ಬ್ರಹ್ಮಾವರ: ಸಾಹಿತ್ಯ ಸಮ್ಮೇಳನ ಸಮಾರೋಪ, ಸಮ್ಮಾನ
Team Udayavani, Jan 10, 2019, 7:30 PM IST
ಬ್ರಹ್ಮಾವರ: ಇಲ್ಲಿನ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಬಂಟರ ಭವನದಲ್ಲಿ ಸಮಾರೋಪಗೊಂಡಿತು. ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ ಅವರ ಸರ್ವಾಧ್ಯಕ್ಷತೆಯಲ್ಲಿ ಜರಗಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ಸಮಾರೋಪ ಭಾಷಣಗೈದು, ಕನ್ನಡ ಪರ ಕಾಳಜಿಯನ್ನಿಟ್ಟುಕೊಂಡು ಇಂದಿನ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ಹಿರಿಯರಿಗೆ, ಕಿರಿಯರಿಗೆ ರುಚಿಸುವ ಸಾಹಿತ್ಯ ಗೋಷ್ಠಿಗಳಿಂದ ಸಮ್ಮೇಳನದ ಕಳೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಕನ್ನಡಪರ ಚಿಂತನೆಗಳನ್ನು ಮೈಗೂಡಿಸಿಕೊಂಡು ಕನ್ನಡವನ್ನು ಬೆಳೆಸೋಣ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಾಲು ನಾರಾಯಣ ಮಡಿ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನ ಅಧ್ಯಕ್ಷ ಎಚ್. ಚಂದ್ರಶೇಖರ ಕೆದ್ಲಾಯ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಪೂರ್ವಾಧ್ಯಕ್ಷ ಎ.ಎಸ್.ಎನ್. ಹೆಬ್ಟಾರ್, ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ತಾಲೂಕು ಅಧ್ಯಕ್ಷರಾದ ಕಾರ್ಕಳದ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಕಾಪುವಿನ ಬಿ. ಪುಂಡಲೀಕ ಮರಾಠೆ, ತಾಲೂಕು ಪಂಚಾಯತ್ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ದಿನಕರ ಹೇರೂರು, ಪ್ರಮುಖರಾದ ಅಶೋಕ್ ಭಟ್ ಚಾಂತಾರು, ಡಾ| ಸುಬ್ರಹ್ಮಣ್ಯ ಭಟ್, ಸತೀಶ್ ವಡ್ಡರ್ಸೆ, ಚಂದ್ರ ನಾಯಕ್, ಮೋಹನ್ ಉಡುಪ, ಅಲ್ತಾರು ನಾಗರಾಜ್, ಗಿರೀಶ್ ಅಡಿಗ ಉಪಸ್ಥಿತರಿದ್ದರು. ನಿತ್ಯಾನಂದ ಶೆಟ್ಟಿ ಹಾರಾಡಿ ಸ್ವಾಗತಿಸಿ, ರಮೇಶ್ ಭಟ್ ನೂಜಿ ವಂದಿಸಿದರು. ಪ್ರಶಾಂತ್ ಶೆಟ್ಟಿ ಪಾಂಡೇಶ್ವರ ನಿರೂಪಿಸಿದರು. ಸಂಜೆ ಬಯಲು ವೇದಿಕೆಯಲ್ಲಿ ಕನ್ನಡ ಮಧುರ ಗೀತೆಗಳ ಭಾವಯಾನ ಹಾಡು ಹಕ್ಕಿಗಳೇ ಹಾರಿ ಬಾನಿಗೆ ಸಂಗೀತ ರಸಸಂಜೆ ಜರಗಿತು.
ಸಮ್ಮಾನ
ಸಮಾರಂಭದಲ್ಲಿ ಸಮಾಜಸೇವೆಗಾಗಿ ಗಿಲ್ಬರ್ಟ್ ಡಿ’ಸಿಲ್ವ, ಭುಜಂಗ ಶೆಟ್ಟಿ ಬ್ರಹ್ಮಾವರ, ಉದಯ ಶೆಟ್ಟಿ ಕುಮ್ರಗೋಡು, ರಂಗ ದೇವಾಡಿಗ, ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಸೀತಾರಾಮ ಶೆಟ್ಟಿ ಬಾರಕೂರು, ಶಿಕ್ಷಣ ಮತ್ತು ಯೋಗದಲ್ಲಿ ದಮಯಂತಿ ಭಟ್ ಚೇರ್ಕಾಡಿ, ಅಶೋಕ್ ಸಿ. ಪೂಜಾರಿ ಬಾರಕೂರು, ಚಲನ ಚಿತ್ರ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ದಯಾನಂದ ಶೆಟ್ಟಿ ಹೇರೂರು, ಸಂಜೀವ ಪೂಜಾರಿ ಕದ್ರಿಕಟ್ಟೆ, ಯಕ್ಷಗಾನ ಕ್ಷೇತ್ರದಲ್ಲಿ ಕೃಷ್ಣಮೂರ್ತಿ ಉರಾಳ, ಜಗನ್ನಾಥ ನಾಯ್ಕ ಬ್ರಹ್ಮಾವರ, ವಾದ್ಯ ಸಂಗೀತದಲ್ಲಿ ರಂಗ ದೇವಾಡಿಗ ಬ್ರಹ್ಮಾವರ, ಜನಪದ ಮತ್ತು ಗುಡಿ ಕೈಗಾರಿಕೆಗಾಗಿ ಮಂಜು ಕುಲಾಲ್ ಆರೂರು ಅವರನ್ನು ಸಮ್ಮಾನಿಸಲಾಯಿತು.
ಸಂಘ ಸಂಸ್ಥೆ
ಬ್ರಹ್ಮಾವರದ ನವಕಿರಣ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ, ಮಹಾಲಿಂಗೇಶ್ವರ ಗೆಳೆಯರ ಬಳಗ, ನೀಲಾವರದ ಯಕ್ಷ ಸಮೂಹ ಯಕ್ಷಗಾನ ಕಲಾ ಪ್ರತಿಷ್ಠಾನವನ್ನು ಗೌರವಿಸಲಾಯಿತು.
ಮುಳ್ಳು ಚುಚ್ಚಿದರೆ ಉದ್ಗರಿಸುವುದು ಅಮ್ಮಾ…
ಕಾಲಿಗೆ ಮುಳ್ಳು ಚುಚ್ಚಿದರೆ ಕೂಡಲೇ ನಮ್ಮ ಬಾಯಿಂದ ಅಮ್ಮಾ ಎಂಬ ಉದ್ಗಾರ ಬರುತ್ತದೆ. ಮಮ್ಮಿ ಎನ್ನುವ ಆಂಗ್ಲ ಪದ ಬಾರದು. ಭಾಷೆ ಎಷ್ಟೇ ಕಲಿತಿರಬಹುದು ಆದರೆ ನಮ್ಮ ಮನದ ಭಾವಗಳು ಸಹಜವಾಗಿ ನಮ್ಮ ಮಾತೃಭಾಷೆಯಲ್ಲಿ ಬಿಂಬಿಸುತ್ತದೆ ಎಂದು ಬ್ರಹ್ಮಾವರ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಚ್. ಚಂದ್ರಶೇಖರ ಕೆದ್ಲಾಯ ಹೇಳಿದರು. ಅವರು ಬಂಟರ ಭವನದಲ್ಲಿ ಜರಗಿದ ಪ್ರಥಮ ತಾಲೂಕು ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡದ ಹಿರಿಮೆಯನ್ನು ಸಾಹಿತ್ಯ ಸಮ್ಮೇಳನಗಳು ತುಂಬಿಕೊಟ್ಟರೆ, ಸಾಹಿತ್ಯವು ಬದುಕಿನ ಮೌಲ್ಯಗಳನ್ನು ಹೆಚ್ಚಿಸಿದರೆ ಸಮಾಜಯ ಸುಖಮಯವಾಗುತ್ತದೆ. ಕವಿಗಳು ಭಾಷೆಯ ಮೂಲಕ ಭಾವೈಕ್ಯತೆ ಸಾರಿದ್ದಾರೆ. ಸಮಾಜದ ಏಕತೆಗೆ ಇದು ಅಗತ್ಯವಾಗಿದೆ. ನಾವೆಲ್ಲರೂ ಒಂದೆ ಜಾತಿ, ಒಂದೆ ಮತ, ಒಂದೆ ಕುಲ, ನಾವು ಮನುಜರು ಭಾವನೆ ಬರಲು ಸಾಧ್ಯ. ಸಾಹಿತ್ಯ ಅಧ್ಯಯನ ಮಾಡುತ್ತಾ ನಾವೆಲ್ಲ ಕನ್ನಡದ ಬಾವುಟ ಹಾರಿಸೋಣ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.