ಕಾಪು ಬಳಿ ಕಲ್ಲಿಗೆ ಢಿಕ್ಕಿ ಹೊಡೆದ ಟಗ್: ಅಪಾಯದಲ್ಲಿ 9 ಜನ ಸಿಬ್ಬಂದಿಗಳು
Team Udayavani, May 16, 2021, 11:13 AM IST
ಕಾಪು: ನವಮಂಗಳೂರು ಬಂದರಿನ ಹೊರವಲಯದಲ್ಲಿ ಮೂರಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮತ್ತೊಂದು ಟಗ್ ಕೋರಂಗಲ ಆಪರೇಷನ್ ಮೈನ್, ಇದೀಗ ಕಾಪು ಬಳಿ ಕಲ್ಲಿಗೆ ಢಿಕ್ಕಿಹೊಡೆದಿದೆ ಎಂದು ವರದಿಯಾಗಿದೆ. ಇದರಲ್ಲಿ 9 ಜನ ಸಿಬಂದಿಗಳಿದ್ದು ಅಪಾಯದಲ್ಲಿದ್ದಾರೆ.
ಟಗ್ ನಲ್ಲಿ ಅಪಾರ ಪ್ರಮಾಣದ ಡೀಸೆಲ್ ಆಯಿಲ್ ಇದೆ ಎಂದು ತಿಳಿದು ಬಂದಿದೆ. ದೂರದ ಸಮುದ್ರದಲ್ಲಿ ಮೂರಿಂಗ್ ಸೆಂಟರ್ ಇದ್ದು ತೈಲ ಕಚ್ಚಾ ಸರಕು ಹೊತ್ತು ತರುವ ಬೃಹತ್ ಹಡಗುಗಳಿಗೆ ಈ ಟಗ್ ಗಳು ನೆರವು ನೀಡುವ ಕೆಲಸ ಮಾಡುತ್ತಿದೆ.
ಈ ಟಗ್ ಗುತ್ತಿಗೆ ಕಂಪನಿಯ ಗುತ್ತಿಗೆ ಕೊನೆಗೊಂಡಿದ್ದು, ನವಮಂಗಳೂರಿನ ಬಂದರಿನ ಹೊರ ವಲಯದಲ್ಲಿ ಆಂಕರ್ ಹಾಕುವಂತೆ ಬಂದರು ಮಂಡಳಿಯಿಂದ ಸೂಚಿಸಲಾಗಿತ್ತು. ಭಾರೀ ಗಾಳಿಗೆ ಆಂಕರ್ ತುಂಡಾಗಿ ಇದೀಗ ಕಾಪು ಸಮೀಪ ಕಾಣ ಬಳಿ ಅಪಘಾತಕ್ಕೀಡಾಗಿದೆ.
ಇದನ್ನೂ ಓದಿ: ಕೋಲಾರದಲ್ಲೂ ಬ್ಲಾಕ್ ಫಂಗಸ್ ಪತ್ತೆ: ಜಾಲಪ್ಪ ಆಸ್ಪತ್ರೆಯಲ್ಲಿ 12 ಮಂದಿಗೆ ಚಿಕಿತ್ಸೆ
ಕರಾವಳಿ ಕಾವಲು ಪಡೆ ಎಸ್ ಐ ಸುಜಾತ, ಕಾಪ್ ಎಸ್ ಐ ರಾಘವೇಂದ್ರ ಸಿ, ಕಾಪು ಕ್ರೈಂ ಎಸ್ ಐ ತಿಪ್ಪೇಶ್, ಗೃಹರಕ್ಷಕ ದಳ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ, ಕರಾವಳಿ ಕಾವಲು ಪಡೆ ಸಿಬ್ಬಂದಿ ಮತ್ತು ಬೋಟ್ ಗೆ ಸಂಬಂಧಪಟ್ಟ ಕಂಪೆನಿಯ ಅಧಿಕಾರಿಗಳು, ಕಾಪು ಲೈಟ್ ಹೌಸ್ ಬಳಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ: ದೇಶದಲ್ಲಿಂದು 3,11,170 ಕೋವಿಡ್ ಪಾಸಿಟಿವ್, 3,62,437 ಮಂದಿ ಡಿಸ್ಚಾರ್ಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.