ಮರಕ್ಕೆ ಬೈಕ್ ಢಿಕ್ಕಿ, ಬಾಲಕಿ ಸಾವು
Team Udayavani, Mar 20, 2018, 10:20 AM IST
ಸಿದ್ದಾಪುರ: ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿ ರವಿವಾರ ರಾತ್ರಿ ನಿಯಂತ್ರಣ ತಪ್ಪಿದ ಬೈಕ್ ಮರಕ್ಕೆ ಢಿಕ್ಕಿ ಹೊಡೆದು ನಾಲ್ಕೂವರೆ ವರ್ಷ ಪ್ರಾಯದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿ, ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಂಕರನಾರಾಯಣ ಗ್ರಾಮ ಬೈಲೂರು ನಿವಾಸಿ ವಾಸು ಅವರ ಪುತ್ರಿ ನಾಲ್ಕೂವರೆ ವರ್ಷದ ಸಿಂಚನಾ ಮೃತಪಟ್ಟಿರುವ ಬಾಲಕಿಯಾಗಿದ್ದು, ಹಳ್ನಾಡು ನಿವಾಸಿ ಕೃಷ್ಣ ಗಾಯಾಳು. ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಲಾಗಿದೆ.
ಘಟನೆ ವಿವರ:
ಕೂಲಿ ಕಾರ್ಮಿಕರಾದ ವಾಸು ಮತ್ತು ಕೃಷ್ಣ ಸ್ನೇಹಿತರು. ಕೃಷ್ಣ ಆಗಾಗ ವಾಸು ಮನೆಗೆ ಬಂದು ಹೋಗುತ್ತಿದ್ದರು. ಕೃಷ್ಣ ರವಿವಾರ ವಾಸುವಿನ ಮನೆಗೆ ಬಂದಾಗ, ಆತನ ಪತ್ನಿ ಅನಾರೋಗ್ಯದಿಂದಿರುವುದು ತಿಳಿಯಿತು. ಆಕೆ ಕೃಷ್ಣ ಅವರಲ್ಲಿ ಶಂಕರನಾರಾಯಣಕ್ಕೆ ಹೋಗಿ ಔಷಧ ತಂದುಕೊಡುವಂತೆ ಕೇಳಿಕೊಂಡಿದ್ದರು. ಆಗ ವಾಸು ಮಗಳು ಸಿಂಚನಾ ತಾನೂ ಬರುತ್ತೇನೆಂದು ಹಟ ಹಿಡಿದ ಕಾರಣ ಆಕೆಯನ್ನು ಜತೆಯಲ್ಲಿ ಕರೆದುಕೊಂಡು ಹೋದರು. ಶಂಕರನಾರಾಯಣದಿಂದ ವಾಪಸ್ ಮನೆಗೆ ಹೊರಡುವಾಗ ಮಳೆ ಆರಂಭವಾಯಿತು. ಆದರೂ ಮಳೆಯಲ್ಲೇ ಬೈಕ್ ಚಲಾಯಿಸಿಕೊಂಡು ಹೋಗುವಾಗ, ಕಲ್ಲನಕೆರೆ ಅಮ್ಮ ಸಭಾಭವನದ ಹತ್ತಿರ ಅಪಘಾತ ಸಂಭವಿಸಿತು.
ಏಕೈಕ ಪುತ್ರಿ
ವಾಸು ದಂಪತಿಗೆ ಸಿಂಚನಾ ಏಕೈಕ ಪುತ್ರಿಯಾಗಿದ್ದು ಮನೆ ಹಾಗೂ ಅಂಗನವಾಡಿಯಲ್ಲಿ ಅತಿ ಚುರುಕಿನ ಹುಡುಗಿಯಾಗಿದ್ದಳು. ಪುತ್ರಿಯನ್ನು ಕಳೆದುಕೊಂಡ ದಂಪತಿ ಬೈಲೂರು ಮನೆ ಬಿಟ್ಟು ಕುಂದಾಪುರದ ಮೂಲ ಮನೆಯಲ್ಲಿ ವಾಸವಾಗಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddapura: ಟ್ರಾಯ್‌ನಿಂದ ಕರೆ ಮಾಡುವುದಾಗಿ 10.39 ಲಕ್ಷ ರೂ. ವಂಚನೆ
Padubidri: ಸಾಲಬಾಧೆ; ನೇಣು ಬಿಗಿದುಕೊಂಡು ವ್ಯಕ್ತಿ ಸಾವು
Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ
Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
MUST WATCH
ಹೊಸ ಸೇರ್ಪಡೆ
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
UGC Draft: ಕೇಂದ್ರ ಸರಕಾರದ ವಿರುದ್ಧ ಮತ್ತೊಂದು ಸುತ್ತಿನ ಸಮರ: ಸಿಎಂ ಎಚ್ಚರಿಕೆ
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Nuclear Power Plant: ಇನ್ನೊಂದು ಅಣುಸ್ಥಾವರ ಮೂರು ಜಿಲ್ಲೆಗಳಲ್ಲಿ ಪರಿಶೀಲನೆ
Demand: ಕೊರೆವ ಚಳಿಯಲ್ಲೂ ಮುಂದುವರಿದ ‘ಆಶಾ’ ಕಾರ್ಯಕರ್ತೆಯರ ಮುಷ್ಕರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.