ಯುವಕರ ದಾರಿ ತಪ್ಪಿಸುವ ಬಿಜೆಪಿ : ಕುಮಾರಸ್ವಾಮಿ
Team Udayavani, Apr 4, 2019, 9:14 AM IST
ಕುಂದಾಪುರ: ರಾಜ್ಯದಲ್ಲಿ ಮೋದಿ ಅಲೆಯೇ ಇಲ್ಲ. ರಾಜ್ಯಕ್ಕೆ ಕೇಂದ್ರದ ಕೊಡುಗೆ ಏನೂ ಇಲ್ಲ. ಆದ್ದರಿಂದ ಅನಂತ ಕುಮಾರ ಹೆಗಡೆ, ಈಶ್ವರಪ್ಪ ಬಳಿ ಕೀಳು ಮಟ್ಟದಲ್ಲಿ ಮಾತನಾಡಿಸಲಾಗುತ್ತದೆ. ಯುವಕರ ದಾರಿ ತಪ್ಪಿಸಿ ಮತ ಕೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬುಧವಾರ ರಾತ್ರಿ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ಸೋಲಿಗೆ ಸಿದ್ಧರಾಗಬೇಕಿದೆ. ಉಡುಪಿ, ಮಂಗಳೂರು, ಶಿವಮೊಗ್ಗದಲ್ಲಿ ಗೆಲುವು ಲಭಿಸುತ್ತದೆ. ಕರಾವಳಿ ಯುವಕರ ಉದ್ಯೋಗಕ್ಕೆ ಪರಿಸರ ಸಹ್ಯ ಕಾರ್ಖಾನೆಗಳ ಸ್ಥಾಪನೆಗೆ ಚಿಂತಿಸಲಾಗಿದೆ ಎಂದರು.
ಜಾತಿ ರಾಜಕಾರಣ ಇಲ್ಲ
ಜಾತಿ ಹೆಸರಿನಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಮಂಡ್ಯದಲ್ಲಿ ಯಾರು ಏನೇ ಪ್ರಚಾರ ಮಾಡಿದರೂ ನಿಖೀಲ್ ಗೆಲುವು ನಿಶ್ಚಿತ. ಇಡೀ ದೇಶದಲ್ಲಿ ಮಂಡ್ಯದಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ ಎಂಬಂತೆ ಬಿಂಬಿಸುವುದು ಸರಿಯಲ್ಲ. ಏನೇ ಅಪಪ್ರಚಾರ ನಡೆದರೂ ಮಂಡ್ಯದಲ್ಲಿ ಸಮ್ಮಿಶ್ರ ಅಭ್ಯರ್ಥಿಯದ್ದೇ ಗೆಲುವು. ರಾಜ್ಯದಲ್ಲಿ 20ಕ್ಕೆ ಕಡಿಮೆಯಾಗದಷ್ಟು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದರು.
ಪ್ರಮೋದ್ ಮಧ್ವರಾಜ್, ಡಾ| ಜಯಮಾಲಾ, ಎಸ್.ಎಲ್. ಭೋಜೇಗೌಡ, ಕೆ. ಗೋಪಾಲ ಪೂಜಾರಿ. ಯು.ಆರ್. ಸಭಾಪತಿ ಉಪಸ್ಥಿತರಿದ್ದರು.
ದೊರೆಯದ ಹೆಲಿಕಾಪ್ಟರ್
ಒಂದು ವಾರದಿಂದ ಸತತ ಪ್ರಯತ್ನ ಮಾಡುತ್ತಿದ್ದರೂ ಹೆಲಿಕಾಪ್ಟರ್ ದೊರೆಯಲಿಲ್ಲ. ಆದ್ದರಿಂದ ಮುಂಜಾನೆ ಬೆಂಗಳೂರಿನಿಂದ ಕಾರಿನಲ್ಲಿ ಶಿವಮೊಗ್ಗ, ಕುಂದಾಪುರ, ಉ.ಕ. ಪ್ರಯಾಣದಲ್ಲಿದ್ದೇನೆ. ತಲುಪುವುದು ವಿಳಂಬವಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.
ಎ. 7ರಂದು ಉಡುಪಿ, ದ.ಕ.ಕ್ಕೆ
ಚಿಕ್ಕಮಗಳೂರಿನಲ್ಲಿ ಎ. 5ರಂದು, ಉಡುಪಿಯಲ್ಲಿ ಮೂರು ಕಡೆ ಎ. 7ರಂದು, ಅದೇ ದಿನ ಸುಳ್ಯ, ಪುತ್ತೂರು ಭಾಗದಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.