ಕೊನೆಗೂ ದೇವರಗದ್ದೆಗೆ ನಿರ್ಮಾಣವಾಯ್ತು ಸೇತುವೆ
Team Udayavani, Jun 18, 2018, 2:45 AM IST
ಬೈಂದೂರು: ಪಶ್ಚಿಮ ಘಟ್ಟದ ಕುಗ್ರಾಮ ದೇವರಗದ್ದೆ ಜನರು ಅನುಭವಿಸುತ್ತಿದ್ದ ಯಾತನೆಗೆ ಕೊನೆಗೂ ಮುಕ್ತಿ ದೊರಕಿದೆ. ಮಳೆಗಾಲದಲ್ಲಿ ಇಲ್ಲಿನ ಜನ ತಂತಿ ಸೇತುವೆಯಲ್ಲಿ ದಾಟುತ್ತಿದ್ದು, ಈಗ ಇಲ್ಲಿ ನೂತನ ಸೇತುವೆ ನಿರ್ಮಾಣಗೊಂಡಿದೆ.
ಪ್ರತಿವರ್ಷ ಹಗ್ಗದ ಮೇಲೆ ಸರ್ಕಸ್
ಬೈಂದೂರು ಗ್ರಾ.ಪಂ ವ್ಯಾಪ್ತಿಯ ದೇವರ ಗದ್ದೆಯಲ್ಲಿ ಹತ್ತಿಪ್ಪತ್ತು ಕೃಷಿ ಕುಟುಂಬಗಳು ಇದ್ದು ಇಲ್ಲಿಗೆ ಯಾವುದೇ ರಸ್ತೆಯಿಲ್ಲ. ಈ ಊರಿನ ಸುತ್ತ ತೂದಳ್ಳಿ ಹೊಳೆ ಹರಿಯುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಇದನ್ನು ದಾಟಲು ಯಾವುದೇ ವ್ಯವಸ್ಥೆಗಳಿರಲಿಲ್ಲ. ಹಳ್ಳಿಯವರು ಚರ್ಚ್‌ನಿಂದ ಆರ್ಥಿಕ ನೆರವು ಪಡೆದು ಕಾಲುಸಂಕ ನಿರ್ಮಿಸಿಕೊಂಡಿದ್ದರು. ಆದರೆ ಕಳೆದ ಮೂರ್‍ನಾಲ್ಕು ವರ್ಷಗಳ ಹಿಂದೆ ನೀರಿನ ಅಬ್ಬರಕ್ಕೆ ಕಾಲುಸಂಕ ಕೊಚ್ಚಿಹೋಗಿ ಕೇವಲ ಕಬ್ಬಿಣ ತಂತಿ ಮಾತ್ರ ಉಳಿದಿತ್ತು. ಹೀಗಾಗಿ ಜನ ಮಳೆಗಾಲದಲ್ಲಿ ಹೊರಗೆ ಬರುತ್ತಿರಲಿಲ್ಲ. ಒಂದೊಮ್ಮೆ ಬರಬೇಕಾದರೂ ತಂತಿ ಹಿಡಿದು ಹೊಳೆದಾಟಬೇಕಿತ್ತು. ಸ್ವಲ್ಪ ಯಾಮಾರಿದರೂ ನೀರು ಪಾಲಾಗುವುದರಲ್ಲಿ ಸಂಶಯವಿಲ್ಲ ಎಂಬಂತಿತ್ತು.
ಬೆಳಕು ಚೆಲ್ಲಿದ್ದ ಉದಯವಾಣಿ
ದೇವರಗದ್ದೆ ಪರಿಸ್ಥಿತಿ ಬಗ್ಗೆ 2016ರಲ್ಲಿ ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಅಂದಿನ ಬೈಂದೂರು ತಹಶೀಲ್ದಾರರಾದ ರಾಜು ಮೊಗೇರ್ ಅವರು ಸೇತುವೆಗೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಬಳಿಕ ಸರ್ವೆ ಕಾರ್ಯ ನಡೆದಿದ್ದರೂ ಸೇತುವೆ ನಿರ್ಮಾಣವಾಗಿರಲಿಲ್ಲ. 2017ರಲ್ಲಿ ಮತ್ತೆ ವರದಿ ಪ್ರಕಟವಾಗಿತ್ತು. ಇದನ್ನು ಮಾನವಹಕ್ಕು ಆಯೋಗ ಗಂಭೀರವಾಗಿ ಪರಿಗಣಿಸಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿತ್ತು. ಬಳಿಕ ರಾಜ್ಯ ಸರಕಾರ 30/54 ಯೋಜನೆಯಡಿ ಸೇತುವೆಗಾಗಿ 20 ಲಕ್ಷ ಅನುದಾನ ಬಿಡುಗಡೆಗೊಳಿತ್ತು.
ಕಾಮಗಾರಿ ಅಂತಿಮ ಹಂತದಲ್ಲಿ
ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.ಎರಡು ಕಡೆಗಳಲ್ಲಿ ಸೇತುವೆ ಸಂಪರ್ಕಕ್ಕೆ ಮಣ್ಣು ತುಂಬಿಸುವ ಕೆಲಸ ಮಾತ್ರ ಬಾಕಿ ಇದೆ. ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾದರೂ ಜನರಿಗೆ ಸೇತುವೆ ಸಿಕ್ಕ ತೃಪ್ತಿಯಿದೆ.
ಉದಯವಾಣಿ ವರದಿಗೆ ಸ್ಪಂದನೆ
ಮಕ್ಕಳನ್ನು ಮಳೆಗಾಲದಲ್ಲಿ ನದಿ ದಾಟಿಸಲಾಗದೆ ಬೈಂದೂರು – ಶಿರೂರಿನಲ್ಲಿ ಬಾಡಿಗೆ ಮನೆ ಮಾಡಿ ಓದಿಸಬೇಕಾದ ಪರಿಸ್ಥಿತಿಯಿತ್ತು. ಆದರೆ ಉದಯವಾಣಿ ವರದಿಗೆ ಸರಕಾರ ಸ್ಪಂದಿಸಿದೆ. ಊರಿಗೆ ಸೇತುವೆ ಸಿಕ್ಕಿದೆ.
– ಸ್ಕರೀಯ ಕೊಸಳ್ಳಿ, ದೇವರಗದ್ದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.