“ವಿಪ್ರರು ಬೇರೆಯವರಿಗೆ ಸಹಕಾರಿ, ನೆರಳಾಗಿ ಬದುಕಬೇಕು’
Team Udayavani, Sep 15, 2019, 5:46 AM IST
ಬಸ್ರೂರು: ಸೌಕೂರು ವಲಯದ ದ್ರಾವಿಡ ಬ್ರಾಹ್ಮಣ ಪರಿಷತ್‌ನ ಮಹಾಧಿವೇಶನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಹರೆಗೋಡುವಿನ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು.
ಕುಂದಾಪುರ ತಾ| ದ್ರಾವಿಡ ಬ್ರಾಹ್ಮಣ ಪರಿಷತ್‌ನ ಅಧ್ಯಕ್ಷ ರಾಘವೇಂದ್ರ ಅಡಿಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ನಮ್ಮ ಸುತ್ತಲ ಪರಿಸರ ಹಸಿರಾಗಿರಲಿ ಎಂಬ ಕಾರಣಕ್ಕಾಗಿ ಗಿಡ ನೆಡುತ್ತೇವೆ.ಮುಂದೊಂದು ದಿನ ಆ ಗಿಡ ಬೆಳೆದು ಹೆಮ್ಮರವಾಗಿ ನಮಗೆ ರಕ್ಷಣೆ ನೀಡುವಂತೆ ಸಮಾಜದಲ್ಲಿ ವಿಪ್ರ ಬಾಂಧವರು ಬೇರೆಯವರಿಗೆ ಸಹಕಾರಿ, ನೆರಳಾಗಿ ಬದುಕಬೇಕು. ಈ ಉದ್ದೇಶದಿಂದ ಬ್ರಾಹ್ಮಣ ಪರಿಷತ್‌ನವರು ನಡೆದುಕೊಂಡರೆ ಸಮಾಜದ ಅಭಿವೃದ್ಧಿಯೂ ಆಗುತ್ತದೆ ಎಂದರು.
ಪವಮಾನ ಹೋಮದ ಮೂಲಕ ವಿವಿಧ ಧಾರ್ಮಿಕ ಕಾರ್ಯ ನಡೆದವು. ಅನಂತರ ಪವಮಾನ ಕಂಠಪಾಠ, ಲಿಲಿತಾ ಸಹಸ್ರನಾಮ ಕಂಠಪಾಠ, ವಿಷ್ಣು ಸಹಸ್ರನಾಮ ಕಂಠಪಾಠ, ಗುಡ್ನಾಟ ಸ್ಪರ್ಧೆ, ಸಂಗೀತ ಕುರ್ಚಿ, ದಾಸರ ಪದಗಳ ಸ್ಪರ್ಧೆ, ಚೆಂಡು ಹಸ್ತಾಂತರ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಬಕೆಟ್ ಚೆಂಡು ಹಾಕುವ ಸ್ಪರ್ಧೆ, ಹಳೆಯ ತಿಂಡಿಗಳನ್ನು ಮಾಡುವ ಕ್ರಮ ಹೇಳುವ ಆಶು ಭಾಷಣ ಮುಂತಾದ ಸ್ಪರ್ಧೆಗಳು ನಡೆದವು.
ಬ್ರಾಹ್ಮಣ ಪರಿಷತ್‌ನ ಸೌಕೂರು ವಲಯಾಧ್ಯಕ್ಷ ಅನಂತ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಶಕ್ತರಿಗೆ ಸಹಾಯಧನ, ವಿದ್ಯಾರ್ಥಿ ವೇತನ ವಿತರಿಸಲಾಯಿತು.
ವೇ|ಮೂ| ನಾಗೇಶ್ವರ ಭಟ್ ದೇವಲ್ಕುಂದ, ಕುಂದಾಪುರ ತಾ| ಬ್ರಾಹ್ಮಣ ಪರಿಷತ್‌ನ ಕಾರ್ಯದರ್ಶಿ ಎನ್. ಸತೀಶ್ ಅಡಿಗ, ತಾ| ಬ್ರಾಹ್ಮಣ ಪರಿಷತ್‌ನ ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರಾ ಆರ್. ಅಡಿಗ ಉಪಸ್ಥಿತರಿದ್ದರು. ಹರೇಗೋಡು ಮಂಜುನಾಥ ಭಟ್ ನಿರೂಪಿಸಿ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.