ಶಿರ್ವ: ಪಾಳು ಬಿದ್ದ ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯ
Team Udayavani, Jul 29, 2017, 8:05 AM IST
ಶಿರ್ವ: ಸುಮಾರು ದಶಕಗಳ ಹಿಂದೆ ನಿರ್ಮಾಣಗೊಂಡ ಶಿರ್ವ ತೊಟ್ಲಗುರಿ ಬಂಗ್ಲೆ ಮೈದಾನದಲ್ಲಿರುವ ಜಿ.ಪಂ.ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾಕ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವು ಇಂದು ಶಿರ್ವ ಗ್ರಾಮ ಪಂಚಾಯತ್‌ಆಡಳಿತದ ನಿರ್ಲಕ್ಷದಿಂದ ಶಿಥಿಲಗೊಂಡು ಪಾಳು ಬಿದ್ದಿದೆ.ಹಲವಾರು ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಈ ಹಾಸ್ಟೆಲ್ ಕಟ್ಟಡ ಪಾಳು ಬಿದ್ದಿರುವುದು ಮಾತ್ರ ದುರದೃಷ್ಟಕರ.
ಬಡ ವಿದ್ಯಾರ್ಥಿಗಳ ಆಶಾಕಿರಣ
ಶಿರ್ವ ಪರಿಸರ ಹಾಗೂ ದೂರದ ಊರುಗಳ ಹಲವಾರು ಬಡ ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿ ವಾಸ್ತವ್ಯ ಹೊಂದಿ ಪರಿಸರದ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಜನೆಗೈದು ದೇಶ ವಿದೇಶಗಳಲ್ಲಿ ಉದೋÂಗದಲ್ಲಿದ್ದಾರೆ. ದಶಕಗಳ ಹಿಂದೆ ಈ ವಸತಿ ನಿಲಯದಲ್ಲಿ ಸುಮಾರು 60 ರಿಂದ 80 ಸಂಖ್ಯೆಯ ವಿದ್ಯಾರ್ಥಿಗಳು ವಾಸ್ತವ್ಯವಿದ್ದು ಇಬ್ಬರು ವಾರ್ಡನ್‌ಗಳು ಮತ್ತು ಓರ್ವ ಅಡುಗೆಯವರು ಇದ್ದರು. ಬದಲಾದ ಕಾಲಘಟ್ಟದಲ್ಲಿ ಆಂಗ್ಲ ಮಾಧ್ಯಮದ ವ್ಯಾಮೋಹದಿಂದಾಗಿ ಹಾಸ್ಟೆಲ್‌ನಲ್ಲಿದ್ದು ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದು ಕ್ರಮೇಣ ಮುಚ್ಚಲ್ಪಟ್ಟಿತ್ತು.
ಗ್ರಾ.ಪಂ.ಗೆ ಹಸ್ತಾಂತರ
2008ರಲ್ಲಿ ಜಿ.ಪಂ.ಅನುದಾನದಿಂದ ಹಳೆ ಕಟ್ಟಡದ ದುರಸ್ತಿ ಮಾಡಿ ಸುಣ್ಣಬಣ್ಣ ಬಳಿದು ಆವರಣ ಗೋಡೆ ನಿರ್ಮಿಸಿ ಬಾಲಕರ ಸುಸಜ್ಜಿತ ಶೌಚಾಲಯದೊಂದಿಗೆ ಹೊಸ ಆರ್‌ಸಿಸಿ ಕೋಣೆ ಸೇರ್ಪಡೆಗೊಂಡು ಸುಸ್ಥಿತಿಯಲ್ಲಿತ್ತು. ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲ್ಪಟ್ಟ ಹಾಸ್ಟೆಲ್ ಕಟ್ಟಡವನ್ನು ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಶಿರ್ವ ಗ್ರಾ.ಪಂ.ಗೆ ಉಪಯೋಗವಾಗುವಂತೆ ಹಸ್ತಾಂತರಿಸಿದ್ದರು.ಸುಸ್ಥಿತಿಯಲ್ಲಿದ್ದ ಕಟ್ಟಡವನ್ನು ಉಪಯೋಗಿಸುವ ಬದ್ಧತೆ ತೋರದೆ ಗ್ರಾ.ಪಂ.ನಿರ್ಲಕ್ಷé ವಹಿಸಿದೆ.
ಸ್ಥಳೀಯಾಡಳಿತದ ನಿರ್ಲಕ್ಷ
ಹಸ್ತಾಂತರಗೊಂಡ ಹಾಸ್ಟೆಲ್ ಕಟ್ಟಡವನ್ನು ಉಪಯೋಗ ಮಾಡುವು ದಾಗಲೀ ಯಾ ಸದ್ರಿ ಸ್ಥಳದಲ್ಲಿ ಕಟ್ಟಡ ಕೆಡವಿ ಯಾವುದೇ ನೂತನ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಆಸಕ್ತಿ ತೋರದೆ ಗ್ರಾ.ಪಂ.ಸಂಪೂರ್ಣ ನಿರ್ಲಕ್ಷé ವಹಿಸಿದೆ. ಹಳೆ ಕಟ್ಟಡಕ್ಕೆ ಹೊಂದಿಕೊಂಡು ನಿರ್ಮಿಸಿರುವ ಹೊಸ ಆರ್‌ಸಿಸಿ ಕಟ್ಟಡ ಕೂಡಾ ಉಪಯೋಗಕ್ಕೆ ಬಾರದೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಸುಮಾರು 25 ಲ.ರೂ.ಗಳ ಮೌಲ್ಯದ ಕಟ್ಟಡ ಸರಿಯಾದ ನಿರ್ವಹಣೆಯಿಲ್ಲದೆ ಸುತ್ತಮುತ್ತ ಪೊದೆ ಗಿಡ ಗಂಟಿ ಬೆಳೆದು ನಿರುಪಯುಕ್ತವಾಗಿದೆ. ಕಿಟಿಕಿ ಬಾಗಿಲುಗಳು ಮುರಿದಿದ್ದು, ಮಾಡಿನ ಹೆಂಚುಗಳು ಹಾರಿ ಹೋಗಿ ಮಳೆ ನೀರು ಬಿದ್ದು ಗೋಡೆಗಳು ಶಿಥಿಲಗೊಂಡು ಸಾರ್ವಜನಿಕರ ತೆರಿಗೆಯ ಹಣ ಪೋಲಾಗುತ್ತಿದೆ. ಒಂದು ಕಾಲದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ,ಚಟುವಟಿಕೆಯ ಕೇಂದ್ರವಾಗಿದ್ದ ಹಾಸ್ಟೆಲ್ ಕಟ್ಟಡ ಮತ್ತು ಧ್ವಜಸ್ತಂಭ ಪಾಳು ಬಿದ್ದು ಅನಾಥವಾಗಿದೆ.
ಅಕ್ರಮ ಚಟುವಟಿಕೆಗಳ ತಾಣ
ಸರಿಯಾದ ನಿರ್ವಹಣೆಯಿಲ್ಲದೆ ಕಟ್ಟಡದ ಕಿಟಿಕಿ ಬಾಗಿಲುಗಳು ಮುರಿದು ಹೋಗಿದ್ದು ಪಡ್ಡೆ ಹುಡುಗರ ಆಶ್ರಯ ತಾಣವಾಗಿದೆ. ಕಟ್ಟಡದ ಹಿಂಬದಿಯ ಬಾಗಿಲು ಮತ್ತು ಶೌಚಾಲಯದ ಬಾಗಿಲುಗಳು ಮುರಿದಿದ್ದು , ರಾತ್ರಿ ವೇಳೆಗೆ ಪಾಳು ಬಿದ್ದ ಕಟ್ಟಡ ಅನೈತಿಕ ಮತ್ತು ಅಕ್ರಮ ಚಟುವಟಿಕೆಗಳ ಕೇಂದ್ರವಾಗಿದೆ ಎಂದು ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬರುತ್ತಿದೆ.
ಶಿರ್ವ ಗ್ರಾ.ಪಂ.ಗೆ ಉಪಯೋಗಕ್ಕೆ ಬಾರದ ಈ ಕಟ್ಟಡವನ್ನು ಹಾಳುಗೆಡವದೆ ಶಾಸಕರು / ಜನಪ್ರತಿನಿಧಿಗಳು/ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ಮುಂದಿನ ದಿನಗಳಲ್ಲಿ ಕಾಪು ತಾಲೂಕು ಕೇಂದ್ರವಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ತಾಲೂಕು ಮಟ್ಟದ ಕಚೇರಿಗಳಿಗೆ ಅವಕಾಶ ಮಾಡಿಕೊಡಬೇಕೆಂಬುದು ಶಿರ್ವದ ನಾಗರಿಕರ ಆಶಯವಾಗಿದೆ.
ಕಟ್ಟಡದ ಬಗ್ಗೆ ಈಗಾಗಲೇ ಶಿರ್ವ ಗ್ರಾ.ಪಂ.ಆಡಳಿತದ ಗಮನಕ್ಕೆ ತಂದು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂ.ಅ.ಅಧಿಕಾರಿ ಮತ್ತು ಸದಸ್ಯರೊಂದಿಗೆ ಭೇಟಿ ನೀಡಿ ಪರಿಶೀಲಿಸಿದೇªವೆ. ಹಳೇ ಕಟ್ಟಡದ ದುರಸ್ತಿ ಯಾ ಕೆಡವಿ ಬೇರೆ ಕಟ್ಟಡ ಕಟ್ಟುವ ಬಗ್ಗೆ ಮತ್ತು ಹಳೆ ಕಟ್ಟಡಕ್ಕೆ ತಾಗಿ ನಿರ್ಮಿಸಿರುವ ಹೊಸ ಆರ್‌ಸಿಸಿ ಕಟ್ಟಡವನ್ನು ಉಳಿಸಿ ಗ್ರಾ.ಪಂ.ಗೋಡೌನ್ ಆಗಿ ಬಳಸುವಂತೆ ಸಲಹೆ ನೀಡಿದೇªನೆ.ಆದರೆ ಯಾವುದೇ ಸಲಹೆ ಈವರೆಗೆ ಕಾರ್ಯಗತವಾಗಿಲ್ಲ. ಕಟ್ಟಡಕ್ಕೆ ನೀರು ಸರಬರಾಜು ಆಗುತ್ತಿದ್ದ ಬಾವಿಯನ್ನು ಮುತುವರ್ಜಿ ವಹಿಸಿ ಶಾಸಕ ವಿನಯ ಕುಮಾರ್ ಸೊರಕೆಯವರ ಅನುದಾನದಿಂದ ದುರಸ್ತಿಗೊಳಿಸಿದೇªವೆ. ಪಂಪುಸೆಟ್, ಪೈಪ್‌ಲೈನ್ ಅಳವಡಿಸಿ ಸಾರ್ವಜನಿಕ ನೀರಿನ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸಿ ಶಿರ್ವ ಪೇಟೆಗೆ ಕುಡಿಯುವ ನೀರಿನ ಸರಬರಾಜು ಮಾಡಿ ಸಾರ್ವಜನಿಕರ ಉಪಯೋಗಕ್ಕಾಗಿ ಅವಕಾಶ ಕಲ್ಪಿಸಿ ಕೊಡಲಾಗಿದೆ.
– ವಿಲ್ಸನ್ ರೊಡ್ರಿಗಸ್, ಜಿ.ಪಂ.ಸದಸ್ಯರು,ಶಿರ್ವ ಕ್ಷೇತ್ರ
ಹಲವಾರು ವರುಷಗಳಿಂದ ನೆನೆಗುದಿಗೆ ಬಿದ್ದಿರುವ ಬಂಗ್ಲೆ ಮೈದಾನಕ್ಕೆ ಬರುವ ರಸ್ತೆಯನ್ನು ಡಾಮರೀಕರಣಗೊಳಿಸಿದರೆ ಉತ್ತಮ. ಈ ಪರಿಸರದಲ್ಲಿ ಮಾಲಿನ್ಯರಹಿತ ವಾತಾವರಣವಿರುವುದರಿಂದ ಸುಸಜ್ಜಿತ ಪಾರ್ಕ್ ನಿರ್ಮಿಸಿ ಸಾರ್ವಜನಿಕರಿಗೆ/ಮಕ್ಕಳಿಗೆ ವಾಯುವಿಹಾರಕ್ಕಾಗಿ ಅವಕಾಶ ಕಲ್ಪಿಸಬಹುದು.
– ಹರೀಶ್ ಆಚಾರ್ಯ, ಸ್ಥಳೀಯ ನಿವಾಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.