ಅಪಾಯದಲ್ಲಿ ಉದ್ಯಾವರ ಬೊಳ್ಜೆ – ಮಣಿಪುರ ಸಂಪರ್ಕ ಸೇತುವೆ
Team Udayavani, Dec 26, 2018, 2:05 AM IST
ಕಟಪಾಡಿ: ಉದ್ಯಾವರ ಬೊಳ್ಜೆ-ಮಣಿಪುರವನ್ನು ಸಂಪರ್ಕಿಸುವ ಪಾಪನಾಶಿನಿ ಹೊಳೆಗೆ ಅಡ್ಡಲಾಗಿ ನಿರ್ಮಿಸಿರುವ ಕಾಲು ಸೇತುವೆಯೊಂದು ಬಳಕೆಗೆ ಅಪಾಯಕಾರಿಯಾಗಿ ಪರಿಣಮಿಸಿದ್ದು ಯಾವುದೇ ಕ್ಷಣದಲ್ಲೂ ಕುಸಿಯುವ ಸ್ಥಿತಿಯಲ್ಲಿದೆ. ಈ ಬಾರಿಯ ಮಳೆಗಾಲದಲ್ಲಿ ಇದಕ್ಕೆ ತೀವ್ರ ಹಾನಿ ಉಂಟಾಗಿತ್ತು. ನೆರೆ ನೀರಿನ ರಭಸಕ್ಕೆ ಸೇತುವೆಯ ಇಕ್ಕೆಲಗಳಲ್ಲಿ ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಹಿಡಿಕೆಗಳು ಬುಡ ಸಮೇತ ಕಿತ್ತು ಬಂದು ಅಲ್ಲಲ್ಲಿ ನೇತಾಡುತ್ತಿವೆ.
ಮಳೆಗಾಲದಲ್ಲಿ ಮತ್ತಷ್ಟು ಸಂಕಷ್ಟ
ಈ ಭಾಗದಲ್ಲಿ ಉಪ್ಪು ನೀರಿನ ತಡೆ ಮತ್ತು ಕೃಷಿ ಚಟುವಟಿಕೆಗೆ ಸಾಕಷ್ಟು ಪ್ರಯೋಜನಕಾರಿಯಾಗಿರುವ ಈ ಸೇತುವೆ ಉದ್ಯಾವರ ಮತ್ತು ಮಣಿಪುರ ಗ್ರಾಮವನ್ನು ಸಂಪರ್ಕಿಸುತ್ತದೆ. ಇದೀಗ ಶಿಥಿಲಗೊಂಡಿರುವ ಸೇತುವೆಯನ್ನು ಸರಿಪಡಿಸದಿದ್ದಲ್ಲಿ ಮುಂದಿನ ಮಳೆಗಾಲದಲ್ಲೂ ಸಂಕಷ್ಟವನ್ನು ಈ ಭಾಗದ ಜನತೆ ಎದುರಿಸಬೇಕಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇಲ್ಲಿ ಕೃಷಿಕರು ಹೆಚ್ಚಾಗಿದ್ದು ಅಂಗನವಾಡಿಯೊಂದು ಈ ಭಾಗದಲ್ಲಿ ಕಾರ್ಯಾಚರಿಸುತ್ತಿದೆ. ಈ ಸೇತುವೆಯನ್ನೇ ಸಂಪರ್ಕಕ್ಕಾಗಿ ಅನಿವಾರ್ಯವಾಗಿ ಬಳಸುತ್ತಿದ್ದಾರೆೆ.
ಶಿಥಿಲ ಸೇತುವೆ ವಿಸ್ತರಿಸಿ
ಈಗ ಶಿಥಿಲಗೊಂಡಿರುವ ಹಳೆಯದಾದ ಸೇತುವೆಯ ವಿಸ್ತರಣೆ ಮಾಡಿ ಸೂಕ್ತ ಸುರಕ್ಷತೆ ಕಲ್ಪಿಸಬೇಕು ಎಂದು ಸ್ಥಳೀಯ ಮಣಿಪುರ ರತ್ನಾಕರ್ ಸಾಲ್ಯಾನ್ ಬೇಡಿಕೆಯನ್ನಿರಿಸಿದ್ದಾರೆ.
ದೇವೇಗೌಡರಿಂದ ಉದ್ಘಾಟನೆ
ಈ ಸೇತುವೆಯು ಉಪ್ಪು ನೀರಿನ ತಡೆ ಮತ್ತು ಕಾಲುಸಂಕವಾಗಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲ್ಪಟ್ಟಿದ್ದು 1986ರಲ್ಲಿ ಅಂದಿನ ಲೋಕೋಪಯೋಗಿ ಮತ್ತು ನೀರಾವರಿ ಸಚಿವರಾಗಿದ್ದ
– ಎಚ್.ಡಿ. ದೇವೇಗೌಡ (ಮಾಜಿ ಪ್ರಧಾನಿ) ಉದ್ಘಾಟಿಸಿದ್ದರು.
ಶಿಥಿಲವಾಗಿಲ್ಲ
ಈ ಸೇತುವೆ ದುರಸ್ತಿ ಬಗ್ಗೆ ಎಸ್ಟಿಮೇಟ್ ಸಿದ್ಧಪಡಿಸಲಾಗಿದೆ. ಜನವರಿಯೊಳಗಾಗಿ ಸುರಕ್ಷತಾ ಕಾಮಗಾರಿ ಕೈಗೊಳ್ಳಲಾಗುತ್ತದೆ. ಕಾಲು ಸಂಕ ಶಿಥಿಲವಾಗಿಲ್ಲ. ಪ್ರಕೃತಿ ವಿಕೋಪದಡಿ 4 ಲ.ರೂ. ಅನುದಾನ ಬಳಸಿಕೊಂಡು ಹ್ಯಾಂಡಲ್ಸ್ ಅಳವಡಿಸಿ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು.
– ದೇವಾನಂದ್, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ
ಪರಿಶೀಲನೆ
ಮಳೆಗಾಲದ ನೆರೆಯಿಂದ ಸೇತುವೆಗೆ ಭಾರೀ ಹಾನಿಗೀಡಾಗಿದ್ದು, ಸ್ಥಳೀಯ ವಾರ್ಡ್ ಸದಸ್ಯರ ಜತೆ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಸೂಕ್ತ ಕ್ರಮಕ್ಕಾಗಿ ಸಣ್ಣ ನೀರಾವರಿ ಇಲಾಖೆಯ ಗಮನಕ್ಕೆ ವರದಿ ಕಳುಹಿಸಿಕೊಡಲಾಗಿದೆ. ನೆರೆಯ ಮಣಿಪುರ ಗ್ರಾಮದ ಅಧಿಕಾರಿಯೂ ಈ ಬಗ್ಗೆ ವರದಿಯನ್ನು ಇಲಾಖೆಗೆ ಕಳುಹಿಸಿ ಜನರಿಗಾಗುವ ಸಮಸ್ಯೆ ಬಗ್ಗೆ ಗಮನಕ್ಕೆ ತಂದಿದ್ದಾರೆ.
– ರಮಾನಂದ ಪುರಾಣಿಕ್, ಉದ್ಯಾವರ ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.