ಉಚ್ಚಿಲ ಹೊಸ ಬಸ್ ನಿಲ್ದಾಣಕ್ಕೆ ಹಾನಿ: ಕ್ರಮಕ್ಕೆ ಆಗ್ರಹ
Team Udayavani, Jan 28, 2019, 12:50 AM IST
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ಬಳಿ ನಮ್ಮೂರ ನಮ್ಮ ಜನ ಸಂಘಟನೆಯ ವತಿಯಿಂದ ನಿರ್ಮಿಸಲ್ಪಟ್ಟು ಕಳೆದ ವಾರವಷ್ಟೇ ಉದ್ಘಾಟನೆಗೊಂಡಿದ್ದ ಮಹಾಲಕ್ಷ್ಮೀ ಬಸ್ ನಿಲ್ದಾಣವನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ.
ಬಸ್ ನಿಲ್ದಾಣಕ್ಕೆ ಕಟ್ಟಲಾಗಿದ್ದ ಇಟ್ಟಿಗೆ ಕಲ್ಲುಗಳನ್ನು ಒಡೆದು ಹಾಕಿದ್ದು, ಇದರಿಂದ ಬಸ್ ನಿಲ್ದಾಣಕ್ಕೂ ಹಾನಿಯುಂಟಾಗಿದೆ. ಸಾರ್ವಜನಿಕ ಉಪಯೋಗಕ್ಕೆಂದು ಸಂಸ್ಥೆಯೊಂದು ನಿರ್ಮಿಸಿಕೊಟ್ಟಿರುವ ಬಸ್ ನಿಲ್ದಾಣಕ್ಕೆ ಹಾನಿಯುಂಟು ಮಾಡಿರುವುದು ಖಂಡನೀಯ. ಬಸ್ ನಿಲ್ದಾಣಕ್ಕೆ ಹಾನಿಯುಂಟು ಮಾಡಿರುವ ಆರೋಪಿಗಳನ್ನು ಪತ್ತೆ ಹಚ್ಚುವಂತೆ ನಮ್ಮೂರ ನಮ್ಮ ಜನ ಸಂಘಟನೆ ಒತ್ತಾಯಿಸಿದೆ.
ಈ ಬಸ್ ತಂಗುದಾಣದಲ್ಲಿ ರಾತ್ರಿ ಸಮಯದಲ್ಲಿ ಗಾಂಜಾ ವ್ಯಸನಿಗಳು ತಂಗುತ್ತಿದ್ದು, ರಾತ್ರಿ ಗಸ್ತು ತಿರುಗುವ ಪೊಲೀಸರು ಈ ಬಗ್ಗೆ ಎಚ್ಚರಿಕೆ ವಹಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.