ಬ್ರಹ್ಮಾವರ ಬಂಡೀಮಠ: ಶಿಲಾಶಾಸನ ಪತ್ತೆ
Team Udayavani, Apr 16, 2018, 7:50 AM IST
ಬ್ರಹ್ಮಾವರ: ಹನೆಹಳ್ಳಿ ಗ್ರಾಮದ ಬಂಡೀಮಠದ ಶಂಕರನಾರಾಯಣ ಭಟ್ ಅವರ ಗದ್ದೆಗೆ ಹೋಗುವ ದಾರಿ ಮಧ್ಯೆ ಸುಮಾರು 4 ಅಡಿ ಎತ್ತರ, ಎರಡೂವರೆ ಅಡಿ ಅಗಲದ ಶಿಲಾಶಾಸನ ಪತ್ತೆಯಾಗಿದೆ.
ಶಿವಲಿಂಗ, ನಂದಿ, ಖಡ್ಗ, ಸೂರ್ಯ, ಚಂದ್ರರನ್ನು ಒಳಗೊಂಡು ಹಳೆಗನ್ನಡದಲ್ಲಿ ಬರೆದಿರುವ ಶಾಸನವು ಗಣೇಶ್ರಾಜ್ ಸರಳೇಬೆಟ್ಟು ಅವರಿಗೆ ಕಾಣಸಿಕ್ಕಿದೆ. ಸ್ಥಳೀಯ ವ್ಯಕ್ತಿ ಯೋಗೀಶ್ ಪೂಜಾರಿ ಬಂಡೀಮಠ ಅವರು ಇಂತಹದೇ ಇನ್ನೂ ನಾಲ್ಕೈದು ಶಾಸನಗಳು ಹಿಂದೆ ಗದ್ದೆಯಲ್ಲಿ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ಶಿಲಾಶಾಸನ ಸಿಕ್ಕಿರುವ ಪ್ರದೇಶದ ಸುತ್ತಮುತ್ತ ಉಳುಮೆ ಮಾಡುವ ಗದ್ದೆಗಳಿದ್ದು, ಪಕ್ಕದಲ್ಲಿ ಸೀತಾನದಿ ಹರಿಯುತ್ತಿ¤ದೆ. ಈ ಹಿಂದೆ ಹಾವಂಜೆ ಗ್ರಾಮದ ಕೀಳಿಂಜೆ, ಕುಕ್ಕೆಹಳ್ಳಿ, ಬೆಳ್ಳಂಪಳ್ಳಿ, ನಾಯರ್ ತೋಟ ಮೊದಲಾದ ಕಡೆಗಳಲ್ಲಿ ಶಿಲಾಶಾಸನಗಳನ್ನು ಸ್ಥಳೀಯರ ಮಾಹಿತಿ ಮೇರೆಗೆ ಪತ್ತೆ ಹಚ್ಚಲಾಗಿದೆ ಎಂದು ಗಣೇಶ್ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.