ಪೊಸ್ರಾಲು: ಪ್ರಯಾಣಿಕರ ತಂಗುದಾಣಕ್ಕೆ ಕಾಯಕಲ್ಪ
Team Udayavani, Aug 29, 2018, 1:30 AM IST
ಬೆಳ್ಮಣ್: ಮುಂಡ್ಕೂರು ಗ್ರಾ.ಪಂ.ನ ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ದೇಗುಲದ ಮಹಾದ್ವಾರದ ಬಳಿ ಪ್ರಯಾಣಿಕರ ಅನುಕೂಲತೆಗಾಗಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಈ ಬಗ್ಗೆ ಉದಯವಾಣಿ ಜನಪರ ಕಾಳಜಿವರದಿ ಪ್ರಕಟಿಸಿದ ಬೆನ್ನಲ್ಲೇ ತಂಗುದಾಣದ ರಿಪೇರಿ ಕಾರ್ಯ ನಡೆದಿದೆ. ತಂಗುದಾಣವನ್ನು ನಿರ್ಮಿಸಿದ್ದ ಶ್ರೀಧರ ಸನಿಲ್ ರಿಪೇರಿ ನಡೆಸಿದ್ದು, ಈ ಮೂಲಕ ತಂಗುದಾಣಕ್ಕೆ ಕಾಯಕಲ್ಪ ಒದಗಿದಂತಾಗಿದೆ. ಪೊಸ್ರಾಲು ದೇಗುಲದ ತಿರುವಿನ ಬಳಿಯಲ್ಲಿ 18 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಪ್ರಯಾಣಿಕರ ತಂಗುದಾಣ ಪಾಳು ಬಿದ್ದಿದ್ದು ಕೂಡಲೇ ದುರಸ್ತಿಪಡಿಸಿ ಸಾರ್ವಜನಿಕರ ಸೇವೆಗೆ ಒದಗಿಸಿಕೊಡಬೇಕೆಂದಿ ಈ ಭಾಗದ ನೂರಾರು ಜನರ ಬೇಡಿಕೆಯಾಗಿತ್ತು.
ರವಿವಾರ ಪ್ರಯಾಣಿಕರ ತಂಗುದಾಣವನ್ನು ದುರಸ್ತಿಪಡಿಸಿದ ಬಳಿಕ ಪತ್ರಿಕೆಯ ಜತೆ ಶ್ರೀಧರ್ ಅವರು ಮಾತನಾಡಿ, ನನ್ನ ಹಿರಿಯ ಸಹೋದರನ ಸ್ಮರಣಾರ್ಥ ತಂಗುದಾಣವನ್ನು ಈ ಹಿಂದೆ ನಿರ್ಮಿಸಲಾಗಿತ್ತು. ಗ್ರಾ.ಪಂ.ಗೆ ತಂಗುದಾಣವನ್ನು ಈವರೆಗೆ ಹಸ್ತಾಂತರಿಸಿಲ್ಲ. ಸದ್ಯಕ್ಕೆ ನನ್ನ ಸ್ವಂತ ಖರ್ಚಿನಲ್ಲಿ ರಿಪೇರಿ ನಡೆಸಿದ್ದೇನೆ. ಮುಂದೆಯೂ ಕೂಡ ಈ ತಂಗುದಾಣದ ಜವಾಬ್ದಾರಿ ನನ್ನದೇ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.