ ಅದ್ವೈತ್ (18) ಮೃತಪಟ್ಟವರು. ಹೆತ್ತವ ರಿಗೆ ಓರ್ವನೇ ಪುತ್ರನಾಗಿದ್ದ. ಸವಾರ ಕೂಡ ಕಾಪುವಿನ ನಿವಾಸಿಯಾಗಿದ್ದು, ಪೆರಂಪಳ್ಳಿಯಲ್ಲಿ ಐಟಿಐ ಮಾಡಿಕೊಂಡಿದ್ದ.
ತಡರಾತ್ರಿ ಮಣಿಪಾಲದಲ್ಲಿ ಬರ್ತ್‌ಡೇ ಪಾರ್ಟಿ ಮುಗಿಸಿಕೊಂಡು ಕಾಪುವಿನತ್ತ ತೆರಳುತ್ತಿದ್ದರು. ಸಿಂಡಿಕೇಟ್ ಸರ್ಕಲ್‌ಗಿಂತ ತುಸು ಮುಂದೆ ಸಿಗುವ ಕಡಿದಾದ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಹೊಡೆಯಿತು. ಹಿಂಬದಿ ಸವಾರ ಡಿವೈಡರ್‌ಗೆ ಎಸೆಯಲ್ಪಟ್ಟಿದ್ದು, ಢಿಕ್ಕಿ ರಭಸಕ್ಕೆ ತಲೆ ನಜ್ಜುಗುಜ್ಜಾಗಿದೆ. ಸವಾರ ಹೆಲ್ಮೆಟ್ ಧರಿಸಿದ್ದ ಕಾರಣ ತಲೆಗೆ ಗಾಯವಾಗದಿದ್ದರೂ ಕೈಕಾಲಿಗೆ ಗಾಯ ವಾಗಿದೆ. ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಾಯಕಾರಿ ತಿರುವು
ಈ ತಿರುವು ಬಹಳಷ್ಟು ಅಪಾಯಕಾರಿಯಾಗಿದ್ದು, ಈಗಾಗಲೇ ಹಲವಾರು ವಾಹನಗಳು ಇಲ್ಲಿ ಅಪಘಾತ ಕ್ಕೀಡಾಗಿವೆ. ಸಿಂಡಿಕೇಟ್ ಸರ್ಕಲ್‌ನಿಂದ ಕೆಳಕ್ಕೆ ಬರುವಾಗ ಅತೀವೇಗದಿಂದ ಬರುವಾಗಲೇ ಕಡಿದಾದ ತಿರುವಿನಲ್ಲಿ ವಾಹನಗಳು ನಿಯಂತ್ರಣ ತಪ್ಪುತ್ತಿವೆ. ಈ ಭಾಗದಲ್ಲಿ ಎಚ್ಚರಿಕೆ ಫಲಕ ಅಥವಾ ಸ್ಪೀಡ್ ಬ್ರೇಕರ್‌ಗಳನ್ನು ಅಳವಡಿಸಿದರೆ ತಕ್ಕಮಟ್ಟಿಗಾದರೂ ಇಂತಹ ಅಪಘಾತಗಳಿಗೆ ಕಡಿವಾಣ ಹಾಕಬಹುದು ಎನ್ನುತ್ತಾರೆ ಸ್ಥಳೀಯರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.