ರಕ್ತ ಸಿಕ್ತಾ? ದಾನವೇ ದೈವ ಸರ್ವಜ್ಞ
Team Udayavani, Dec 8, 2018, 2:10 PM IST
ರಕ್ತದಾನ ಮಾಡೋಕೆ ಆಸೆ. ಆದ್ರೆ ಟೈಂ ಅಡೆjಸ್ಟ್ ಆಗ್ತಿಲ್ಲ ಎಂಬ ಸಬೂಬನ್ನು ನಾವೆಲ್ಲರೂ ಬಳಸಿದ್ದೇವೆ. ಚಂದ್ರಕಾಂತ ಆಚಾರ್ಯ ಎಂಬವರು, ಈವರೆಗೆ 120 ಬಾರಿ ರಕ್ತದಾನ ಮಾಡಿದ್ದಾರೆ.
ರಕ್ತದಾನ ಶ್ರೇಷ್ಠ ದಾನ, ರಕ್ತದಾನ ಮಾಡಿ ಜೀವ ಉಳಿಸಿ….ರಕ್ತದಾನ ಕುರಿತ ಇಂಥ ಘೋಷವಾಕ್ಯಗಳನ್ನು ನಾವೆಲ್ಲಾ ಎಲ್ಲಾ ದರೂ ಒಂದು ಕಡೆ ನೋಡಿಯೇ ಇರುತ್ತೇವೆ. ಹಾಗೆ ನೋಡಿದಾಗೆಲ್ಲ, ನಾವೂ ಒಂದ್ಸಲ ರಕ್ತದಾನ ಮಾಡಬೇಕು ಎಂದು ಯೋಚಿಸಿ, ಆನಂತರ ಅದನ್ನು ಮರೆತೇ ಬಿಡುತ್ತೇವೆ. ರಕ್ತದಾನ ಮಾಡೋಕೆ ಆಸೆ. ಆದ್ರೆ ಟೈಂ ಅಡೆjಸ್ಟ್ ಆಗ್ತಿಲ್ಲ ಎಂದು ಸಬೂಬು ಹೇಳುತ್ತೇವೆ. ಆದರೆ ಚಂದ್ರಕಾಂತ ಆಚಾರ್ಯ ಎಂಬವರು, ಈವರೆಗೆ 120 ಬಾರಿ ರಕ್ತದಾನ ಮಾಡಿದ್ದಾರೆಂದರೆ ನಂಬುವಿರಾ…?
ಎಷ್ಟೇ ಉದಾರವಾಗಿ ಆಲೋಚಿಸುವ ಜನರೂ ಕೂಡ ರಕ್ತದಾನದ ವಿಚಾರ ಬಂದಾಗ ಒಂದು ಹೆಜ್ಜೆ ಹಿಂದೆ ಸರಿಯುವುದೇ ಹೆಚ್ಚು. ಆದರೆ ಚಂದ್ರಕಾಂತ್ ಆಚಾರ್ಯ, ರಕ್ತದಾನವಷ್ಟೇ ಅಲ್ಲ , ರಕ್ತದ ವಿವಿಧ ಪ್ರಕಾರಗಳನ್ನೂ ದಾನ ಮಾಡಿರುವುದು ಹೇಳಲೇಬೇಕಾದ ಅತಿ ಮುಖ್ಯಸಂಗತಿ.
ರಕ್ತದಾನಕ್ಕೆ ಬದುಕು ಸಮರ್ಪಣೆ
ಮೂಲತ: ಶಿವಮೊಗ್ಗದವರಾದ ಚಂದ್ರಕಾಂತ, ಇಂಜಿನಿಯರಿಂಗ್ ಪದವೀಧರ. ಕಾಲೇಜಿನಲ್ಲಿ ಗೆಳೆಯರ ಜೊತೆ ಇದ್ದಾಗ , ವಯೋಸಹಜ ಉತ್ಸಾಹದಲ್ಲಿ ರಕ್ತದಾನ ಮಾಡಿದ್ದರು. ಒಂದೆರೆಡು ಬಾರಿ, ಒಂದು ಬಾಟಲಿ ರಕ್ತಕ್ಕಾಗಿ ರೋಗಿಯ ಸಂಬಂಧಿಕರು ಅನುಭವಿಸಿದ ಒ¨ªಾಟ ಮತ್ತು ಸಂಕಟ ಇವರನ್ನು ರಕ್ತದಾನಿಯಾಗಿ ಬದಲಾಗಲು ಪ್ರೇರೇಪಿಸಿತು. ಈಗ ಬೆಂಗಳೂರಿನ ರಕ್ಷಣಾ ಇಲಾಖೆಯಲ್ಲಿ ಗುಣಮಟ್ಟ ಖಾತ್ರಿ ವಿಭಾಗದ ಉದ್ಯೋಗಿಯಾಗಿರುವ ಅವರು, ತಮ್ಮ ಬಿಡುವಿನ ಸಮಯವನ್ನು ರಕ್ತದಾನ ಹಾಗೂ ಅದರ ಜಾಗೃತಿಗಾಗಿಯೇ ಮೀಸಲಿರಿಸಿ¨ªಾರೆ. ಹಲವಾರು ವಾಟ್ಸಪ್ ಗ್ರೂಪ್‌ಗ್ಳನ್ನು ರಚಿಸಿಕೊಂಡು ಆ ಮೂಲಕವೂ ರಕ್ತದಾನ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿದ್ದಾರೆ.
120 ಬಾರಿ ದಾನ
ಚಂದ್ರಕಾಂತ್, ಈವರೆಗೆ 120 ಬಾರಿ ರಕ್ತದಾನ ಮಾಡಿದ್ದಾದರೂ ಹೇಗೆ ಅನ್ನಬಹುದು. ಅವರು, ರಕ್ತದ ವಿವಿಧ ಪ್ರಕಾರಗಳನ್ನೂ ದಾನ ಮಾಡುತ್ತಾ ಬಂದಿದ್ದಾರೆ. ಅಂದರೆ, 60 ಬಾರಿ ಪೂರ್ಣ ಪ್ರಮಾಣದ ರಕ್ತದಾನ ಮಾಡಿದ್ದರೆ, 57 ಬಾರಿ ರಕ್ತದ ಕೆನೆ ಕಣಗಳನ್ನು ನೀಡಿ¨ªಾರೆ. ಹಾಗೆಯೇ 2 ಬಾರಿ ಬಿಳಿಯ ರಕ್ತ ಕಣಗಳು ಹಾಗೂ ಒಂದು ಬಾರಿ ರಕ್ತದ ಆಕಾರ ಕೋಶವೆಂದರೆ ತಾಯಿ ಕೋಶವನ್ನೇ ದಾನ ಮಾಡಿದ್ದಾರೆ. ಆಕಾರಕೋಶ ನೀಡುವುದು ಎಲ್ಲರಿಗೂ ಸಾಧ್ಯವಿಲ್ಲ. ಯಾಕೆಂದರೆ ಇದು ಸಾಮ್ಯತೆ ಆಧರಿಸಿ ನೀಡುವ ಪ್ರಕ್ರಿಯೆ. ಹಾಗಾಗಿ, ಸಾವಿರದಲ್ಲಿ ಒಬ್ಬರಿಗೆ ಮಾತ್ರ ಆಕಾರಕೋಶ ದಾನ ಮಾಡುವ ಅವಕಾಶ ದೊರೆಯುತ್ತದೆ.
ಶೇ.30ರಷ್ಟು ರಕ್ತದ ಕೊರತೆ…
ರಕ್ತದಾನದ ಬಗ್ಗೆ ದೇಶಾದ್ಯಂತ ಹಲವಾರು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಕೂಡ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳ ರಕ್ತ ನಿಧಿಯಲ್ಲಿ ಈಗಲೂ ಸಹ ಶೇ.30ರಷ್ಟು ರಕ್ತದ ಕೊರತೆ ಇದ್ದೇ ಇದೆೆ. 18ರಿಂದ 65 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿಗಳೆಲ್ಲರೂ ರಕ್ತದಾನಕ್ಕೆ ಅರ್ಹರಿದ್ದರೂ, ರಕ್ತದಾನದ ಬೇಡಿಕೆ ಮಾತ್ರ ಈಡೇರುತ್ತಿಲ್ಲ. ಇದಕ್ಕೆ ಜನರಲ್ಲಿರುವ ಸಾಮಾನ್ಯ ಅಪನಂಬಿಕೆಗಳೇ ಕಾರಣ ಎನ್ನುತ್ತಾರೆ ಚಂದ್ರಕಾಂತ.
ಪ್ರತೀ 3 ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ದೇಹಕ್ಕೆ ಯಾವುದೇ ರೀತಿಯ ಅಪಾಯ ಇರುವುದಿಲ್ಲ. ಬದಲಿಗೆ ಇದರಿಂದ ಲಾಭವೇ ಹೆಚ್ಚು. ರಕ್ತದಾನ ಮಾಡುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಕಾಯಿಲೆಯಿಂದ ಪಾರಾಗಬಹುದು. ರಕ್ತದಾನದಿಂದ ಆರೋಗ್ಯಕ್ಕೆ ತೊಂದರೆ ಆಗುತ್ತದೆ ಎಂಬುದೆಲ್ಲಾ ಸುಳ್ಳು. ರಕ್ತದಾನ ಮಾಡಬೇಕೆಂದು ಒಮ್ಮೆ ಸಂಕಲ್ಪ ಮಾಡಿದರೆ ಯಾವುದೇ ನೆಪಗಳೂ ಅಡ್ಡಿ ಬರಲ್ಲ. ಅನ್ನುತ್ತಾರೆ ಚಂದ್ರಕಾಂತ.
ಸಮಸ್ಯೆಯೇ ಅಲ್ಲ…
ರಕ್ತದಾನ ಮಾಡಿ ಅಂದರೆ, ನಮ್ಮದು ಸಾಮಾನ್ಯ ಗುಂಪು ಎಂದು ಜಾರಿಕೊಳ್ಳುವವರೇ ಹೆಚ್ಚು. ಆದರೆ ನಿಜವಾಗಿ ತೊಂದರೆಗೆ ಗುರಿಯಾಗುವುದು ಸಾಮಾನ್ಯ ಗುಂಪಿನ ರೋಗಿಗಳೇ. ಇಂತಹ ಗುಂಪಿನಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ, ಅದೇ ಗುಂಪಿನ ರಕ್ತಕ್ಕೆ ಬೇಡಿಕೆ ಇರುತ್ತದೆ. ಸಾಮಾನ್ಯ ಗುಂಪಿನ ರಕ್ತವೆಂದು ರಕ್ತದಾನ ಮಾಡಲು ಅಲಕ್ಷಿಸಿದರೆ ಹಲವು ಜೀವಗಳನ್ನು ರಕ್ಷಿಸಲಾಗದು. ಹಾಗಾಗಿ ಜನರು ಹಿಂಜರಿಕೆ ಬಿಟ್ಟು ರಕ್ತದಾನ ಮಾಡಬೇಕು ಎಂದೂ ಅವರು ಸಲಹೆ ನೀಡುತ್ತಾರೆ.
ದೇಹದಲ್ಲಿರುವ ಕೆಂಪು ಬಣ್ಣದ ದ್ರವ ನೀಡುವುದನ್ನೇ ರಕ್ತದಾನವೆಂದು ಬಹಳಷ್ಟು ಮಂದಿ ಅಂದುಕೊಂಡಿದ್ದಾ ರೆ. ರಕ್ತದಾನದಲ್ಲಿ ಹಲವಾರು ವಿಧಗಳಿವೆ. ರಕ್ತದ ಕೆನೆ ಕಣ (ಪ್ಲೇಟ್ ಲೆಟ್ಸ), ಬಿಳಿಯ ಕಣ, ರಕ್ತದ ಆಕಾರ ಕೋಶ (ತಾಯಿ ಕೋಶ) ಹೀಗೆ ಹಲವು ಬಗೆಯಲ್ಲಿ ರಕ್ತದ ಪ್ರಕಾರವನ್ನೂ ದಾನ ಮಾಡುವ ಅವಕಾಶವಿದೆ.
ಮರಳಿಸಲಾಗದ ದಾನ..
ನಮ್ಮ ಸಮಾಜದಲ್ಲಿ ದಾನ ಮಾಡುವುದರಿಂದ ಒಳಿತಾಗುತ್ತದೆಂಬ ನಂಬಿಕೆ ಇದೆ. ಅದರಲ್ಲೂ, ನಾವು ಮಾಡಿದ ದಾನವನ್ನು ನಮಗೆ ಹಿಂತಿರುಗಿಸಲು ಸಾಧ್ಯವಿಲ್ಲ. ಎಂಬಂಥ ದಾನವೇನಾದರೂ ಇದ್ದರೆ ಅದು ರಕ್ತದಾನ ಮಾತ್ರವೇ. ಯಾವುದೇ ರೋಗಿಗೆ ಅಪೇಕ್ಷೆ ಇಲ್ಲದೆ ರಕ್ತದಾನ ಮಾಡಿದರೆ, ಅದನ್ನು ಆತ ಹಿಂತಿರುಗಿಸಲಾರ. ಹಾಗಾಗಿ ದಾನಕ್ಕೆ ನಿಜ ಅರ್ಥವೇ ರಕ್ತದಾನ ಎಂಬ ಹೊಸ ವ್ಯಾಖ್ಯಾನ ಚಂದ್ರಕಾಂತ್ ಅವರದ್ದು.
ಜೆ.ಪುಷ್ಪಲತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.