ಬೈಂದೂರು ವಿಧಾನಸಭಾ ಕ್ಷೇತ್ರ : ಐದು ಸಖೀ ಮತಗಟ್ಟೆಗಳು
Team Udayavani, Apr 23, 2019, 6:29 AM IST
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಮ್ಮಾಡಿಯಲ್ಲಿ 2 ಹಾಗೂ ತಲ್ಲೂರಿನಲ್ಲಿ 3 ಒಟ್ಟು 5 ಮತಗಟ್ಟೆಗಳನ್ನು “ಸಖೀ’ ಮತಗಟ್ಟೆಯಾಗಿ ಅಲಂಕಾರಗೊಳಿಸಲಾಗಿದೆ.
ಏನಿದರ ವಿಶೇಷತೆ?
ಈ ಸಖೀ ಮತಗಟ್ಟೆಯಲ್ಲಿ ಪೂರ್ತಿ ಮಹಿಳಾ ಸಿಬಂದಿಯೇ ಕಾರ್ಯ ನಿರ್ವಹಿಸಲಿದ್ದಾರೆ. ಮಹಿಳಾ ಮತದಾರರು ಹೆಚ್ಚು ಹೊಂದಿರುವ ಮತಗಟ್ಟೆಯನ್ನು ಸಖೀ ಮತಗಟ್ಟೆಯಾಗಿ ಗುರುತಿಸಲಾಗಿದೆ. ಮತಗಟ್ಟೆಯನ್ನು ತಳಿರು ತೋರಣ ಮತ್ತು ಬಣ್ಣ ಬಣ್ಣಗಳ ಬಲೂನ್‌ಗಳನ್ನು, ಹೂವಿನ ಮಾಲೆಗಳಿಂದ ಶುಭ ಕಾರ್ಯಗಳಿಗೆ ಅಲಂಕಾರ ಮಾಡುವ ರೀತಿಯಲ್ಲಿ ಸಿಂಗರಿಸಲಾಗಿದೆ.
ಆದರೆ ಮಹಿಳೆಯರು ಮಾತ್ರವಲ್ಲದೆ ಹಿರಿಯರು, ಯುವಕರು/ಯುವತಿಯರು ಸಹಿತ ಎಲ್ಲರೂ ಕೂಡ ಇಲ್ಲಿ ಮತ ಚಲಾಯಿಸ ಬಹುದು. ಈ ಮತಗಟ್ಟೆಗಳಲ್ಲಿ ಉತ್ತಮ ಪ್ರಮಾಣದ ಮತದಾನದ ನಿರೀಕ್ಷೆಯಲ್ಲಿ ವಿಶೇಷವಾಗಿ ಅಲಂಕಾರ ಮಾಡಲಾಗಿದೆ.
ನಿರ್ಭೀತಿಯಿಂದ ಮತದಾನ ಮಾಡಿ
ಎಲ್ಲ ಮತಗಟ್ಟೆಗಳಿಗೆ ಹಿರಿಯರಿಗೆ, ಅಂಗವಿಕಲರಿಗೆ, ಗರ್ಭಿಣಿಯರಿಗೆ ಮತ ಗಟ್ಟೆಗೆ ಬರಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆ ಮಾಡಲಾಗಿದೆ. ದೃಷ್ಟಿ ದೋಷವುಳ್ಳವರಿಗೆ ಸಹಾಯವಾಗಲು ಬ್ರೈಲ್ ಬ್ಯಾಲೆಟ್ ಪೇಪರ್‌ಗಳನ್ನು ಕೂಡ ಪ್ರತಿ ಮತಗಟ್ಟೆಗೆ ಸರಬರಾಜು ಮಾಡಲಾಗಿದೆ.
ಅಶಕ್ತರಿಗೆ ನೆರವು ನೀಡಲು ಪ್ರತಿ ಮತಗಟ್ಟೆಯಲ್ಲಿ ಸ್ವಯಂ ಸೇವಕ ರೊಬ್ಬರನ್ನು ನಿಯೋಜಿಸಲಾಗಿದ್ದು, ಮತದಾರರು ನಿರ್ಭೀತಿಯಿಂದ ಮತದಾನ ಮಾಡುವಂತೆ ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿ ಕಿರಣ್ ಪೆಡೆ°àಕರ್ ಅವರು ಮನವಿ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.