ಬಿಎಸ್ 4 ಪ್ರಭಾವ: ದ್ವಿಚಕ್ರ ವಾಹನ ಮಾರಾಟ, ನೋಂದಣಿ ಭರಾಟೆ
Team Udayavani, Apr 1, 2017, 10:44 AM IST
ಉಡುಪಿ ಜಿಲ್ಲೆ : 29 ಕಾರು, 152 ದ್ವಿಚಕ್ರ ವಾಹನಗಳ ನೋಂದಣಿ
ಉಡುಪಿ: ಸರ್ವೋಚ್ಚ ನ್ಯಾಯಾಲಯ ಬಿಎಸ್ 4 ವಾಹನಗಳನ್ನು ಖರೀದಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ವಾಹನಗಳ ನೋಂದಣಿಗೆ ಹೆಚ್ಚಿನ ಬೇಡಿಕೆ ಕಂಡುಬಂತು.
ಶುಕ್ರವಾರ ಜಿಲ್ಲೆಯಲ್ಲಿ 29 ಕಾರು ಮತ್ತು 152 ದ್ವಿಚಕ್ರ ವಾಹನಗಳ ನೋಂದಣಿಯಾದವು. ಇದರಲ್ಲಿ ಒಂದು ಕಾರು ಮಾತ್ರ ಬಿಎಸ್ 3 ಮಾದರಿಯದ್ದಾಗಿತ್ತು. ಉಳಿದೆಲ್ಲವೂ ಬಿಎಸ್ 4 ಮಾದರಿಯವು. ಬೈಕ್‌ಗಳಲ್ಲಿ ಶೇ. 90 ಬಿಎಸ್ 3 ಮಾದರಿಯವು ಎಂದು ಸಾರಿಗೆ ಕಚೇರಿ ಮೂಲಗಳು ತಿಳಿಸಿವೆ.
ಬಿಎಸ್ 3 ಮಾದರಿಯಲ್ಲಿ ಇಂಧನ ಹೊರಸೂಸುವ ಮಾಲಿನ್ಯ ಹೆಚ್ಚಿಗೆ ಇರುತ್ತವೆ. ಬಿಎಸ್ 4 ಮಾದರಿಯಲ್ಲಿ ಹೊಗೆ ಪ್ರಮಾಣ ಕಡಿಮೆ. ಈಗ ದೊರಕುವ ಪೆಟ್ರೋಲ್ ಗುಣಮಟ್ಟಕ್ಕೆ ಸರಿಯಾಗಿ ಬಿಎಸ್ 4 ವಾಹನ ಮಾದರಿಗಳನ್ನು ಉತ್ಪಾದಿಸಲಾಗುತ್ತಿದೆ.
ಸಾಮಾನ್ಯವಾಗಿ ಉಡುಪಿ ಆರ್‌ಟಿಒ ಕಚೇರಿಯಲ್ಲಿ 100 ಸಂಖ್ಯೆಧಿಯೊಳಗೆ ನೋಂದಣಿಯಾಗುತ್ತವೆ. ಗುರುವಾರ ಶುಕ್ರವಾರಕ್ಕಿಂತ ಸ್ವಲ್ಪ ಕಡಿಮೆ ನೋಂದಣಿಯಾಗಿತ್ತು. ಶುಕ್ರವಾರ ಎಂದಿಗಿಂತ ಶೇ. 60ರಷ್ಟು ಹೆಚ್ಚಿಗೆ ನೋಂದಣಿಯಾಗಿವೆ. ಬಿಎಸ್ 3 ವಾಹನಗಳಿಗೆ ಕಂಪೆನಿಗಳು ರಿಯಾಯಿತಿಗಳನ್ನು ಘೋಷಿಸಿವೆಯಾದರೂ ಕಾರು ಖರೀದಿದಾರರು ಬಿಎಸ್ 4 ಮಾದರಿಯನ್ನೇ ಆಯ್ಕೆ ಮಾಡಿಕೊಂಡರು. ಇದಕ್ಕೆ ಮರು ಮಾರಾಟ ಬೇಡಿಕೆ ಕಾರಣ. ಉಡುಪಿಯ ಕಾರು ಶೋರೂಂಗಳಲ್ಲಿ ಬಿಎಸ್ 3 ವಾಹನಗಳ ದಾಸ್ತಾನು ಇಲ್ಲವೇ ಇಲ್ಲ ಎನ್ನಬಹುದು. ಆದರೆ ಬೈಕ್ ಶೋರೂಮ್‌ಗಳಲ್ಲಿದ್ದ ಬಿಎಸ್ 3 ವಾಹನಗಳನ್ನು ರಿಯಾಯಿತಿ ಕೊಟ್ಟು ಬಹುತೇಕ ದಾಸ್ತಾನನ್ನು ಖಾಲಿ ಮಾಡಿದ್ದಾರೆ.
ದ.ಕ.: 739 ದ್ವಿಚಕ್ರ ವಾಹನ ನೋಂದಣಿ
ಮಂಗಳೂರು: ದ.ಕ. ಜಿಲ್ಲೆಯಲ್ಲೂ ದ್ವಿಚಕ್ರ ವಾಹನಗಳ ಕಂಪೆನಿಗಳು ಮಾ. 31ಕ್ಕೆ ಸೀಮಿತಗೊಳಿಸಿ ಬಿಎಸ್-3 ವಾಹನಗಳ ಮೇಲೆ 7 ಸಾವಿರದಿಂದ 22,000 ರೂ. ವರೆಗೆ ಭಾರೀ ರಿಯಾಯಿತಿ ಘೋಷಿಸಿದ ಪರಿಣಾಮ ದ್ವಿಚಕ್ರ ವಾಹನಗಳ ಮಾರಾಟ ಭರದಿಂದ ನಡೆದಿದೆ. ದ.ಕ. ಜಿಲ್ಲೆಯಲ್ಲಿ ವಿತರಕ ಸಂಸ್ಥೆಗಳಲ್ಲಿ ದಾಸ್ತಾನು ಇದ್ದ ಎಲ್ಲ ಬಿಎಸ್-3 ದ್ವಿಚಕ್ರ ವಾಹನಗಳು ಮಾರಾಟವಾಗಿವೆ.
ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 600 ದ್ವಿಚಕ್ರ ವಾಹನಗಳು ಹಾಗೂ ಪುತ್ತೂರು ಪ್ರಾದೇಶಿಕ ಸಾರಿಗ ಕಚೇರಿಯಲ್ಲಿ 139 ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ. ಶುಕ್ರವಾರ ಬೆಳಗಿನಿಂದಲೇ ಸಾರಿಗೆ ಪ್ರಾಧಿಕಾರ ಕಚೇರಿಗಳಲ್ಲಿ ನೋಂದಣಿಗೆ ದಟ್ಟಣೆ ಕಂಡು ಬಂದಿತ್ತು. ಎ. 1ರಿಂದ ಈ ವಾಹನಗಳಿಗೆ ನೋಂದಣಿಗೆ ಅವಕಾಶ ಇಲ್ಲದಿರುವ ಹಿನ್ನೆಲೆಯಲ್ಲಿ ಸಂಜೆಯವರೆಗೆ ವಾಹನಗಳ ನೋಂದಣಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.