ಮಕ್ಕಳ ಆಟಕ್ಕೆ ಸಜ್ಜಾದ ಬ್ರಹ್ಮಗಿರಿ ಮಕ್ಕಳ ಪಾರ್ಕ್
ಬೆಳೆದು ನಿಂತ ಗಿಡಗಂಟಿ ತೆರವು
Team Udayavani, Oct 12, 2021, 5:29 AM IST
ಉಡುಪಿ: ನಗರದ ಬ್ರಹ್ಮಗಿರಿ -ಬನ್ನಂಜೆ ಮಾರ್ಗದ ಉಡುಪಿ ತಾ.ಪಂ. ವ್ಯಾಪ್ತಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಸಮೀಪದ ಮಕ್ಕಳ ಆಟದ ಪಾರ್ಕ್‌ನಲ್ಲಿ ಬೆಳೆದು ನಿಂತ ಗಿಡಗಂಟಿಗಳನ್ನು ತೆರವುಗೊಳಿಸಿದ್ದು, ಮಕ್ಕಳ ಆಟವಾಡಲು ಪಾರ್ಕ್ ಸಿದ್ಧಗೊಂಡಿದೆ.
ಪಾರ್ಕ್‌ಗೆ ಬೇಡಿಕೆ
ನಗರದಲ್ಲಿ ಅಜ್ಜರಕಾಡು ಪಾರ್ಕ್ ಹೊರತುಪಡಿಸಿದರೆ, ಬನ್ನಂಜೆ ಬಾಲ ಭವನದಲ್ಲಿರುವ ಮಕ್ಕಳ ಪಾರ್ಕ್‌ಗೆ ಬೇಡಿಕೆ ಇದೆ. ಈ ಹಿಂದೆ ಮಕ್ಕಳ ಆಟದ ಪರಿಕರಗಳಿರುವ ಜಾಗದಲ್ಲಿ ಪೊದೆಗಳು ಬೆಳೆದು ನಿಂತಿದ್ದವು. ಇದರಲ್ಲಿ ವಿಷ ಜಂತುಗಳು ಅಡಗಿ ಮಕ್ಕಳ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಿತ್ತು.
ಸುದಿನ ವರದಿ
ಬ್ರಹ್ಮಗಿರಿ ಮಕ್ಕಳ ಪಾರ್ಕ್‌ನಲ್ಲಿ ಬೆಳೆದು ನಿಂತ ಗಿಡಗಂಟಿಗಳು ಹಾಗೂ ಅದರಿಂದಾಗುವ ಪರಿಣಾಮಗಳ ಬಗ್ಗೆ ಉದಯವಾಣಿ ಸುದಿನ “ಮಕ್ಕಳ ಜೀವಕ್ಕೆ ಕಂಟಕವಾದ ಬ್ರಹ್ಮಗಿರಿ ಪಾರ್ಕ್’ ಎನ್ನುವ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಪ್ರಕಟಗೊಳ್ಳುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಇಲಾಖೆ ಪಾರ್ಕ್ ಅನ್ನು ಸ್ವಚ್ಛಗೊಳಿಸಲು ಮುಂದಾಗಿದೆ.
ಇದನ್ನೂ ಓದಿ:ಕಮಲ್ ಪುತ್ರ ಬಕುಲ್‌ನಾಥ್ ವಿರುದ್ಧ ಹೊಸ ಸಾಕ್ಷ್ಯ ಬಿಚ್ಚಿಟ್ಟ “ಪಂಡೊರಾ’
ಮಕ್ಕಳ ಸಂಖ್ಯೆ ಹೆಚ್ಚಳ
ಪ್ರಸ್ತುತ ಮಕ್ಕಳಿಗೆ ಸಾಲು -ಸಾಲು ರಜೆ ಇರುವುದರಿಂದ ಪಾರ್ಕ್‌ಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಜ್ಜರಕಾಡು ಪಾರ್ಕ್‌ನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬ್ರಹ್ಮಗಿರಿಯ ಸಮೀಪದವರು ಬಾಲಭವನದ ಸಮೀಪ ಇರುವ ಪಾರ್ಕ್ ಕಡೆಗೆ ಮುಖ ಹಾಕುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ
Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.