ಬಯೋಟೆಕ್ 2ನೆಯ ಹಂತದ ಶಿಕ್ಷಣ: ಎಸ್‌ಎಲ್‌ಎಸ್ ಮರು ಆಯ್ಕೆ
Team Udayavani, Aug 8, 2017, 6:15 AM IST
ಉಡುಪಿ: ಕರ್ನಾಟಕ ಸರಕಾರದ ಕರ್ನಾಟಕ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸೇವೆಗಳು (ಕೆಬಿಐಟಿಎಸ್) ಸಂಸ್ಥೆಯ ಮೊದಲ ಹಂತದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದ ಮಣಿಪಾಲ ವಿ.ವಿ.ಯ ಸ್ಕೂಲ್ ಆಫ್ ಲೈಫ್ ಸೈನ್ಸಸ್ (ಎಸ್‌ಎಲ್‌ಎಸ್) ಎರಡನೆಯ ಹಂತದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದೆ.
ಐದು ವರ್ಷಗಳ ಬಯೋಟೆಕ್ನಾಲಜಿ ಫಿನಿಶಿಂಗ್ ಸ್ಕೂಲ್ (ಬಿಟಿಎಫ್ಎಸ್) ಕಾರ್ಯಕ್ರಮವನ್ನು ಪೂರೈಸಿದ ಎಸ್‌ಎಲ್‌ಎಸ್ ಈಗ ಮರುನಾಮಕರಣಗೊಂಡ “ಬಯೋಟೆಕ್ನಾಲಜಿ ಸ್ಕಿಲ್ ಎನ್‌ಹಾನ್ಸ್ ಮೆಂಟ್ ಪ್ರೋಗ್ರಾಮ್’ (ಬೈಸೆಪ್) ಕಾರ್ಯಕ್ರಮಕ್ಕೆ ಆಯ್ಕೆಯಾಗಿದೆ. ಜೈವಿಕ ತಂತ್ರಜ್ಞಾನ ರಂಗ ಅನುಭವಿಸುತ್ತಿರುವ ಗುಣಮಟ್ಟದ ವೃತ್ತಿಪರರ ಕೊರತೆಯನ್ನು ನೀಗಿಸಲು ಕಾರ್ಯಕ್ರಮ ನಡೆಸಲಾಗುತ್ತಿದೆ.
ವಿ.ವಿ. ಜೈವಿಕ ತಂತ್ರಜ್ಞಾನ ಶಿಕ್ಷಣ, ತರಬೇತಿ, ಸಂಶೋಧನೆಯಲ್ಲಿ 2004ರಿಂದ ಮುಂಚೂಣಿಯಲ್ಲಿದೆ. ಈಗ ಎಸ್‌ಎಲ್‌ಎಸ್ ಮತ್ತೂಂದು ಸುತ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ವಿ.ವಿ. ಕುಲಪತಿ ಡಾ|ಎಚ್.ವಿನೋದ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆಬಿಐಟಿಎಸ್‌ನ ಜೈವಿಕ ತಂತ್ರಜ್ಞಾನ ಸೌಲಭ್ಯ ಘಟಕದ ಮುಖ್ಯಸ್ಥ ಡಾ|ಮಿತ್ತೂರು ಎನ್. ಜಗದೀಶ್ ಅವರು, ಮೊದಲ ಹಂತದಲ್ಲಿ ಆಯ್ಕೆಯಾದ 12 ಸಂಸ್ಥೆಗಳಲ್ಲಿ ಎಸ್‌ಎಲ್‌ಎಸ್ ಕೂಡ ಒಂದು. ಈ ಬಾರಿ 18 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.
ಇದರಲ್ಲಿ ಏಳು ಬೆಂಗಳೂರಿನಲ್ಲಿವೆ, 11 ಇತರ ಜಿಲ್ಲೆಗಳಲ್ಲಿ ಇವೆ. ಮಂಗಳೂರು, ಉಜಿರೆ ಸಂಸ್ಥೆಗಳೂ ಇದರಲ್ಲಿ ಸೇರ್ಪಡೆಯಾಗಿವೆ ಎಂದರು.
ಜೈವಿಕ ತಂತ್ರಜ್ಞಾನ ಉದ್ಯಮದಲ್ಲಿ ಕರ್ನಾಟಕ ಪ್ರಮುಖವಾಗಿದೆ. ಪ್ರಸ್ತುತ ದೇಶದ ಈ ರಂಗಕ್ಕೆ ರಾಜ್ಯ ಶೇ. 35 ರಷ್ಟು ಪೂರೈಸುತ್ತಿದೆ. ರಾಜ್ಯ ಸರಕಾರ ಬಯೋ ಇನ್ನೋವೇಶನ್ ಸೆಂಟರ್‌ನ್ನು ಬೆಂಗಳೂರಿನಲ್ಲಿ ತೆರೆದಿದೆ. ಪ್ರಾಣಿ, ಕೃಷಿ, ಮಾನವ ಹೀಗೆ ವಿವಿಧ ವಿಷಯಗಳ ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿ ಬೀದರ್, ಧಾರವಾಡ, ಮಂಗಳೂರು, ಮೈಸೂರಿನಲ್ಲಿ ಸ್ಥಾಪಿಸುತ್ತಿರುವ ಜೈವಿಕ ತಂತ್ರಜ್ಞಾನ ಉದ್ಯಾನ ಪ್ರಗತಿಯಲ್ಲಿವೆ ಎಂದರು.
ಸೆಲ್ಯುಲರ್, ಮೊಲೆಕ್ಯುಲರ್ ಡಯಾಗ್ನೊàಸ್ಟಿಕ್ಸ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಇದು ವಿವಿಧ ಆರೋಗ್ಯ ಸಮಸ್ಯೆಗಳ ಮೂಲವನ್ನು ಪತ್ತೆ ಹಚ್ಚಲು ಸಹಕಾರ. ಬಿಟೆಕ್, ಎಂಟೆಕ್, ಎಂಎಸ್ಸಿ, ಎಂಫಾರ್ಮ ಮತ್ತಿತರ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದು ಶೇ. 88 ಪ್ಲೇಸೆ¾ಂಟ್ ಪಡೆದಿದ್ದಾರೆ. ಒಂದು ವರ್ಷದ ಕೋರ್ಸ್‌ನಲ್ಲಿ ಆರು ತಿಂಗಳು ಶೈಕ್ಷಣಿಕ ತರಬೇತಿ, ಆರು ತಿಂಗಳು ಕೈಗಾರಿಕಾ ಅಧ್ಯಯನ ನಡೆಸಲಾಗುತ್ತದೆ. ಕೈಗಾರಿಕೆಗಳಿಗೆ ನುರಿತ ಸಿಬಂದಿ ಅಗತ್ಯವಿರುವುದರಿಂದ ಇಂತಹ ತರಬೇತಿ ಹೆಚ್ಚಿನ ಅನುಕೂಲಕರವಾಗುತ್ತದೆ. ವಿದ್ಯಾರ್ಥಿಗಳಿಗೆ ತಿಂಗಳಿಗೆ 10,000 ರೂ. ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಕರ್ನಾಟಕದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸರಕಾರ ಅರ್ಧಾಂಶ ಶುಲ್ಕವನ್ನು ಸರಕಾರ ಭರಿಸಲಿದೆ ಎಂದು ಎಸ್‌ಎಲ್‌ಎಸ್ ನಿರ್ದೇಶಕ ಡಾ|ಸತ್ಯಮೂರ್ತಿ ತಿಳಿಸಿದರು. ಬಿಟಿಎಫ್ಎಸ್ ಸಮನ್ವಯಕಾರ ಡಾ|ಎಸ್. ಬಾಲಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.