ಎಲ್ಲೆಂದರಲ್ಲಿ ಬಸ್ಸು ನಿಲುಗಡೆ; ಬೇಕಿಲ್ಲಿ ಸುಸಜ್ಜಿತ ಬಸ್ಸು ತಂಗುದಾಣ
Team Udayavani, Jul 13, 2017, 2:20 AM IST
ಮಲ್ಪೆ: ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 66ಕ್ಕೆ ತಾಗಿಕೊಂಡಿರುವ ಕಲ್ಯಾಣಪುರ ಸಂತೆಕಟ್ಟೆ ನಗರ ಅಪಾಯಕಾರಿ ತಾಣವಾಗಿ ಪರಿಣಮಿಸುತ್ತಿದ್ದು ಆಗಿಂದ್ದಾಗೆ ಇಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳು ಇದಕ್ಕೆ ಪ್ರಮುಖ ನಿದರ್ಶನವಾಗಿದೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ರಸ್ತೆ ನಿರ್ಮಾಣ ಮತ್ತು ವಾಹನಗಳ ಒತ್ತಡವೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ. ನಿತ್ಯ ಸಾವಿರಾರು ಜನ ಪ್ರಯಾಣಿಸುವ ಉಡುಪಿ ನಗರಸಭಾ ವ್ಯಾಪ್ತಿಯ ಈ ಪ್ರಮುಖ ಸ್ಥಳವಾದ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಪ್ರಯಾಣಿಕರಿಗೆ ತಂಗಲು ಒಂದು ಬಸ್ಸು ನಿಲ್ದಾಣದ ವ್ಯವಸ್ಥೆ ಇಲ್ಲದೆ ಅಲ್ಲಲ್ಲಿ ಜನದಟ್ಟಣೆ ಉಂಟಾಗಿ ಜನರಿಗೆ ಎಲ್ಲಿ ಹೋಗಬೇಕು, ಎಲ್ಲಿ ನಿಲ್ಲಬೇಕು ಎನ್ನುವುದು ತಿಳಿಯದೇ ಅತ್ತಿತ್ತ ಪೇಚಾಡುವ ಸ್ಥಿತಿಯೂ ನಿರ್ಮಾಣವಾಗಿದೆ. ಹಾಗಾಗಿ ಇಲ್ಲಿನ ರಸ್ತೆಯಲ್ಲಿ ಸಂಚರಿಸುವುದು ಪ್ರಯಾಣಿಕರಿಗೆ ಮತ್ತು ವಾಹನ ಸವಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು ಸಂತೆಕಟ್ಟೆ ಇದೀಗ ಅಪಾಯಕಾರಿ ಜಂಕ್ಷನ್ ಪಟ್ಟವನ್ನು ಪಡೆದುಕೊಂಡಿದೆ.
ಹೂಡೆ, ಬೆಂಗ್ರೆ ಕೆಮ್ಮಣ್ಣು ಗಳಿಂದ ಬಂದ ಸಿಟಿ ಬಸ್ಸುಗಳು ಸರ್ವಿಸ್ ರಸ್ತೆಯಲ್ಲಿ ಪ್ರಯಾ ಣಿಕರನ್ನು ಇಳಿಸದೆ ರಾಷ್ಟ್ರೀಯ ಹೆದ್ದಾರಿಯ ಇನ್ನೊಂದು ಮಗ್ಗುಲಲ್ಲಿ ಇಳಿಸುದರಿಂದ ಶಾಲಾ ಮಕ್ಕಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಕೊಂಡು ಹೆದ್ದಾರಿ ದಾಟುವ ಪ್ರಮೇಯ ಒದಗಿದೆ. ಹೆದ್ದಾರಿ ಜಂಕ್ಷನ್ ಬಳಿ ಬಸ್ಸುಗಳು ಎಲ್ಲೆಂದರಲ್ಲಿ ನಿಲು ಗಡೆ ಮಾಡುವುದು, ರಸ್ತೆ ತಿರುವಿನಲ್ಲೆ ವಾಹನ ಗಳು ಅತೀ ವೇಗವಾಗಿ ಬಂದು ತಿರುವು ಪಡೆಯುದರಿಂದ ಮೂರು ಕಡೆ ಒಂದೇ ಬಾರಿ ವಾಹನ ಸಂಚರಿಸುವುದರಿಂದ ಇಕ್ಕಟಿನ ನಡುವೆ ವಾಹನ ಸವಾರರಿಗೆ ಗೊಂದಲವಾಗಿ ಪದೇ ಪದೇ ಅಪಘಾತಗಳು ನಡೆಯುತ್ತಲೇ ಇರುತ್ತದೆ ಎಂದು ನಾಗರಿಕರು ಆರೋಪಿಸುತ್ತಾರೆ.
ರಸ್ತೆಯೇ ಬಸ್ಸು ನಿಲ್ದಾಣ
ನಿತ್ಯ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಕಚೇರಿ ಹಾಗೂ ಇನ್ನಿತರ ಕೆಲಸಗಳಿಗೆ ಹೋಗುವ ಮಂದಿ ಹೆದ್ದಾರಿ ಮೇಲೆಯೇ ನಿಲ್ಲಬೇಕು. ಇದರಿಂದ ಅಪಘಾತಗಳು ಉಂಟಾಗುವ ಸಾಧ್ಯತೆಗಳು ಜಾಸ್ತಿ ಇದೆ. ಬಸ್ಸು ನಿಲ್ದಾಣ ಇಲ್ಲದೇ ಇರುವುದರಿಂದ ಇಲ್ಲಿಗೆ ಬರುವವರು ರಸ್ತೆ ಬದಿಯೇ ನಿಂತು ಬಸ್ಸು ಹತ್ತಬೇಕು. ಹೊರಗಿನಿಂದ ಬಂದವರಿಗೆ ಇಲ್ಲಿನ ದಿಕ್ಕು ತಪ್ಪುವುದು ಸಹಜವಾಗಿದೆ. ಇಲ್ಲಿ ಜನರು ಮಳೆ ಬಿಸಿಲಿಗೆ ರಸ್ತೆ ಬದಿಯಲ್ಲೆ ಬಸ್ಸು ಕಾಯಬೇಕಾಗಿರುವುದರಿಂದ ರಸ್ತೆಯೇ ಬಸ್ಸು ನಿಲ್ದಾಣವಾಗಿದೆ.
ಇನ್ನು ರವಿವಾರ ನಡೆಯುವ ಸಂತೆಯ ದಿನ ಜನರ ಸಂಕಟ ಹೇಳತೀರದು. ಸಂತೆಗೆ ಬಂದ ವಯಸ್ಸಾದ ಮಹಿಳೆಯರು ಪುರುಷರು ಇಲ್ಲಿನ ಯಾತಕೆ ಬಂದು ಸಿಕ್ಕಿ ಬಿದ್ದೆನೋ ಎಂದು ಪರಿತಪಿಸಿಕೊಳ್ಳುತ್ತಾರೆ.ಬಸ್ಸು ತಂಗುದಾಣಕ್ಕೆ ಆಗ್ರಹ
ಸಂತೆಕಟ್ಟೆಯ ಸರ್ವಿಸ್ ರಸ್ತೆಯಲ್ಲಿ ಉಡುಪಿ ಕಡೆಗೆ ಹೋಗುವ ಮತ್ತು ಕುಂದಾಪುರದ ಕಡೆಗೆ ಹೋಗಲು ಇಲ್ಲೊಂದು ತಂಗುದಾಣ ಅಗತ್ಯಬೇಕು ಎಂಬ ಬೇಡಿಕೆ ಇಲ್ಲಿನ ನಾಗರಿಕರದ್ದಾಗಿದೆ. ಹಲವಾರು ವರ್ಷಗಳ ಹಿಂದೆ ಇಲ್ಲಿದ್ದ ಬಸ್ಸು ನಿಲ್ದಾಣವನ್ನು ಎರಡು ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿ ಚತುಷ್ಪತಗೊಳಿಸುವ ಹಿನ್ನಲೆಯಲ್ಲಿ ತೆರವುಗೊಳಿಸಲಾಗಿದೆ. ಅಂದಿನಿಂದ ಇವತ್ತಿನವರೆಗೂ ಜನರು ರಸ್ತೆಬದಿಯಲ್ಲೆ ನಿಲ್ಲಬೇಕಾಗಿದೆ.
– ನಟರಾಜ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.