ಹಾಲಿವುಡ್ – ಟಾಲಿವುಡ್‌ನಲ್ಲಿ ಮೋಡಿ ; ಕರಾವಳಿಯ ಬೆಡಗಿ ಪೂಜಾ ಹೆಗ್ಡೆ
Team Udayavani, Aug 31, 2017, 7:20 AM IST
ಕಾಪು : ಹಾಲಿವುಡ್, ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್‌ನಲ್ಲಿ ಇತಿಹಾಸ ಸೃಷ್ಟಿಸುತ್ತಿರುವ ತುಳುನಾಡಿನ ಬೆಡಗಿಯರಾದ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೋಣೆ ಸಹಿತ ಹಲವು ಮಂದಿ ಬಾಲಿವುಡ್ ಹಾಟ್ ಹಾಟ್ ಬೆಡಗಿಯರ ಸಾಲಿಗೆ ಕರಾವಳಿಯ ಮತ್ತೋರ್ವ ಯುವ ನಟಿ ಪೂಜಾ ಹೆಗ್ಡೆಯೂ ಸೇರ್ಪಡೆಯಾಗುತ್ತಿದ್ದಾಳೆ.
ಕಾರ್ಕಳ ಬೈಲೂರಿನ ಕಣಂಜಾರು ಮಟ್ಟದಮನೆ ಮಂಜುನಾಥ ಹೆಗ್ಡೆ ಮತ್ತು ಪಾಂಗಾಳ ಆರ್ಯಾಡಿ ಹೊಸ ಮನೆಯ ಲತಾ ಹೆಗ್ಡೆ ದಂಪತಿಯ ಪುತ್ರಿಯಾಗಿರುವ ಪೂಜಾ ಹೆಗ್ಡೆ ಖ್ಯಾತ ನಟ ಹೃತಿಕ್ ರೋಷನ್ ನಟನೆಯ ಮೊಹೆಂಜೋದಾರೋ, ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ದೇವುಡ ಜಗನ್ನಾಥಮ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಇಂಡಿಯಾ ಮಿಸ್ ಯೂನಿವರ್ಸ್ ನಲ್ಲಿ ರನ್ನರ್ ಅಪ್ ಆಗಿಯೂ ಮೂಡಿ ಬಂದಿದ್ದ ಪೂಜಾ ಹೆಗ್ಡೆ ಮಾಡೆಲಿಂಗ್ ಜಗತ್ತಿನಲ್ಲಿ ಹೆಸರು ಗಳಿಸಿದ ಬಳಿಕ ಸಹಜವಾಗಿಯೇ ಬಾಲಿವುಡ್ ಮತ್ತು ಸೌತ್ ಇಂಡಸ್ಟ್ರಿಯಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ಸದ್ಯ ತೆಲುಗು ಸಿನಿಮಾವೊಂದರಲ್ಲಿ ನಟಿಸುತ್ತಿರುವ ಈಕೆ ಮೂರು ಹಿಂದಿ ಸ್ಕ್ರಿಪ್ಟ್ ಗಳನ್ನು ಓದುತ್ತಿದ್ದು, ಅದರಲ್ಲಿ ತನಗೆ ಹಿಡಿಸುವ ಸಿನಿಮಾವನ್ನು ಫೆ„ನಲ್ ಮಾಡುವ ಇರಾದೆ ಹೊಂದಿದ್ದಾರೆ. ಅವಕಾಶ ಸಿಕ್ಕಿದರೆ ಮತ್ತು ಉತ್ತಮ ಕಥೆಯಾಗಿದ್ದರೆ ಕನ್ನಡ ಮತ್ತು ತುಳು ಸಿನಿಮಾಗಳಲ್ಲೂ ನಟಿಸುವ ಬಯಕೆ ತೋರಿದ್ದಾರೆ.
ಒಳಿತು ಮಾಡು ಭಗವಂತಾ
ಕುಂಜೂರಿನಲ್ಲಿರುವ ತನ್ನ ತಾಯಿಯ ಮಾವ ದಾಮೋದರ ಶೆಟ್ಟಿ ಅವರ ಮನೆಗೆ ಬಂದಿದ್ದ ಪೂಜಾ ಹೆಗ್ಡೆ ಅವರು ಬಳಿಕ ತನ್ನ ನೆಂಟರ ಮನೆ, ಮೂಲ ದೆ„ವ, ಹಿರಿಯರ ಮನೆ, ಕಾಪು ಮಾರಿಗುಡಿ, ಸನ್ಯಾಸಿಕಟ್ಟೆ ಕೋರªಬ್ಬು ದೈವಸ್ಥಾನ ಸಹಿತ ಹಲವೆಡೆಗೆ ಪೂಜೆ ಪೂರೈಸಿ ಮುಂದಿನ ಭವಿಷ್ಯಕ್ಕೆ ಒಳಿತು ಮಾಡು ಭಗವಂತಾ ಎಂದು ಪ್ರಾರ್ಥಿಸಿದ್ದಾರೆ.
ಕೋಳಿಯೂಟ ಸವಿಯುಂಡ ಪೂಜಾ
ಕಾರ್ಕಳ, ಕಾಪು, ಎಲ್ಲೂರು ಸಹಿತವಾಗಿ ಹುಟ್ಟೂರಿನ ದೈವ-ದೇವರಿಗೆ ಪೂಜೆ ಸಲ್ಲಿಸಿ ಪೂಜಾ ಹೆಗ್ಡೆ ಖುಷಿ ಪಟ್ಟರೆ, ಮಗಳಿಗೆ ದೆ„ವ- ದೇವರ ದರ್ಶನ ಮಾಡಿಸಿ, ಊರಿನ ಕೋಳಿಯೂಟದ ಸವಿಯುಣಿಸಿದ ಬಗ್ಗೆ ತಾಯಿ ಸಂಭ್ರಮಿಸಿದ್ದಾರೆ.
ತುಳು ಚಿತ್ರರಂಗದಲ್ಲಿ ಮೆಚ್ಚುಗೆ
ತುಳು ಚಿತ್ರರಂಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಪೂಜಾ ಹೆಗ್ಡೆ ಇತೀ¤ಚಿನ ದಿನಗಳಲ್ಲಿ ತುಳು ಚಿತ್ರಗಳು ಹೆಚ್ಚು ಹೆಚ್ಚಾಗಿ ಬಿಡುಗಡೆ ಯಾಗುತ್ತಿ ರುವುದು ತುಳುವರಿಗೇ ಹೆಮ್ಮೆಯಾಗಿದೆ. ತುಳು ಚಿತ್ರಗಳನ್ನು ವೀಕ್ಷಿಸಲು ದೇಶ-ವಿದೇಶಗಳಲ್ಲೂ ಜನ ಮುಗಿಬೀಳುತ್ತಿದ್ದಾರೆ. ಎಂಕುಲಾ ತುಳು ಮಸ್ಟ್ ಇಷ್ಟ ಎಂದು ಹೇಳಿದ ಅವರು ಆ ಮೂಲಕ ಕೋಸ್ಟಲ್ ವುಡ್ ಚಿತ್ರರಂಗ ಇನ್ನಷ್ಟು ಬೆಳೆಯಲಿ ಎಂದರು.
ದೊಡ್ಡ ಕಸನು
ನನಗೆ ಚಿತ್ರರಂಗದಲ್ಲಿ ಸಾಕಷ್ಟು ಸಾಧನೆ ಮಾಡಬೇಕೆಂಬ ಹಂಬಲವಿದೆ. ಉತ್ತಮ ಚಿತ್ರಗಳ ಮೂಲಕ ಹೆಸರು ಗಳಿಸಬೇಕೆನ್ನುವುದು ನನ್ನ ಬಲು ದೊಡ್ಡ ಕನಸಾಗಿದೆ. ನಾನು ಕಂಡಿರುವ ಕನಸುಗಳನ್ನು ನನಸಾಗಿಸುವುದಷ್ಟೇ ನನ್ನ ಸದ್ಯದ ಗುರಿಯಾಗಿದೆ. ಮದುವೆಯ ಬಗ್ಗೆ ಯೋಚಿಸಲು ನಾನಿನ್ನೂ ಚಿಕ್ಕವಳು. ಆ ಬಗ್ಗೆ ತನಗಿನ್ನೂ ಯಾವುದೇ ಯೋಚನೆಗಳಿಲ್ಲ. ಎಂದು ಹೇಳಿದ ಅವರು ಅದನ್ನೆಲ್ಲಾ ತಂದೆ – ತಾಯಿಯೇ ನಿರ್ಧರಿಸುತ್ತಾರೆ ಎಂದು ಮಾತಿಗೆ ಬ್ರೇಕ್ ಹಾಕಿದರು.
ಫುಲ್ ಖುಷ್
ಬಾಲಿವುಡ್ ನಟಿ ಪೂಜಾ ಹೆಗ್ಡೆ ಕಾಪು ಹೊಸ ಮಾರಿಗುಡಿ ಮತ್ತು ಮಾರಿಗುಡಿ ಸಮೀಪದ ಗಣೇಶ ಪೆಂಡಾಲ್‌ಗೆ ಭೇಟಿ ನೀಡಿದ ಸಂದರ್ಭ ಅವರನ್ನು ಕಂಡು ಮಾತನಾಡಿಸಿದ ಮಾರಿಗುಡಿಗೆ ಬಂದ ಭಕ್ತರು ಮತ್ತು ಗಣೇಶ ಹಬ್ಬದ ವೇಷಧಾರಿಗಳು ಫುಲ್ ಖುಷ್ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.