ಬಿಜೆಪಿ ಕೋಮುವಾದ – ಕಾಂಗ್ರೆಸ್ ಅಭಿವೃದ್ಧಿವಾದ
Team Udayavani, Mar 31, 2018, 6:35 AM IST
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬಿಜೆಪಿಯ ಕೋಮುವಾದ ಮತ್ತು ಕಾಂಗ್ರೆಸ್‌ನ ಅಭಿವೃದ್ಧಿವಾದದ ನಡುವೆ ಈ ಬಾರಿಯ ಚುನಾವಣೆ ನಡೆಯಲಿದೆ ಎಂಬುದು ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಅವರ ಮಾತು.
ನಾಲ್ಕೂವರೆ ದಶಕದಿಂದ ಕಾಂಗ್ರೆಸ್ ಕಾರ್ಯಕರ್ತರಾಗಿರುವ ಜನಾರ್ದನ ತೋನ್ಸೆ ಅವರು ಕಲ್ಯಾಣಪುರ ಮಂಡಲ ಪಂಚಾಯತ್ ಸದಸ್ಯರಾಗಿ ಮೊದಲ ಆಯ್ಕೆ, ಅನಂತರ ಅಧ್ಯಕ್ಷರಾಗಿ 11 ವರ್ಷಗಳ ದಾಖಲೆಯ ಸೇವೆ. 2 ಬಾರಿ ಜಿ.ಪಂ. ಸದಸ್ಯರಾಗಿ, ಕೃಷಿ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ. ಸ್ಪರ್ಧಿಸಿರುವ ವಿವಿಧ 5 ಚುನಾವಣೆಯಲ್ಲಿ ಅವರು ಸೋಲಿಲ್ಲದ ಸರದಾರ. ಕಳಂಕ ರಹಿತ, ಸಜ್ಜನ ರಾಜಕಾರಣಿಯೆಂದು ಪ್ರಸಿದ್ಧಿ. ಪ್ರಸ್ತುತ ಸರಕಾರದ ವತಿಯಿಂದ ಆಚರಿಸಲ್ಪಡುವ ಜಿಲ್ಲಾ ನಾರಾಯಣಗುರು ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷರಾಗಿ, ಜಿ.ಪಂ. ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ “ಉದಯವಾಣಿ’ಯ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
ಬಿಎಲ್‌ಎ – ವಿಶೇಷ ತರಬೇತಿ
ಸಂಘಟನಾತ್ಮಕವಾಗಿ ಜಿಲ್ಲೆಯಲ್ಲಿರುವ 1,078 ಬೂತ್‌ಗಳಲ್ಲಿ ಬೂತ್ ಸಮಿತಿ ರಚನೆ ಮಾಡಲಾಗಿದೆ. ಬೂತ್ ಲೆವೆಲ್ ಏಜೆಂಟರನ್ನು (ಬಿಎಲ್‌ಎ) ನೇಮಿಸಿ ಕೊಳ್ಳಲಾಗಿದ್ದು, ಅವರಿಗೆ ಪಕ್ಷದ ವತಿಯಿಂದ ತಜ್ಞರ ಮೂಲಕ ವಿಶೇಷ ತರಬೇತಿ ನೀಡುವ ಕಾರ್ಯವಾಗಿದೆ. ಎಲ್ಲ 10 ಬ್ಲಾಕ್‌ಗಳಲ್ಲಿ ಪಕ್ಷ ಸಂಘಟನೆಯೊಂದಿಗೆ ಹೊಸ ಮತದಾರರ ಸೇರ್ಪಡೆಯಲ್ಲೂ ಬಿಎಲ್‌ಎ ಅವರ ಪಾತ್ರ ಪ್ರಮುಖವಾಗಿದೆ ಎಂದರು.
ನಮ್ಮ ಬೂತ್ ನಮ್ಮ ಹೊಣೆ
ಕೆಪಿಸಿಸಿ ಸೂಚನೆಯಂತೆ ಸರಕಾರದ ಸಾಧನೆಯನ್ನು ಬಿಂಬಿಸುವ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮವೂ ಜಿಲ್ಲೆಯಲ್ಲಿ ಚಾಲನೆಗೊಂಡಿದೆ. “ನಮ್ಮ ಬೂತ್ ನಮ್ಮ ಹೊಣೆ’ ಎನ್ನುವ ಜವಾಬ್ದಾರಿಯಿಂದ ಪಕ್ಷ ಸಂಘಟಿಸುವ ಕೆಲಸವಾಗುತ್ತಿದೆ. ಜಿಲ್ಲಾಮಟ್ಟದಲ್ಲಿ ಮಹಿಳಾ ಕಾಂಗ್ರೆಸ್, ಯುವಕಾಂಗ್ರೆಸ್, ಎನ್‌ಎಸ್‌ಯುಐ, ಕಾರ್ಮಿಕ ಘಟಕ, ಹಿಂ. ವರ್ಗ, ಅಲ್ಪಸಂಖ್ಯಾಕ ವರ್ಗ, ಮೀನುಗಾರರ ಘಟಕಗಳ ಸಮಾವೇಶ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗಾಗಮಿಸಿ ಸಮಾವೇಶದಲ್ಲಿ ಮಾತನಾಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರ ಜಿಲ್ಲಾ ಪ್ರವೇಶವೂ ಆಗಿದೆ. ಹೀಗೆ ಪಕ್ಷದ ಕಾರ್ಯಕರ್ತರಲ್ಲಿ ಯುವಚೈತನ್ಯ ಶಕ್ತಿ ತುಂಬುವ ಕೆಲಸವಾಗಿದೆ ಎಂದರು.
ರೈತರ ನೋವಿಗೆ ಸ್ಪಂದಿಸದ ಬಿಜೆಪಿ
ನಾಯಕರು “ನಾನು ರೈತ, ರೈತನ ಮಗ’ ಎಂದರೆ ಸಾಲದು. ರೈತರ ಬಗ್ಗೆ ಹಿತಾಸಕ್ತಿ ಇರಬೇಕು. ರಾಜ್ಯದಲ್ಲಿ ರೈತರ ಬವಣೆ ಅರಿತ ಸಿಎಂ ಸಿದ್ದರಾಮಯ್ಯನವರು ಸಾಲಮನ್ನಾ ಮಾಡಿದರು. ಆದರೆ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ರೈತರ ನೆರವಿಗೆ ಬಂದಿಲ್ಲ. ರೈತರ ಈ ನೋವು ಚುನಾವಣೆಯಲ್ಲಿ ಪರಿಣಾಮ ಬೀರುತ್ತದೆ. ಮೀನುಗಾರರಿಗೆ ನಿಬಡ್ಡಿ ಸಾಲದ ಮೂಲಕ ಆರ್ಥಿಕ ಚೈತನ್ಯ ತುಂಬುವ ಕೆಲಸ ಮಾಡಲಾಗಿದೆ ಎಂದರು.
ಗೊಂದಲವಿಲ್ಲ; ಮನೆ ಜಗಳ ಸರಿಪಡಿಸ್ತೇವೆ
ಉಡುಪಿ ಜಿಲ್ಲೆಯ ಕಾಪು-ವಿನಯಕುಮಾರ್ ಸೊರಕೆ, ಉಡುಪಿ-ಪ್ರಮೋದ್ ಮಧ್ವರಾಜ್ ಮತ್ತು ಬೈಂದೂರು ಕೆ. ಗೋಪಾಲ ಪೂಜಾರಿ ಅವರು ಒಮ್ಮತದ ಏಕೈಕ ಅಭ್ಯರ್ಥಿಗಳು. ಕಾರ್ಕಳ ಮತ್ತು ಕುಂದಾಪುರದಲ್ಲಿ ಒಂದಿಬ್ಬರು ಹೆಚ್ಚುವರಿ ಅಭ್ಯರ್ಥಿ ಆಕಾಂಕ್ಷಿಗಳಿದ್ದಾರೆ. ಆಕಾಂಕ್ಷೆ ಖಂಡಿತ ತಪ್ಪಲ್ಲ. ಪೈಪೋಟಿ ಇದ್ದರೆ ಮತ್ತೂ ಉತ್ತಮ. ಇಲ್ಲಿ ಗೊಂದಲ ಎನ್ನುವುದು ಇಲ್ಲ. 2 ಕ್ಷೇತ್ರದಲ್ಲಿ ಮನೆ ಜಗಳವಿದೆ, ಒಪ್ಪಿಕೊಳೆವೆ. ಅದನ್ನು ನಾವು ಸರಿಪಡಿಸಿಕೊಳ್ಳುತ್ತೇವೆ. ಹೈಕಮಾಂಡ್ ಯಾರನ್ನು ಅಭ್ಯರ್ಥಿ ಎಂದು ಘೋಷಿಸುತ್ತದೆಯೋ ಅವರ ಪರ ಎಲ್ಲರೂ ನಿಲ್ಲಬೇಕು- ಇದು ಕಾಂಗ್ರೆಸ್ ನಿಲುವು. ಕಾರ್ಯಕರ್ತರು, ಮುಖಂಡರೆಲ್ಲರೂ ಒಮ್ಮತದಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಲಿದ್ದಾರೆ ಎಂದು ತೋನ್ಸೆ ಹೇಳುತ್ತಾರೆ.
ಯಾರೂ ದುಡುಕಬೇಡಿ
ನನ್ನ ಕಿವಿಮಾತು ಇದು: ಕಾಂಗ್ರೆಸ್ ಪಕ್ಷ ತಳಮಟ್ಟದ ಕಾರ್ಯಕರ್ತರನ್ನು ಬಿಟ್ಟು ಹಾಕುವುದಿಲ್ಲ. ಪಕ್ಷಕ್ಕಾಗಿ ನಿಮ್ಮ ದುಡಿಮೆ ಇರಬೇಕು. ಅಧಿಕಾರಕ್ಕಾಗಿ ಅಲ್ಲ. ಯಾರೂ ದುಡುಕು ನಿರ್ಧಾರ ತೆಗೆದುಕೊಳ್ಳಬಾರದು. ಅಧಿಕಾರ ಹುಡುಕಿಕೊಂಡು ಬರುವವರೆಗೂ ಪಕ್ಷ ನಿಷ್ಠೆ, ಪ್ರಾಮಾಣಿಕತನದಿಂದ ಕೆಲಸ ಮಾಡಿ. ಒಂದಲ್ಲ ಒಂದು ದಿನ ಅವಕಾಶ ಹುಡುಕಿಕೊಂಡು ಬಂದೇ ಬರುತ್ತದೆ ಎನ್ನುವುದಕ್ಕೆ ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನಿಂದು ಜಿಲ್ಲಾಧ್ಯಕ್ಷನಾಗಿರುವುದೇ ಸಾಕ್ಷಿ. ಜಿಲ್ಲೆಯಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರ ಮಾರ್ಗದರ್ಶನ, ಜಿಲ್ಲಾ ನಾಯಕರ ಸಹಕಾರದಿಂದ ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ಯಶಸ್ಸಾಗಿದೆ ಎಂದು ಜನಾರ್ದನ ತೋನ್ಸೆ ಹೇಳುತ್ತಾರೆ.
ಈಡೇರಿದ ಭರವಸೆಗಳೇ ಮತಕ್ಕೆ ಸ್ಫೂರ್ತಿ
ರಾಜ್ಯ ಸರಕಾರದ ಜನಪರ ಆಡಳಿತ, ಕ್ರಾಂತಿಕಾರಿ ಯೋಜನೆಗಳು, ಈಡೇರಿಸಿದ ಭರವಸೆಗಳೇ ನಮಗೆ ಸ್ಫೂರ್ತಿಯಾಗಲಿದ್ದು, ಅವುಗಳು ಮತವಾಗಿ ಪರಿವರ್ತನೆಯಾಗಲಿವೆ. ಸರಕಾರದ ಸಾಧನೆ, ಪಕ್ಷದ ಜನಪ್ರತಿನಿಧಿಗಳ ದಾಖಲೆಯ ಅಭಿವೃದ್ಧಿ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಬಿಎಸ್‌ವೈ ನೇತೃತ್ವದ ಭ್ರಷ್ಟ ಸರಕಾರವನ್ನು ಜನ ಹತ್ತಿರದಿಂದ ಗಮನಿಸಿದ್ದಾರೆ. ಕೇಂದ್ರ ಸರಕಾರ ನುಡಿದಂತೆ ನಡೆದಿಲ್ಲ. ಜನರಿಗೆ ಮೋಸ ಮಾಡಿದೆ. ಕೇಂದ್ರದ ಬಿಜೆಪಿ ನಾಯಕರ ಇಬ್ಬಗೆ ನೀತಿ ಅವರಿಗೆ ಮುಳುವಾಗಲಿದೆ. ಕೇಂದ್ರದ ನೋಟ್ ಬ್ಯಾನ್, ಜಿಎಸ್‌ಟಿ ಅವಾಂತರಗಳು ಜನರು ಬಿಜೆಪಿ ಬಗ್ಗೆ ರೋಸಿ ಹೋಗುವಂತೆ ಮಾಡಿವೆ. ಉಡುಪಿ ಜಿಲ್ಲೆಯಲ್ಲಿ ಮೂವರು ಅತ್ಯಂತ ಚಟುವಟಿಕೆಯ ಶಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಸಕ ಪ್ರಮೋದ್ ಮಧ್ವರಾಜ್ ಅವರ ಅಭಿವೃದ್ಧಿ ಪರ ಸಾಧನೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ಜನಪರ ಕೆಲಸಗಳು, ಕೆಎಸ್ಸಾರ್ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅವರ ಕಾರ್ಯಕ್ಷಮತೆ ಎಲ್ಲವೂ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ ಎನ್ನುತ್ತಾರೆ ತೋನ್ಸೆ.
5 ಕ್ಷೇತ್ರಗಳಲ್ಲೂ ನಮ್ಮದೇ ಗೆಲುವು
ಕಳೆದ ಬಾರಿ ಉಡುಪಿ, ಕಾಪು, ಬೈಂದೂರಿನಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಮತ್ತುಳಿದ 2 ಕ್ಷೇತ್ರಗಳಾದ ಕಾರ್ಕಳ, ಕುಂದಾಪುರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ರಣತಂತ್ರ ರೂಪಿಸಲಾಗಿದೆ. ಹೀಗೆ ಎಲ್ಲ 5 ಕ್ಷೇತ್ರದಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಮತ್ತೆ ಬರುವುದು ಖಚಿತ.
– ಜನಾರ್ದನ ತೋನ್ಸೆ
– ಚೇತನ್ ಪಡುಬಿದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.