ಬ್ರಹ್ಮಾವರ: ಬಸ್‌ಸ್ಟ್ಯಾಂಡ್ ಇಲ್ಲದೆ ಜನರ ಪರದಾಟ
Team Udayavani, Sep 1, 2018, 3:00 AM IST
ಬ್ರಹ್ಮಾವರ: ದೂರದ ಊರಿಗೆ ತೆರಳುವವರು ರಾ.ಹೆ. ಬದಿಯಲ್ಲೇ ನಿಲ್ಲಬೇಕಾಗಿರುವುದರಿಂದ ಬ್ರಹ್ಮಾವರದ ಪಶ್ಚಿಮ ದಿಕ್ಕಿನಲ್ಲಿ ಇನ್ನೊಂದು ಬಸ್ ನಿಲ್ದಾಣ ನಿರ್ಮಿಸುವ ಅಗತ್ಯವಿದೆ. ಬ್ರಹ್ಮಾವರದಿಂದ ಉತ್ತರ ಕರ್ನಾಟಕ ಭಾಗಕ್ಕೆ ತೆರಳುವವರು ಸಮಸ್ಯೆ ಎದುರಿಸುತ್ತಿದ್ದಾರೆ. ಮುಖ್ಯವಾಗಿ ಮುಂಬೈ, ಹುಬ್ಬಳ್ಳಿ, ಬೆಳಗಾಂ ಮೊದಲಾದೆಡೆ ತೆರಳುವ ನೂರಾರು ಮಂದಿ ಬಸ್ ತಂಗುದಾಣವಿಲ್ಲದೆ ಪರದಾಡುತ್ತಿದ್ದಾರೆ.
ತಂಗುದಾಣ ಅಗತ್ಯ
ಪ್ರಸ್ತುತ ಉಡುಪಿ ಕಡೆಯಿಂದ ಬಂದ ಸ್ಥಳೀಯ ಬಸ್‌ಗಳು ಮಾತ್ರ ಬಸ್‌ಸ್ಟ್ಯಾಂಡ್‌ಗೆ ಬರುತ್ತವೆ. ದೂರದ ಊರುಗಳಿಗೆ ತೆರಳುವ ಬಸ್‌ಗಳು ರಾ.ಹೆ. ಬದಿಯಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತವೆ. ಜನರು ಅನಿವಾರ್ಯವಾಗಿ ಅಪಾಯಕಾರಿ ಸ್ಥಿತಿಯಲ್ಲಿ ನಿಲ್ಲಬೇಕಾಗಿದೆ. ಆದ್ದರಿಂದ ಎಡಭಾಗದಲ್ಲೂ ಬಸ್‌ಸ್ಟ್ಯಾಂಡ್ ಅನಿವಾರ್ಯ.
ಮಳೆಗಾಲದ ದುಸ್ಥಿತಿ
ಮಳೆಗಾಲದಲ್ಲಿ ಜನರ ಪಾಡು ಹೇಳತೀರದು. ಪ್ರಯಾಣಿಕರು ಸುರಕ್ಷತೆ ದೃಷ್ಟಿಯಿಂದ ನಿಗದಿತ ಸಮಯಕ್ಕಿಂತ ಸ್ವಲ್ಪ ಮುಂಚಿತವಾಗಿ ಆಗಮಿಸಿರುತ್ತಾರೆ. ಬಹುತೇಕ ಬಸ್‌ಗಳು ನೀಡಿದ ಸಮಯದಿಂದ ಅರ್ಧ ಗಂಟೆಯಾದರೂ ತಡವಾಗಿ ಬರುತ್ತವೆ. ಈ ವೇಳೆ ಗಾಳಿ ಮಳೆಯಲ್ಲಿ ಕಾಯಬೇಕಾದ ದುಸ್ಥಿತಿ ಪ್ರಯಾಣಿಕರದ್ದು.
ಶೌಚಾಲಯಕ್ಕೆ ಹೆದ್ದಾರಿ ದಾಟಬೇಕು
ಇಲ್ಲಿ ವಯಸ್ಕರು ಮತ್ತು ಮಹಿಳೆಯರ ಸ್ಥಿತಿ ಶೋಚನೀಯ. ಶೌಚಾಲಯಕ್ಕೆ ತೆರಳಲೂ ರಾ.ಹೆ. ಹೆದ್ದಾರಿ ದಾಟಬೇಕು. ದೂರ ಪ್ರಯಾಣವೆಂದ ಮೇಲೆ ಸಹಜವಾಗಿ ಒಂದಷ್ಟು ಬ್ಯಾಗ್‌ಗಳಿರುತ್ತವೆ. ಅದರ ಜವಾಬ್ದಾರಿಯೂ ನಿರ್ವಹಿಸಬೇಕು.
ಸರ್ವಿಸ್ ರೋಡ್ ಬಳಕೆ
ದೂರದ ಊರಿಗೆ ತೆರಳುವ ಬಸ್‌ಗಳು ಸಿಟಿ ಸೆಂಟರ್ ಬಳಿಯಿಂದ ಸರ್ವಿಸ್ ರೋಡ್‌ನಲ್ಲೇ ಸಂಚರಿಸಿದರೆ ಒಂದಷ್ಟು ಅನುಕೂಲವಾಗಲಿದೆ.
ತಂಗುದಾಣ ಅಗತ್ಯ
ಪ್ರಯಾಣಿಕರ ಅನುಕೂಲಕ್ಕಾಗಿ ತಕ್ಷಣ ಚಿಕ್ಕ ತಂಗುದಾಣವನ್ನಾದರೂ ನಿರ್ಮಿಸಬೇಕು. ಸರ್ವಿಸ್ ರಸ್ತೆಯಲ್ಲೇ ಈ ಬಸ್‌ಗಳು ಸಂಚರಿಸಿದರೆ ಮತ್ತಷ್ಟು ಸಹಾಯವಾಗಲಿದೆ.
– ಬಿ.ಸತೀಶ್ ಶೆಣೈ, ಬ್ರಹ್ಮಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.