ಬ್ರಹ್ಮಾವರ ಹಾರಾಡಿ ಕಾಂಕ್ರೀಟ್ ರಸ್ತೆ: ಹೊಂಡಗುಂಡಿ
Team Udayavani, Dec 9, 2019, 5:00 AM IST
ಬ್ರಹ್ಮಾವರ: ಇಲ್ಲಿನ ದೂಪದ ಕಟ್ಟೆಯಿಂದ ಸಾಲಿಕೇರಿ, ಹಾರಾಡಿ ಮೂಲಕ ಹೊನ್ನಾಳ ಸಂಪರ್ಕಿಸುವ ಕಾಂಕ್ರೀಟ್ ರಸ್ತೆ ಬಹುತೇಕ ಕಡೆ ಹೊಂಡ ಗುಂಡಿಗಳಿಂದ ಕೂಡಿದೆ.
ಡಾಮರು ರಸ್ತೆಗಿಂತ ಕಾಂಕ್ರಿಟ್ ರಸ್ತೆಯಲ್ಲಿ ಹೊಂಡಗಳಾದಾಗ ಸಂಚಾರ ಮತ್ತಷ್ಟು ದುಸ್ತರವೆನಿಸಲಿದೆ. ಅದೇ ರೀತಿ ಸಾಲಿಕೇರಿ ಹಾರಾಡಿ ಕಾಂಕ್ರೀಟ್ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಾಲಿಕೇರಿ ಲೂವಿಸ್ ಫ್ಯಾಕ್ಟರಿ ಬಳಿ ಸುಮಾರು 50 ಮೀ. ಕಾಂಕ್ರೀಟ್ ರಸ್ತೆ ಸಂಪೂರ್ಣ ಜಖಂಗೊಂಡಿದೆ. ಪ್ರತಿ ವಾಹನ ದವರು ಇಲ್ಲಿ ನಿಲ್ಲಿಸಿ ಹೊಂಡಕ್ಕೆ ಇಳಿಸಿಯೇ ತೆರಳುವ ಪರಿಸ್ಥಿತಿ ಇದೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರ್ಶನಗರ, ಸಾಲಿಕೇರಿ, ಬೈಕಾಡಿ ಗಾಂಧಿನಗರ, ಹಾರಾಡಿ, ಕುಕ್ಕುಡೆ, ಹೊನ್ನಾಳ ಮೊದಲಾದ ಊರುಗಳನ್ನು ಇದು ಸಂಪರ್ಕಿಸುತ್ತದೆ.
ಮುಖ್ಯವಾಗಿ ಜಿ.ಎಂ. ವಿದ್ಯಾನಿಕೇತನ್, ಲಿಟ್ಲರಾಕ್, ಎಸ್.ಎಂ.ಎಸ್. ಸೇರಿದಂತೆ ಹಲವು ಶಾಲೆಗಳ ನೂರಾರು ಬಸ್‌ಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಆದ್ದರಿಂದ ತುರ್ತು ದುರಸ್ತಿಗೊಳಿಸಬೇಕಿದೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಮರಳು ಲಾರಿಗಳು ಸಂಚರಿಸುತ್ತವೆ. ಬೆಳಗ್ಗೆ 5 ಗಂಟೆಗೂ ಮೊದಲೇ ಖಾಲಿ ಟಿಪ್ಪರ್‌ಗಳ ಆರ್ಭಟವು ನೂರಾರು ಮಂದಿಯ ನಿದ್ದೆಗೆಡಿಸಿದೆ. ರಸ್ತೆ ಅವ್ಯವಸ್ಥೆಯಿಂದ ಜನತೆ ರೋಸಿ ಹೋಗಿದ್ದಾರೆ.
ನಿರ್ವಹಣೆ ಇಲ್ಲ
ಮುಖ್ಯ ರಸ್ತೆಯಾದರೂ ನಿರ್ವಹಣೆ ಮಾಡದೆ ನಿರ್ಲಕ್ಷಿಸಲಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲ, ಎರಡೂ ಬದಿಯ ಕಳೆ ಸಮರ್ಪಕ ವಿಲೇವಾರಿ ಮಾಡದಿರುವುದು ಮತ್ತೂಂದು ಸಮಸ್ಯೆಯಾಗಿದೆ.
ಬ್ರಹ್ಮಾವರ ಹೊನ್ನಾಳ ಮೀನುಗಾರಿಕಾ ಕಾಂಕ್ರೀಟ್ ರಸ್ತೆ ಕೆಲವೇ ವರ್ಷಗಳಲ್ಲಿ ಹಾಳಾಗಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ಮನವಿ ಮಾಡಿದ್ದೆವು
ದೂಪದಕಟ್ಟೆ ರಸ್ತೆ ದುರಸ್ತಿಗೊಳಿಸುವಂತೆ ಮನವಿ ಮಾಡಿದ್ದೆವು. ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು ತತ್‌ಕ್ಷಣ ಸ್ಪಂದಿಸಬೇಕು.
– ಎನ್. ಕೃಷ್ಣ ಗಾಣಿಗ, ಗೆಳೆಯರ ಬಳಗ,, ದೂಪದಕಟ್ಟೆ
ತತ್‌ಕ್ಷಣ ದುರಸ್ತಿಗೊಳಿಸಿ
ರಸ್ತೆ ಹಾಳಾಗಿರುವುದರಿಂದ ಈಗಾಗಲೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನಷ್ಟು ಹದಗೆಡುವ ಮೊದಲು ಇಲಾಖೆ ದುರಸ್ತಿಗೊಳಿಸಬೇಕು.
– ನಿತ್ಯಾನಂದ ರಾವ್,
ಆದರ್ಶನಗರ ನಿವಾಸಿ
ಮರು ಕಾಂಕ್ರಿಟೀಕರಣ
ಸಾಲಿಕೇರಿ ಹಾರಾಡಿ ರಸ್ತೆ ಮರು ಕಾಂಕ್ರಿಟೀಕರಣಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಪ್ರಯತ್ನದಲ್ಲಿದ್ದೇವೆ.
– ಕೆ. ರಘುಪತಿ ಭಟ್,
ಶಾಸಕರು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.