ಬಸ್ ಸಂಚಾರ ಸ್ಥಗಿತ : ನೆಂಪು ಕಾಲೇಜು ಮಕ್ಕಳಿಗೆ ಸಂಕಷ್ಟ
ಅಂಪಾರು - ನೇರಳಕಟ್ಟೆ - ವಂಡ್ಸೆ ಮಾರ್ಗ
Team Udayavani, Jul 30, 2019, 5:41 AM IST
ಕುಂದಾಪುರ: ಉಡುಪಿಯಿಂದ ವಂಡ್ಸೆ, ಕೊಲ್ಲೂರಿಗೆ ಶಾಲಾ- ಕಾಲೇಜು ಮಕ್ಕಳಿಗೆ ಅನುಕೂಲವಾಗುವಂತೆ ಸಂಚರಿಸುತ್ತಿದ್ದ ಖಾಸಗಿ ಬಸ್‌ವೊಂದು ಕಳೆದ 1 ತಿಂಗಳಿನಿಂದ ಸಂಚಾರವನ್ನು ಸ್ಥಗಿತಗೊಳಿಸಿದ್ದು, ಇದರಿಂದ ನೆಂಪು ಪ.ಪೂ. ಕಾಲೇಜಿಗೆ ಅಂಪಾರು, ವಾಲೂ¤ರು, ನೇರಳಕಟ್ಟೆಯಿಂದ ಬರುವ ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಕಳೆದ ಒಂದೂವರೆ ತಿಂಗಳಿನಿಂದ ಉಡುಪಿಯಿಂದ ಕೊಲ್ಲೂರಿಗೆ ಅಂಪಾರು – ನೇರಳಕಟ್ಟೆ – ನೆಂಪು ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ ಸಂಚಾರವನ್ನು ಸ್ಥಗಿತಗೊಳಿಸಿರುವುದರಿಂದ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ.
4 ಬಾರಿ ಸಂಚಾರ
ಉಡುಪಿಯಿಂದ ಈ ಖಾಸಗಿ ಬಸ್ ದಿನಕ್ಕೆ 4 ಬಾರಿ ಸಂಚರಿಸುತ್ತಿತ್ತು. ಬೆಳಗ್ಗೆ ಉಡುಪಿಯಿಂದ ಕೊಲ್ಲೂರಿಗೆ, ಮಧ್ಯಾಹ್ನ ಹಾಗೂ ಸಂಜೆ ಉಡುಪಿಯಿಂದ ವಂಡ್ಸೆಯವರೆಗೆ ಸಂಚರಿಸುತ್ತಿತ್ತು. ಆದರೆ ಏಕಾಏಕಿ ಈ ಬಸ್ ಸಂಚಾರ ಸ್ಥಗಿತಗೊಳಿಸಿರುವುದರಿಂದ ನಿತ್ಯ ಬೆಳಗ್ಗೆ ಹಾಗೂ ಸಂಜೆ ಹೊತ್ತು ಪ್ರಯಾಣಿಸುತ್ತಿದ್ದ ಮಕ್ಕಳು ಸಹಿತ ನೂರಾರು ಮಂದಿಗೆ ಸಂಚಾರ ಸಂಕಷ್ಟ ಎದುರಾಗಿದೆ.
ಈಗ ಹೆಬ್ರಿಯಿಂದ ಕೊಲ್ಲೂರಿಗೆ 8.20ಕ್ಕೆ ಒಂದು ಬಸ್ ಸಂಚರಿಸಿದರೆ, ಆ ಬಳಿಕ ಮತ್ತೆ ಬಸ್ ಬರುವುದು ಮಧ್ಯಾಹ್ನ 1ಕ್ಕೆ. ಅದು ಕೊಲ್ಲೂರಿನಿಂದ ವಂಡ್ಸೆ, ನೇರಳಕಟ್ಟೆ, ಅಂಪಾರು ಆಗಿ ಉಡುಪಿಗೆ, ಮತ್ತೆ 3.15ಕ್ಕೊಂದು ಬಸ್ ಹೆಬ್ರಿಯಂದ ಕೊಲ್ಲೂರಿಗೆ ಈ ಮಾರ್ಗವಾಗಿ ಸಂಚರಿಸುತ್ತದೆ. ಆ ಬಳಿಕ ಮತ್ತೆ ಈ ಮಾರ್ಗದಲ್ಲಿ ಯಾವುದೇ ಬಸ್ ಸಂಚಾರ ಇಲ್ಲ. ಈ ಮಾರ್ಗದಲ್ಲಿ ಸರಕಾರಿ ಬಸ್ ಆದರೂ ಸಂಚಾರ ಆರಂಭಿಸಲಿ ಎಂಬುದು ಸ್ಥಳೀಯರ ಆಗ್ರಹ.
ಬೇರೆ ವಾಹನಗಳ ಅವಲಂಬನೆ
ಕಾಲೇಜು ಹೆಚ್ಚಿನ ದಿನಗಳಲ್ಲಿ 4 ಗಂಟೆಯವರೆಗೆ ಇರುತ್ತದೆ. ಆದರೆ ಅಪರಾಹ್ನ 3.15 ರ ನಂತರ ಈ ಮಾರ್ಗದಲ್ಲಿ ಬಸ್ ಸಂಚಾರ ಇಲ್ಲದೇ ಇರುವುದರಿಂದ ಕಾಲೇಜು ವಿದ್ಯಾರ್ಥಿಗಳು ಇತರ ಖಾಸಗಿ ವಾಹನಗಳ ಮೊರೆ ಹೋಗುವಂತಾಗಿದ್ದು, ಈ ಸಮಸ್ಯೆಗೆ ಪರಿಹಾರ ಎದುರು ನೊಡುತ್ತಿದ್ದಾರೆ.
ಪರಿಶೀಲನೆ ನಡೆಸಿ, ಸೂಕ್ತ ಕ್ರಮ
ಅಂಪಾರು, ನೇರಳಕಟ್ಟೆ, ನೆಂಪು ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ ಸಂಚಾರ ಸ್ಥಗಿತದಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈಗಾಗಲೇ ವಾಲೂ¤ರು, ಕಂಡೂÉರು ಮಾರ್ಗದಲ್ಲಿ ಒಂದು ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುತ್ತಿದ್ದು, ಅದನ್ನು ಅಂಪಾರು ಮಾರ್ಗದಲ್ಲಿ ಸಂಚರಿಸುವಂತೆ ಮಾಡಿದರೆ ಆಗುವ ಸಾಧಕ-ಬಾಧಕ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ರಾಜೇಶ್ ಮೊಗವೀರ,
ಡಿಪೋ ಮ್ಯಾನೇಜರ್, ಕೆಎಸ್‌ಆರ್‌ಟಿಸಿ ಕುಂದಾಪುರ ವಿಭಾಗ
ಸರಕಾರಿ ಬಸ್ ಬರಲಿ
ಅಂಪಾರುವಿನಿಂದ ವಂಡ್ಸೆ, ನೆಂಪು, ನೇರಳಕಟ್ಟೆಗೆ ಈಗ ಬರಬೇಕಾದರೆ ಬಸ್ ಇಲ್ಲದೇ ತುಂಬಾ ಸಮಸ್ಯೆಯಾಗುತ್ತಿದೆ. ಹಿಂದೆ 4 ಟ್ರಿಪ್ ಮಾಡುತ್ತಿದ್ದ ಖಾಸಗಿ ಬಸ್ ಈಗ ಬರುತ್ತಿಲ್ಲ. ಈ ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ಹೊತ್ತು ಸರಕಾರಿ ಬಸ್ ಸಂಚಾರ ವ್ಯವಸ್ಥೆ ಮಾಡಲಿ.
-ಪ್ರಕಾಶ್ ಭಟ್ ನೆಂಪು,
ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.