ಮಾವಿನಗುಳಿ: ಕಾಲುಸಂಕಕ್ಕೆ ಸಿಕ್ಕಿಲ್ಲ ಸೇತುವೆ ಭಾಗ್ಯ
Team Udayavani, Jul 2, 2018, 6:00 AM IST
ಮಾವಿನಗುಳಿ: ತುಂಬಿ ಹರಿಯುತ್ತಿರುವ ಕುಬ್ಜೆ , ಆ ದಡದಿಂದ ಈ ದಡಕ್ಕೆ ಬದಿಗೆ ದಾಟ ಬೇಕಾದರೆ ಕಾಲುಸಂಕವೇ ಗತಿ. ಅದರ ಹಿಡಿಕೆ ಸ್ವಲ್ಪ ತಪ್ಪಿ ಯಾಮಾರಿದರೂ, ಅನಾಹುತ ತಪ್ಪಿದ್ದಲ್ಲ. ಪ್ರಧಾನಿ ಕಚೇರಿವರೆಗೂ ದೂರು ಹೋದರೂ ಸಿಕ್ಕಿಲ್ಲ ಮಾತ್ರ ಸೇತುವೆ ಭಾಗ್ಯ.
ಬೈಂದೂರು ವಿಧಾನಸಭಾ ಕ್ಷೇತ್ರದ ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಯ ಮಾವಿನಗುಳಿ ಜನರ ಯಾರೂ ಕೇಳದ ಗೋಳು ಇದು.
ಮಾವಿನಗುಳಿಯ ಜನರಿಗೆ ಅಂಪಾರು ಹತ್ತಿರದ ಪೇಟೆಯಾಗಿದ್ದು, ಅದರಲ್ಲೂ ಹಾಲಿನ ಡೈರಿ, ಶಾಲೆ, ಕಾಲೇಜುಗಳಿಗೆ ಈ ಕುಬ್ಜೆ ನದಿಯನ್ನೇ ದಾಟಿ ಮುನ್ನಡೆಯ ಬೇಕು. ಆದರೆ ಇಲ್ಲಿನ ಸುಮಾರು 150ಕ್ಕೂ ಹೆಚ್ಚು ಮಂದಿಗೆ ಮಾತ್ರ 200 ಮೀಟರ್ ಉದ್ದದ ಅಪಾಯಕಾರಿ ಕಾಲು ಸಂಕವೇ ಆಶ್ರಯವಾಗಿದೆ.
ಮುಳುಗುವ ಭೀತಿ
ಇದು ಅಂತಿಂಥ ಕಾಲು ಸಂಕವಲ್ಲ. ಅತ್ಯಂತ ಅಪಾಯಕಾರಿ ಕಾಲು ಸಂಕ. ಇಲ್ಲಿ ಸ್ವಲ್ಪ ಯಾಮಾರಿದರೂ ಅನಾಹುತ ಸಂಭವಿಸುವುದು ಗ್ಯಾರಂಟಿ. ಕಾಲು ಸಂಕ 25 ಅಡಿ ಎತ್ತರವಿದ್ದರೂ, 35 ಅಡಿ ಎತ್ತರದವರೆಗೂ ಈ ನದಿಯಲ್ಲಿ ನೀರು ಬರುತ್ತದೆ, ಸಂಕ ಮುಳುಗುತ್ತದೆ.
ಇತ್ತೀಚಿನ ದಿನಗಳಲ್ಲಿ ಮಳೆ ಜೋರಿದ್ದಾಗಲೂ ಸಂಕ ಮುಳುಗಿತ್ತು. ಈ ಸಂದರ್ಭ ಹೊರಜಗತ್ತಿಗೆ ಸಂಪರ್ಕ ಕಡಿತವಾಗುತ್ತದೆ.
ರಿಕ್ಷಾದವರೇ ಬರುವುದಿಲ್ಲ
ನಾನು ಗರ್ಭಿಣಿ. ನಮ್ಮ ಮನೆಗೆ ಇಲ್ಲಿ ಸೇತುವೆಯಾಗದೇ ಸರಿಯಾದ ರಸ್ತೆ ಸಂಪರ್ಕವಿಲ್ಲ. ರಸ್ತೆ ಇರುವವರೆಗೆ ಆದರೂ ರಿಕ್ಷಾದವರು ಬಾಡಿಗೆಗೆ ಕರೆದರೆ ನಮ್ಮ ಊರಿಗೆ ಬರುವುದೇ ಇಲ್ಲ. ಆಸ್ಪತ್ರೆಗೆಲ್ಲ ಹೋಗಲು ಇದರಿಂದ ತುಂಬಾ ಕಷ್ಟವಾಗಿದೆ. ಇನ್ನು ಹೆರಿಗೆ ನೋವೆಲ್ಲ ಕಾಣಿಸಿಕೊಂಡಾಗ ಏನು ಮಾಡುವುದು ಎಂದು ತಿಳಿಯುತ್ತಿಲ್ಲ ಎನ್ನುವುದಾಗಿ ಆತಂಕದಿಂದ ಹೇಳುತ್ತಾರೆ ಇಲ್ಲಿನ ನಿವಾಸಿ ದೀಪಾ.
ವರ್ಷದ ಹಿಂದೆ ಪ್ರಧಾನಿಗೂ ದೂರು
ಮಾವಿನಗುಳಿಯಿಂದ ಅಂಪಾರಿಗೆ ಸಂಪರ್ಕ ಕಲ್ಪಿಸಲು ಕುಬಾj ನದಿಗೆ ಸೇತುವೆ ಬೇಡಿಕೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಇಮೇಲ್ ಮೂಲಕ ಮನವಿ ಮಾಡಲಾಗಿತ್ತು. ಚಿತ್ರಗಳನ್ನೂ ಕಳಿಸಿ ಕೊಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಸೇತುವೆಯಾದರೆ 5, ಇಲ್ಲದಿದ್ದರೆ 13 ಕಿ.ಮೀ.
ಕುಬ್ಜೆ ನದಿಗೆ ಸೇತುವೆಯಾದರೆ ಮಾವಿನಗುಳಿಯಿಂದ ಅಂಪಾರಿಗೆ ಕೇವಲ 5 ಕಿ.ಮೀ. ದೂರವಾಗುತ್ತದೆ. ಆದರೆ ಸೇತುವೆಯಿಲ್ಲದೆ, ವಾಹನದಲ್ಲಿ ಹೋಗಬೇಕಾದರೆ ಕೋಡಿಗೆ, ನೇರಳಕಟ್ಟೆ, ವಾಲೂ¤ರು ಮಾರ್ಗವಾಗಿ ಅಂಪಾರಿಗೆ ಸಂಚರಿಸಬೇಕಾದ ಅನಿವಾರ್ಯತೆಯಿದೆ
ಈಜು ಗೊತ್ತಿದ್ದರಿಂದ ಪಾರಾದೆ
ಕಳೆದ ವರ್ಷ ಇದೇ ಸಮಯದಲ್ಲಿ ನಾನು ಅಂಪಾರು ಪೇಟೆಗೆ ಹೋಗಲು ಈ ಕಾಲು ಸಂಕ ದಾಟುತ್ತಿದ್ದಾಗ ಹಿಡಿಕೆ ಮುರಿದು ಬಿದ್ದು , ನದಿ ನೀರಿಗೆ ಬಿದ್ದೆ. ಸ್ವಲ್ಪ ದೂರ ಕೊಚ್ಚಿಕೊಂಡು ಹೋಗಿದ್ದು, ನಾನು ಚಿಕ್ಕಂದಿನಿಂದ ವಾರಾಹಿ ನದಿಯಲ್ಲಿ ಈಜು ಕಲಿತಿದ್ದರಿಂದ ಸಾವಿನಿಂದ ಪಾರಾದೆ.
– ಮಹಾಬಲ ದೇವಾಡಿಗ, ಮಾವಿನಗುಳಿ
ಖುದ್ದು ಭೇಟಿ ಕೊಟ್ಟು ಪರಿಶೀಲಿಸಿ ಕ್ರಮ
ಆ ಮಾವಿನಗುಳಿ ಪ್ರದೇಶಕ್ಕೆ ಖುದ್ದಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅದಕ್ಕೆ ಏನು ಬೇಕೋ ಆ ಪರಿಹಾರ ಕಂಡು ಕೊಳ್ಳಲು ಪ್ರಯತ್ನ ನಡೆಸುತ್ತೇನೆ. ನಮ್ಮಿಂದಾಗುವ ಎಲ್ಲ ರೀತಿಯ ನೆರವು ನೀಡಲಾಗುವುದು.
– ಸುಕುಮಾರ ಶೆಟ್ಟಿ,
ಬೈಂದೂರು ಶಾಸಕರು ಸಂಸದರಿಗೂ ದೂರು
ಶಿವಮೊಗ್ಗ – ಬೈಂದೂರು ಸಂಸದ ಬಿ.ಎಸ್. ಯಡಿಯುರಪ್ಪ ಅವರಿಗೂ ಸೇತುವೆ ನಿರ್ಮಿಸಿಕೊಡಿ ಎಂದು ನಾವೆಲ್ಲ ಹೋಗಿ ದೂರು ಕೊಟ್ಟಿದ್ದೇವೆ. 6 ಕ್ಕೂ ಹೆಚ್ಚು ಸಲ ಎಲ್ಲ ರಿಗೂ ಮನವಿ ಮಾಡಿದ್ದೇವೆ. ಆದರೂ ಯಾರೂ ಕೂಡ ನಮ್ಮ ನೆರವಿಗೆ ಬರಲಿಲ್ಲ.
– ಅನಂತ ಅಡಿಗ ಮಾವಿನಗುಳಿ ನಿವಾಸಿ
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.