ಪ್ರತಿಭಾನ್ವಿತರಿಗೆ ಪದಕ ಪ್ರದಾನ,ವಿದ್ಯಾರ್ಥಿ ವೇತನ ವಿತರಣೆ
Team Udayavani, Sep 12, 2017, 7:00 AM IST
ಕುಂಬಳೆ : ಬ್ರಹ್ಮಶ್ರೀ ನಾರಾಯಣಗುರು ಯುವವೇದಿಕೆ ಜಿಲ್ಲಾ ಸಮಿತಿ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜನ್ಮ ದಿನಾಚರಣೆ ಮತ್ತು 9ನೇ ವರ್ಷದ ಸೋಣದ ಪರ್ಬ ಮತ್ತು ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಂಗಾರ ಮತ್ತು ಬೆಳ್ಳಿ ಗುರುಪದಕ ಪ್ರದಾನ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ಮಂಜೇಶ್ವರ ಹೊಸಂಗಡಿ ಹಿಲ್‌ಸೈಡ್ ಸಭಾಭವನದಲ್ಲಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಬೆಳಗ್ಗೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಯಾವರ ಮಾಡಕ್ಷೇತ್ರದ ಅರ್ಚಕ ಶ್ರೀ ತಿಮ್ಮಪ್ಪ ಕಾಂಜ ವಿಧ್ಯುಕ್ತವಾಗಿ ನೆರವೇರಿಸಿದರು.ಬಳಿಕ ಮಕ್ಕಳು ಮಹಿಳೆಯರ ಸಹಿತ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಜರಗಿದವು. ಕಾರ್ಯಕ್ರಮದ ಅಂಗವಾಗಿ ಜರಗಿದ ಸಮಾರಂಭದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಜಿಲ್ಲಾಧ್ಯಕ್ಷ ಧಾರ್ಮಿಕ ಸಮಾಜಿಕ ಮುಂದಾಳು ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು ವಹಿಸಿದರು. ಪುತ್ತೂರು ಗೆಜ್ಜೆಗಿರಿ ನಂದನಹಿತ್ತಿಲು ಮತ್ತು ಮಂಗಳೂರು ಕಂಕನಾಡಿ ಗರೋಡಿ ಕ್ಷೇತ್ರಗಳ ಆಡಳಿತ ಮಂಡಳಿ ಅಧ್ಯಕ್ಷ ಚಿತ್ತರಂಜನ್ ತೆಂಗಿನ ಹಿಂಗಾರ ಅರಳಿಸಿ ಕಾರ್ಯ ಕ್ರಮವನ್ನು ಸಾಂಪ್ರದಾಯಿಕ ವಾಗಿ ಉದ್ಘಾಟಿಸಿದರು.
ಬಿಲ್ಲವ ರಾಷ್ಟ್ರೀಯ ಮಂಡಳಿಯ ಗೌರವ ಸಲಹೆಗಾರ ಡಿ.ಡಿ. ಕಟ್ಟೇಮಾರ್, ಮಂಗಳೂರು ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ| ಗಂಗಾಧರ್, ಕರ್ನಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಭಾಸ್ಕರ್ ಬಪ್ಪಳಿಗೆ, ಮಾಡೂರು ಶ್ರೀಶಿರಡಿ ಸಾಯಿಬಾಬಾ ಮಂದಿರದ ಆಡಳಿತ ಮೊಕ್ತೇಸರ ಸುರೇಶ್ ಕೆ.ಪಿ., ಮಂಗಲ್ಪಾಡಿ, ಅಂಬಾರು ಶ್ರೀ ಸದಾಶಿವ ಕೇÒತ್ರದ ಆಡಳಿತ ಮೊಕ್ತೇಸರ ಡಿ. ಕೃಷ್ಣಪ್ಪ ಪೂಜಾರಿ ದೇರಂಬಳ, ಬಿಲ್ಲವ ಮುಂದಾಳುಗಳಾದ ಲವ ಎಂ. ಕಾಸರಗೋಡು, ಶೇಖರ ಪೂಜಾರಿ, ಬಂಟಪ್ಪ ಮಾಸ್ಟರ್ ಕಳಿಯೂರು, ಚಂದ್ರಹಾಸ ಪೂಜಾರಿ ಅತಿಥಿಗಳಾಗಿ ಭಾಗವಹಿಸಿದರು.
ಸಮಾರಂಭದಲ್ಲಿ ಕಳೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 95 ಶೇ. ಅಂಕಗಳಿಸಿದ ರಕ್ಷಿತಾ ಕೆ. ಅಡ್ಕತ್ತಬೈಲು ಕಾಸರಗೋಡು ಅವರಿಗೆ ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು ಅವರ ವೈಯಕ್ತಿಕ ಕೊಡುಗೆಯಾಗಿ ಚಿನ್ನದ ಪದಕ ಪ್ರದಾನ ಮಾಡಲಾಯಿತು. 92 ಶೇಕಡಾ ಅಂಕ ಗಳಿಸಿದ ರಮ್ಯಾ ಅರಿಬೈಲು ಅವರಿಗೆ ಬೆಳ್ಳಿಯ ಪದಕ ಮತ್ತು ಸಮಾಜದ ಆಯ್ದ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಅಲ್ಲದೆ ಖ್ಯಾತ ಜೋತಿಷಿ ಜಯಶಂಕರ್ ಮಂಜೇಶ್ವರ, ಹವ್ಯಾಸಿ ಯಕ್ಷಗಾನ ಕಲಾವಿದ ಗಣೇಶ್ ಬಿ. ಕುಂಜತ್ತೂರು ಮತ್ತು ಕೃಷಿಕ ರಾಮ ಪೂಜಾರಿ ಎಲಿಯಾಣ ದಂಪತಿಯನ್ನು ಸಮ್ಮಾನಿಸಲಾಯಿತು.
ಶಾಂತಾರಾಂ ಹೊಸಬೆಟ್ಟು,ರಾಮಕೃಷ್ಣ ಸಂತಡ್ಕ ಮತ್ತು ಅಶ್ವಿನ್ ಕಲ್ಲಗದ್ದೆ ಸಮ್ಮಾನಿತರ ಸಮ್ಮಾನಪತ್ರಗಳನ್ನು ವಾಚಿಸಿದರು. ರಮೇಶ್ ಸಂತಡ್ಕ ಗುರುಪೂಜೆ ನೆರವೇರಿ ಸಿದರು. ಹರೀಶ್ ಸುವರ್ಣ ಹೊಸಬೆಟ್ಟು ವರದಿ ವಾಚಿಸಿದರು. ಕೃಷ್ಣಪ್ಪ ಪೂಜಾರಿ ಬಡಾಜೆ ಸ್ವಾಗತಿಸಿದರು. ದಿನೇಶ್ ಮಂಗ ಲ್ಪಾಡಿ ವಂದಿಸಿದರು. ರವಿ ಮುಡಿಮಾರು ಕಾರ್ಯಕ್ರಮ ರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.