“ಸುಸ್ಥಿರ, ಸಮಗ್ರ ಕೃಷಿ ಮಾದರಿ ಅನಿವಾರ್ಯ’
Team Udayavani, Oct 29, 2018, 10:09 AM IST
ಬ್ರಹ್ಮಾವರ: ದೀರ್ಘಕಾಲದ ಯೋಜನೆಯನ್ನು ರೂಪಿಸಿ ಸುಸ್ಥಿರ ಕೃಷಿ ಚಟುವಟಿಕೆ ರೂಪಿಸುವುದು ಇಂದಿನ ಅನಿವಾರ್ಯ. ಭತ್ತ, ಧಾನ್ಯ, ತೋಟಗಾರಿಕೆ ಸೇರಿದಂತೆ ಸಮಗ್ರ ಕೃಷಿಯಿಂದ ಮಾತ್ರ ಲಾಭದಾಯಕವಾಗಿ ಮುನ್ನಡೆಯಲು ಸಾಧ್ಯ.
ಇದು ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಎರಡು ದಿನಗಳ ಕಾಲ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿ.ವಿ., ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರ, ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಡಿಪ್ಲೊಮಾ ಕೃಷಿ ಮಹಾ ವಿದ್ಯಾಲಯ ಬ್ರಹ್ಮಾವರ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆ, ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜರಗಿದ ಕೃಷಿ ಮೇಳ-2018ರ ಗೋಷ್ಠಿ ಹಾಗೂ ಸಂವಾದದಲ್ಲಿ ವ್ಯಕ್ತವಾದ ಸಾರ್ವತ್ರಿಕ ಅಭಿಪ್ರಾಯ.
ಪ್ರಗತಿಪರ ಕೃಷಿಕ ಬಾರಕೂರು ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿಯಲ್ಲಿ ನೀರಿನ ಸಮರ್ಪಕ ನಿರ್ವಹಣೆಯಿಂದ ಮಾತ್ರ ಕೃಷಿ ಉಳಿಯುತ್ತದೆ. ಜತೆಗೆ ಯುವ ಜನತೆ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.
ಮಾರುಕಟ್ಟೆ ಪರಿಸ್ಥಿತಿಯನ್ನು ಅರಿತು ಬೆಳೆ ಬೆಳೆಯುವುದು, ಸುಧಾರಿತ ಯಂತ್ರೋಪಕರಣಗಳ ಬಳಕೆ, ಹವಾಮಾನ ಬದಲಾವಣೆ ಕುರಿತು ಗಮನ, ವೈಜ್ಞಾನಿಕ ಮಾದರಿ ಅನುಕರಿಸುವಂತೆ ವಿಜ್ಞಾನಿಗಳು ಸಲಹೆ ನೀಡಿದರು. ಬೇರೆ ಬೇರೆ ಕ್ಷೇತ್ರಗಳಿಂದ ಕೃಷಿ ಕ್ಷೇತ್ರಕ್ಕೆ ಬರುವವರು ಬ್ರಹ್ಮಾವರ ಕೃಷಿ ಕೇಂದ್ರದಿಂದ ಮಾಹಿತಿ, ಸಲಹೆ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.
ಪ್ರಗತಿಪರ ಕೃಷಿಕರಾದ ಸೋಮಶೇಖರ ಶೆಟ್ಟಿ ಕೆಂಚನೂರು, ಶಂಭು ಶಂಕರ ರಾವ್, ಯಡ್ತಾಡಿ ಸತೀಶ್ ಕುಮಾರ್ ಶೆಟ್ಟಿ, ಬಿ.ವಿ. ಪೂಜಾರಿ, ಕೇಂದ್ರದ ಡಾ| ಎಸ್.ಯು. ಪಾಟೀಲ್, ಡಾ| ಧನಂಜಯ, ಡಾ| ಸುಧೀರ್ ಕಾಮತ್, ಡಾ| ಶಂಕರ್, ಕುಚೇಲಯ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಗೋಷ್ಠಿಗಳು
ಅಧಿಕ ಇಳುವರಿಗಾಗಿ ಗೇರು, ಕೊಕ್ಕೊ, ಕಾಳು ಮೆಣಸು ಮತ್ತು ಇತರ ತೋಟಗಾರಿಕೆ ಬೆಳೆಗಳಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿ ವಿಚಾರ ಸಂಕಿರಣ, ಆದಾಯ ಹೆಚ್ಚಿಸಲು ಸಮಗ್ರ ಕೃಷಿ ಪದ್ಧತಿಗಳು, ಭತ್ತದ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಮತ್ತು ಉತ್ಪಾದನಾ ವೆಚ್ಚ ಕಡಿತಗೊಳಿಸುವ ತಂತ್ರಜ್ಞಾನ ಗಳು ಎನ್ನುವ ವಿಷಯದಲ್ಲಿ ವಿಚಾರ ಸಂಕಿರಣ ಜರಗಿತು.
ಬೇಡಿಕೆಗಳು
ಸರಕಾರದಿಂದ ರೈತರು ಬೆಳೆದ ಉತ್ಪನ್ನಗಳಿಗೆ ನಿರ್ದಿಷ್ಟ ಬೆಲೆ ನಿಗದಿಯಾಗಬೇಕು, ಬೆಂಬಲ ಬೆಲೆ ದೊರೆಯಬೇಕು ಹಾಗೂ ಕಾಡು ಪ್ರಾಣಿಗಳ ಹತೋಟಿಗೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕರು ಆಗ್ರಹಿಸಿದರು. ಕೃಷಿ ಯಂತ್ರೋಪಕರಣಗಳ ದುರಸ್ತಿ ಕೇಂದ್ರ ತೆರೆಯಬೇಕು, ಹಳೆ ಯಂತ್ರೋಪಕರಣಗಳಿಗೆ ವಿನಿಮಯ ಅವಕಾಶ ನೀಡಬೇಕು ಎನ್ನುವ ಬೇಡಿಕೆ ವ್ಯಕ್ತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.