ಮಳೆ ಬಂದರೆ ಸೇತುವೆ ಮುಳುಗಡೆ!


Team Udayavani, Aug 13, 2019, 6:11 AM IST

male

ಉಳ್ಳೂರು-74ನೇ ಗ್ರಾಮದ ಕಳ್ಗಿ, ಬಂಟಕೋಡು, ದೋಣಗೆರೆ, ಹೊಸಬಾಳು, ಜಡ್ಡು, ಬೋಗಿನಬೆ„ಲ್‌, ಜಂಬಗೋಡು, ನೀರ್‌ಕೊಡ್ಲು, ಹೆದ್ದನಬೇರು, ಬಂಟರಗದ್ದೆ, ಮಾಸಳ್ಳಿ, ಹುಂಬಾಡಿ, ಹಾಲಿಬಚ್ಚಲು, ಕೊಗ್ಗೊàಡು, ಕಳಿನತೋಟ ಮೊದಲಾದ ಪ್ರದೇಶಗಳ ಜನರು ಪ್ರಸ್ತುತ ಸುತ್ತು ಬಳಸಿ 8-10 ಕಿ.ಮೀ. ಕ್ರಮಿಸಿ ಶಂಕರನಾರಾಯಣಕ್ಕೆ ಕೆಲಸ ಕಾರ್ಯಗಳಿಗೆ ಬರುತ್ತಿದ್ದು, ಹಾಲಿಬಚ್ಚಲು ಹೆಬ್ಟಾಡಿ ಎಂಬಲ್ಲಿ ಸೇತುವೆ ನಿರ್ಮಾಣವಾದಲ್ಲಿ 74ನೇ ಉಳ್ಳೂರಿನಿಂದ ಶಂಕರನಾರಾಯಣಕ್ಕೆ ಕೇವಲ ಮೂರು ಕಿ.ಮೀ. ಮಾತ್ರ ಕ್ರಮಿಸಿದರೆ ಸಾಕಾಗುತ್ತದೆ . ಬೇಡಿಕೆಯ ಈ ಸೇತುವೆ ನಿರ್ಮಾಣದಿಂದ 74 -ಉಳ್ಳೂರು, ಕುಳ್ಳುಂಜೆ ಹಾಗೂ ಶಂಕರನಾರಾಯಣ ಮೂರು ಗ್ರಾಮಗಳ ಸಂಪರ್ಕ ಕೊಂಡಿ ಬೆಸೆದಂತೆ ಆಗುತ್ತದೆ.

ಕುಂದಾಪುರ: ಉಳ್ಳೂರು 74 ಗ್ರಾಮ ಹಾಗೂ ಶಂಕರನಾರಾಯಣ ಗ್ರಾಮಗಳನ್ನು ಬೆಸೆ ಯಲು, ಇರುವ ದೂರವನ್ನು ಕಡಿಮೆಗೊಳಿಸಲು ಕುಳ್ಳುಂಜೆ ಗ್ರಾಮದ ಕಿರುನದಿಗೆ ಹೆಬ್ಟಾಡಿ ಹಾಲಿಬಚ್ಚಲು ಸೇತುವೆ ಬೇಕೆಂಬ ಬೇಡಿಕೆ ನನಸಾಗಿಲ್ಲ.

ಗ್ರಾಮಸ್ಥರು ವಿದ್ಯುತ್‌ ಕಂಬ ಹಾಕಿ ಮಾಡಿದ ತಾತ್ಕಾಲಿಕ ಸೇತುವೆ ಮಳೆಗೆ ಹೊಳೆಯಲ್ಲಿ ನೀರು ಬಂದರೆ ಮುಳುಗುತ್ತದೆ, ನೀರು ಇಳಿದರೆ ಸೇತುವೆ ಕಾಣುತ್ತದೆ. ಕೆನ್ನೀರು ಹರಿಯುತ್ತಿದ್ದರೆ ಹೊಳೆ ದಾಟಲು ಎಂಟೆದೆ ಬೇಕು.

ಹರಸಾಹಸ ಮಾಡಬೇಕು. ಕೈ ಕೈ ಹಿಡಿಯಲೇ ಬೇಕು. ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಆತಂಕ. ಮನೆ ಮಂದಿ ಹೊರಹೋದರೆ ಮನೆಗೆ ಬರುವವರೆಗೆ ಮನೆಯವರ ಎದೆ ಢವಢವ. ಊರಿನಿಂದ ಹೋದವರು ಮರಳಿ ಬರ ಬೇಕಾದರೆ ನೀರಿಳಿಯಬೇಕೆಂಬ ಕಾಯುವಿಕೆ. ಮನೆ ಮುಟ್ಟುವವರೆಗೆ ಹೊಳೆಯಲ್ಲಿ ನೀರು ಬಾರದಿರಲಿ, ಎಷ್ಟೇ ಮಳೆಯಾದರೂ ಸೇತುವೆ ಮುಳುಗದಿರಲಿ ಎಂಬುದು ಮಳೆಗಾಲದಲ್ಲಿ ಈ ಊರಿನವರ ನಿತ್ಯ ಪ್ರಾರ್ಥನೆ. ಏಕೆಂದರೆ ಹರಿಯುವುದು ಸಣ್ಣ ನದಿಯಾದರೂ ಅದರ ಸೆಳೆತ ಭೀಕರವಾಗಿರುತ್ತದೆ. ಈಗ ಇರುವ ಕಾಲುಸಂಕದ ಹಿಡಿಕೆ ದುರ್ಬಲವಾಗಿದ್ದು ಅಪಾಯ ಕಟ್ಟಿಟ್ಟ ಬುತ್ತಿ. ನದಿಯ ಮೇಲ್ಭಾಗದಲ್ಲಿ ಸ್ವಲ್ಪ ಜಾಸ್ತಿ ಮಳೆಯಾದರೂ ಕೆಂಪು ಕೆಂಪು ನೀರು, ಕಾಲುಸಂಕ ಮುಳುಗಡೆ! ನೀರು ಇಳಿಯಲು ಕಾಯುವುದು ಅನಿವಾರ್ಯ.

ಪ್ರಸ್ತಾವನೆ ಸಲ್ಲಿಕೆ
ಉಳ್ಳೂರು ಗ್ರಾ.ಪಂ. ನಮ್ಮ ಗ್ರಾಮ ನಮ್ಮ ಯೋಜನೆಯಡಿ ಪ್ರಸ್ತಾವಿತ ಸೇತುವೆಯ ನಿರ್ಮಾಣದ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದೆ. ಆದರೆ ವರ್ಷಗಳು ಮೂರು ಕಳೆದರೂ ಮಂಜೂರಾಗಲೇ ಇಲ್ಲ.

ಶಂಕರನಾರಾಯಣದಿಂದ ಹೆಬ್ಟಾಡಿಯ ತನಕ ಈಗಾಗಲೇ ಕರ್ನಾಟಕ ನೀರಾವರಿ ನಿಗಮದಿಂದ ಮಹಿಷಮರ್ದಿನಿ ದೇವಸ್ಥಾನ ಸಮೀಪ ವಾರಾಹಿ ಕಾಲುವೆ ಪಕ್ಕದಲ್ಲಿ ರಸ್ತೆ ನಿರ್ಮಾಣವಾಗಿದೆ. ಈ ರಸ್ತೆ ಕುಂಬಾರಮಕ್ಕಿ ಜಂಕ್ಷನ್‌, ಹಾಲಾಡಿ ಸಿದ್ದಾಪುಯರ ರಸ್ತೆಯಲ್ಲಿ ಕೊನೆಯಾಗುತ್ತದೆ. ಈ ರಸ್ತೆಯನ್ನು ಉಪಯೋಗಿಸಿದರೆ 15 ಕಿ.ಮೀ. ದೂರದ ಸಿದ್ದಾಪುರ ಹಾಲಾಡಿಗೆ 5 ಕಿ.ಮೀ. ದೂರ ಕಡಿಮೆಯಾಗುತ್ತದೆ. ಸಿದ್ದಾಪುರ, ಉಳ್ಳೂರು, ಕುಳ್ಳುಂಜೆ, ಶಂಕರನಾರಾಯಣ, ಹಾಲಾಡಿ ಮತ್ತಷ್ಟು ಸನಿಹವಾಗುತ್ತದೆ. ಹೆಬ್ಟಾಡಿಯಿಂದ ನದಿಯ ತನಕ ಖಾಸಗಿ ಪಟ್ಟಾ ಭೂಮಿಯಲ್ಲಿ ಸುಮಾರು ನೂರು ಮೀಟರ್‌ನಷ್ಟು ಕೂಡು ರಸ್ತೆ ನಿರ್ಮಾಣವಾಗಬೇಕಾಗಿದೆ.

ಸೇತುವೆ ಬೇಡಿಕೆ
ಕುಳ್ಳುಂಜೆ ಗ್ರಾಮದ ಹಾಲಿಬಚ್ಚಲು ಹೆಬ್ಟಾಡಿಯ ಬಳಿ ಕಿರುಸೇತುವೆ ನಿರ್ಮಾಣವಾದಲ್ಲಿ ಸಿದ್ದಾಪುರ, ಉಳ್ಳೂರು, ಶಂಕರನಾರಾಯಣ, ಕುಳ್ಳುಂಜೆ, ಹಾಲಾಡಿ ಹೀಗೆ ಐದು ಗ್ರಾಮಗಳ ಸಂಪರ್ಕ ಕೊಂಡಿಯಾಗಲಿದೆ. ನದಿಯ ಒಂದು ದಡ ಉಳ್ಳೂರು 74 ಗ್ರಾಮವಾದರೆ ಇನ್ನೊಂದು ಭಾಗ ಕುಳ್ಳುಂಜೆ ಗ್ರಾಮದಲ್ಲಿದೆ. ಎರಡೂ ಕಡೆ ನದಿದಂಡೆವರೆಗೆ ಪಂಚಾಯತ್‌ ರಸ್ತೆಯಿದೆ. ಸ್ವಲ್ಪ ಖಾಸಗಿ ಭೂಮಿಯಿದ್ದು ಭೂಮಾಲಕರು ಪರೋಕ್ಷವಾಗಿ ಸೇತುವೆ ನಿರ್ಮಾಣಕ್ಕೆ ಸಹಕರಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಮಂಜೂರಿಗೆ ಪ್ರಯತ್ನ
ಈ ವಾರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡು ಈ ಪ್ರದೇಶಕ್ಕೆ ಸೇತುವೆ ಮಂಜೂರುಗೊಳಿಸುತ್ತೇನೆ. ಮಳೆಗಾಲದ ಅವಧಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ.
– ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕರು

ಸನಿಹದ ದಾರಿ
ಐದು ಗ್ರಾಮಗಳ ಸಂಪರ್ಕ ರಸ್ತೆಯಾದ ಹಾಲಿಬಚ್ಚಲು-ಹೆಬ್ಟಾಡಿ ಸೇತುವೆ ನಿರ್ಮಾಣಕ್ಕೆ ಅನೇಕ ವರ್ಷಗಳಿಂದ ಬೇಡಿಕೆಯಿದೆ. ಹಾಲಿಬಚ್ಚಲು -ಹೆಬ್ಟಾಡಿ ಎಂಬಲ್ಲಿ ಈ ಸೇತುವೆ ಆದರೆ ಜನರಿಗೆ ಕೂಗಳತೆಯಲ್ಲಿ ಶಂಕರನಾರಾಯಣ ಪದವಿಪೂರ್ವ ಕಾಲೇಜು, ಪದವಿ ಕಾಲೇಜು ತಲುಪಬಹುದು, ಶಂಕರನಾರಾಯಣ ಪೊಲೀಸ್‌ ಠಾಣೆ, ಸಬ್‌ ರಿಜಿಸ್ಟ್ರಾರ್‌ ಕಚೇರಿ, ಅರಣ್ಯ ಇಲಾಖೆಯನ್ನು 1.5 ಕಿ.ಮೀ. ದೂರದಲ್ಲಿ ಕ್ರಮಿಸಬಹುದು.
-ಚಿಟ್ಟೆ ರಾಜಗೋಪಾಲ ಹೆಗ್ಡೆ, ಅಧ್ಯಕ್ಷರು, ಪಶ್ಚಿಮ ವಾಹಿನಿ ನೀರಾವರಿ ಅಚ್ಚುಕಟ್ಟು ಅಭಿವೃದ್ಧಿ ಸಮಿತಿ

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

sand

Bramavara: ಬೆಣ್ಣೆಕುದ್ರು; ಮರಳು ಅಕ್ರಮ ಸಾಗಾಟ

crime

Brahmavara: ಯಡ್ತಾಡಿ; ಬೈಕ್‌ ಅಪಘಾತ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.