ಬಯೋಮೆಟ್ರಿಕ್ ಪಡಿತರ: ಗ್ರಾಹಕರು ಕಂಗಾಲು
ಸರ್ವರ್ ಸಮಸ್ಯೆಯಿಂದಾಗಿ ಅರ್ಧತಿಂಗಳು ಕಳೆದರೂ ಸಿಗದ ಪಡಿತರ
Team Udayavani, Jan 25, 2020, 5:26 AM IST
ಕಾಪು: ಪಡಿತರ ವ್ಯವಸ್ಥೆಯಲ್ಲಿನ ಸುಧಾರಣೆ, ಪಡಿತರ ದುರುಪಯೋಗವನ್ನು ತಡೆಗಟ್ಟುವ ಉದ್ದೇಶದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಾರಿಗೆ ತಂದಿರುವ ಬಯೋ ಮೆಟ್ರಿಕ್ ಆಧರಿತ ಪಡಿತರ ವಿತರಣೆ ವ್ಯವಸ್ಥೆ ಗ್ರಾಹಕರಿಗೆ ಸಿಹಿಯಾಗುವ ಬದಲು ಕಹಿಯಾಗಿದೆ.
ಸರ್ವರ್ ದೋಷ
ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗಾಗಿ ಅಳವಡಿಸಿರುವ ಬಯೋಮೆಟ್ರಿಕ್ ವ್ಯವಸ್ಥೆಯ ಸರ್ವರ್‌ನಲ್ಲಿ ದೋಷಗಳು ಕಂಡು ಬಂದಿರುವುದರಿಂದ ಪಡಿತರ ಪಡೆಯಲು ಪಡಿತರ ಅಂಗಡಿಗಳ ಮುಂದೆ ಬೆಳಗ್ಗಿನಿಂದಲೇ ಸಾಲುಗಟ್ಟಿ ನಿಲ್ಲುವಂತಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳ ಜನರು, ಪಡಿತರ ಪೂರೈಕೆದಾರರು ಸಮಸ್ಯೆಗೆ ಸಿಲುಕುವಂತಾಗಿದೆ.
ಗ್ರಾಹಕರು ಬೆಳಗ್ಗೆಯಿಂದಕೊನೇ ಕ್ಷಣದವರೆಗೂ ಪಡಿತರಕ್ಕಾಗಿ ಕಾದು ನಿಂತು ವಾಪಸ್ಸಾಗುವುದು ಸಾಮಾನ್ಯವಾಗಿದೆ. ಪಡಿತರಕ್ಕಾಗಿ ವಯೋವೃದ್ಧರು, ಮಹಿಳೆಯರು, ಮಕ್ಕಳು ಸಾಲಿನಲ್ಲಿ ನಿಂತು ಬರಿಕೈಯಲ್ಲಿ ಮರಳುತ್ತಿದ್ದಾರೆ. ಪಡಿತರಕ್ಕಾಗಿ ಹಲವರು ರಜೆ ಹಾಕಿ ಕ್ಯೂ ನಿಲ್ಲುತ್ತಿದ್ದು, ಆದರೂ ಲಭ್ಯವಾಗುತ್ತಿಲ್ಲ.
ಎಲ್ಲೆಲ್ಲಿ ಸಮಸ್ಯೆ?
ಕಾಪು ವ್ಯವಸಾಯ ಸೇವಾ ಸಹಕಾರಿ ಸಂಘದ ವ್ಯಾಪ್ತಿಯ ಕಾಪು, ಉಳಿಯಾರಗೋಳಿ, ಮಲ್ಲಾರು, ಮೂಳೂರು, ಚಂದ್ರನಗರ, ಬಂಟಕಲ್ಲು ನ್ಯಾಯ ಬೆಲೆ ಅಂಗಡಿಗಳಲ್ಲಿ ಸಮಸ್ಯೆಯಿದೆ. ಕೆಲವೆಡೆ ಬೆಳಗ್ಗೆ ಮತ್ತು ಕೆಲವೆಡೆ ಮಧ್ಯಾಹ್ನ ಪಡಿತರ ವಿತರಣೆ ಮಾಡಲಾಗುತ್ತಿದ್ದು, ಸರ್ವರ್ ದೋಷದಿಂದ ಈ ಬಾರಿ ಸಮರ್ಪಕವಾಗಿ ಪಡಿತರ ವಿತರಣೆಯಾಗಿಲ್ಲ. ಸಂಘದ ವ್ಯಾಪ್ತಿಯಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಪಡಿತರ ಚೀಟಿದಾರರಿದ್ದು, ಈವರೆಗೆ ಕೇವಲ ಶೇ. 30ರಷ್ಟು ವಿತರಣೆಯಾಗಿದೆ.
ತಾಲೂಕಿನಾದ್ಯಂತ ಸಮಸ್ಯೆ
ತಾಲೂಕಿನಲ್ಲಿ ಕಾಪು, ಶಿರ್ವ, ಇನ್ನಂಜೆ, ಬೆಳಪು, ಕಟಪಾಡಿ, ಪಡುಬಿದ್ರಿ ಹೀಗೆ 6 ಸಹಕಾರ ಸಂಘಗಳಿದ್ದು, ಇವುಗಳ ಮೂಲಕ 30ಕ್ಕೂ ಹೆಚ್ಚು ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಪೂರೈಕೆ ಮಾಡಲಾಗುತ್ತಿದೆ. ಎಲ್ಲೆಡೆ ಇದೇ ರೀತಿಯ ತೊಂದರೆ ಇದೆ.
ಇಲಾಖೆಗೆ ಪತ್ರ
ಪಡಿತರ ವಿತರಣೆಯ ಬಯೋ ಮೆಟ್ರಿಕ್ ವ್ಯವಸ್ಥೆಯಲ್ಲಿ ಆಗಾಗ ಸಮಸ್ಯೆ ಎದುರಾಗುತ್ತಿದೆ. ಉತ್ತಮ ಸರ್ವರ್ ಅಳವಡಿಸುವಂತೆ ಸಂಬಂಧಪಟ್ಟವರಲ್ಲಿ ನಾವು ಹಲವು ಬಾರಿ ಮನವಿ ಮಾಡಿದ್ದೇವೆ.
-ಪಡಿತರ ವಿತರಣೆ ಸಿಬಂದಿ
ಇಲಾಖೆಗೆ ಪತ್ರ
ಸರ್ವರ್‌ನಲ್ಲಿ ದೋಷವಿರುವುದರಿಂದ ಸಕಾಲದಲ್ಲಿ ಪಡಿತರ ವಿತರಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಸಮಸ್ಯೆ ಸರಿಪಡಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಪತ್ರ ಬರೆಯಲಾಗಿದೆ.
-ಕಾಪು ದಿವಾಕರ ಶೆಟ್ಟಿ, ಅಧ್ಯಕ್ಷರು, ಕಾಪು ಸಿ.ಎ. ಬ್ಯಾಂಕ್
ನಿರಾಶೆಯಾಗಿದೆ
ನಾವು ಕಳೆದ ಮೂರು ದಿನಗಳಿಂದ ಪಡಿತರಕ್ಕಾಗಿ ಅಂಗಡಿಗೆ ಬಂದು ವಾಪಾಸ್ಸು ಹೋಗುತ್ತಿದ್ದೇವೆ. ಪಡಿತರಕ್ಕಿಂತಲೂ ನಮಗೆ ರಿಕ್ಷಾ ಬಾಡಿಗೆ ದುಬಾರಿಯಾಗುತ್ತಿದೆ. ಇಲ್ಲಿ ಕೂಲಿ ಕೆಲಸಕ್ಕೆ ಹೋಗುವವರು ಅಧಿಕವಾಗಿದ್ದು, ಅವರೂ ಪ್ರತೀ ದಿನ ಮಧ್ಯಾಹ್ನದವರೆಗೆ ಕ್ಯೂ ನಿಂತು ವಾಪಾಸು ಹೋಗುವಂತಾಗಿದೆ.
-ಅಬ್ದುಲ್ ಬಶೀರ್, ಮಲ್ಲಾರು
-ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.