ಬ್ರಹ್ಮಾವರ-ಬಾರಕೂರು ರಸ್ತೆ: ಇಕ್ಕೆಲ ಪ್ರಪಾತ
Team Udayavani, May 22, 2018, 2:45 AM IST
ಬ್ರಹ್ಮಾವರ: ಇಲ್ಲಿನ ಹಂದಾಡಿ ಯಿಂದ ಬಾರಕೂರು ತನಕ ರಸ್ತೆಯ ಇಕ್ಕೆಲಗಳಲ್ಲಿ ಕಡಿದಾದ ಕಣಿವೆ ಇರುವು ದರಿಂದ ಅವಘಡಕ್ಕೆ ನೇರ ಆಹ್ವಾನ ನೀಡುತ್ತಿದೆ.
ಬ್ರಹ್ಮಾವರದಿಂದ ಬರುವಾಗ ಬಾರಕೂರು ಚಿಕ್ಕ ಸೇತುವೆಯಿಂದ ದೊಡ್ಡ ಸೇತುವೆ ತನಕ ಸುಮಾರು 1 ಕಿ.ಮೀ. ದೂರ ಎರಡೂ ಕಡೆ 40 ಅಡಿ ಪ್ರಪಾತವಿದೆ. ಆದರೆ ಎಲ್ಲಿಯೂ ತಡೆಗೋಡೆ ನಿರ್ಮಿಸದೆ ಭಾರೀ ಅನಾಹುತಕ್ಕೆ ಎಡೆ ಮಾಡಿದೆ.
ಸಮಸ್ಯೆ ಉಲ್ಬಣ
ಇತ್ತೀಚೆಗೆ ರಸ್ತೆ ದುರಸ್ತಿ ನಡೆಯುವಾಗ ಮೊದಲಿಗಿಂತ ಸ್ವಲ್ಪ ವಿಸ್ತರಿಸಲಾಯಿತು. ಇಕ್ಕೆಲಗಳಲ್ಲಿ ಮಣ್ಣು ತುಂಬಿಸದೆ ಇದ್ದ ರಸ್ತೆಯನ್ನೇ ಅಗಲಗೊಳಿಸಿದ ಪರಿಣಾಮ ವಾಹನ ಸವಾರರಿಗೆ ಪ್ರಪಾತಕ್ಕೆ ಮುಗ್ಗರಿಸಿದ ಅನುಭವಾಗುತ್ತಿದೆ. ಅಲ್ಲದೆ ರಸ್ತೆ ಸ್ವಲ್ಪ ಎತ್ತರಗೊಂಡಿದ್ದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ.
ಘನ ವಾಹನ ಸಂಚರಿಸಿದಾಗ ದ್ವಿಚಕ್ರ ವಾಹನ ಸವಾರರಿಗೆ ಜೀವವೇ ಬಾಯಿಗೆ ಬಂದಂತಾಗುತ್ತದೆ.ಕಾಮಗಾರಿಗೆ ಮೊದಲು ಸಾಲಾಗಿ ಇದ್ದ ಕಲ್ಲುಗಳಾದರೂ ಸ್ವಲ್ಪ ಮಟ್ಟಿನ ಆಸರೆಯಾಗಿತ್ತು. ಆದರೆ ಕಾಮಗಾರಿ ವೇಳೆ ಕೆಲವು ಕಲ್ಲುಗಳೂ ಕಣ್ಮರೆಯಾಗಿವೆ.
ಇಕ್ಕೆಲಗಳಲ್ಲಿ ಇದ್ದ ಸ್ವಲ್ಪ ಜಾಗವನ್ನೂ ಆಕ್ರಮಿಸಿ ಅಂಚಿನ ವರೆಗೂ ರಸ್ತೆ ನಿರ್ಮಿ ಸಿದ್ದರಿಂದ ಪಾದಚಾರಿಗಳು ಸಂಚರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣ ವಾಗಿದೆ.
ಪ್ರಯಾಣಿಕರ ಸ್ಥಿತಿ
ಮಟಪಾಡಿ ಕುದ್ರು ನಿವಾಸಿಗಳು ಬಸ್ ಏರಲು ಮತ್ತು ಇಳಿಯಲು ಪಡುವ ಪಾಡು ಹೇಳ ತೀರದು. ನಿಲ್ಲಲು ಜಾಗವೇ ಇಲ್ಲದ ಕಾರಣ ಮಹಿಳೆಯರು, ವಯಸ್ಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜತೆಗೆ ಎರಡು ಸಂಪರ್ಕ ದಾರಿಯನ್ನು ಮುಚ್ಚಿ ರಸ್ತೆ ನಿರ್ಮಿಸಲಾಗಿದೆ.
ಕೆರೆ,ತೋಡು
ಹಂದಾಡಿ ದುರ್ಗಾ ಸಭಾಗೃಹದ ಮುಂದೆ ರಸ್ತೆಯ ಬದಿಯಲ್ಲೇ ಕೆರೆ, ತೋಡುಗಳಿವೆ. ಆದರೆ ಇಲ್ಲಿಯೂ ಯಾವುದೇ ಸುರಕ್ಷಾ ಕ್ರಮಗಳಿಲ್ಲ.
ವಾಹನವಿಟ್ಟು ಬಸ್ ಏರುವರು…!
ಬ್ರಹ್ಮಾವರ-ಬಾರಕೂರು ರಸ್ತೆ ಸಂಚಾರ ಅಪಾಯ ಹಾಗೂ ಭಯದ ವಾತಾವರಣ ವಿರುವುದರಿಂದ ಬ್ರಹ್ಮಾವರಕ್ಕೆ ಬರುವ ಕೆಲವು ಮಂದಿ ಬಾರಕೂರಿನಲ್ಲೇ ತಮ್ಮ ವಾಹನ ಇಟ್ಟು ಬಸ್ ಏರುತ್ತಿದ್ದಾರೆ..!.
ತಡೆ ಗೋಡೆ ಅತ್ಯವಶ್ಯ
ಬ್ರಹ್ಮಾವರದಿಂದ ಬಾರಕೂರು ತನಕ ರಸ್ತೆಯನ್ನು ವಿಸ್ತರಿಸಬೇಕು, ಜತೆಗೆ ತಡೆ ಗೋಡೆ ನಿರ್ಮಿಸುವುದು ಅತೀ ಅವಶ್ಯ. ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸುರಕ್ಷಾ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ತತ್‌ಕ್ಷಣ ಕಾಮಗಾರಿ
ಬಾರಕೂರು ಸೇತುವೆ ಆಸುಪಾಸು ಎರಡೂ ಕಡೆ ಮಣ್ಣು ತುಂಬಿಸಿ ರಸ್ತೆಯನ್ನೇ ಅಗಲಗೊಳಿಸುವ ಯೋಜನೆಗೆ ಖಾಸಗಿಯವರು ಜಾಗ ನೀಡುತ್ತಿಲ್ಲ. ಅದಕ್ಕಾಗಿ ಅಪಾಯದ ಸ್ಥಳಗಳಲ್ಲಿ ಕಬ್ಬಿಣದ ಪಟ್ಟಿ ಅಳವಡಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ತತ್‌ಕ್ಷಣ ಕಾಮಗಾರಿ ನಡೆಯಲಿದೆ.
- ಡಿ.ವಿ. ಹೆಗಡೆ
ಪಿಡಬ್ಲ್ಯೂಡಿ ಸಹಾಯಕ ಕಾರ್ಯವಾಹಕ ಎಂಜಿನಿಯರ್
– ಪ್ರವೀಣ್ ಮುದ್ದೂರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.