ಬೈಂದೂರು: ಎಟಿಎಂ ಕಳವಿಗೆ ಯತ್ನ
Team Udayavani, May 5, 2019, 6:01 AM IST
ಬೈಂದೂರು: ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಒಡೆದು ಹಣ ದೋಚಲು ವಿಫಲ ಪ್ರಯತ್ನ ಮಾಡಿದ ಘಟನೆ ಬೈಂದೂರಿನಲ್ಲಿ ನಡೆದಿದೆ.
ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು ಗ್ಯಾಸ್ ಸಿಲಿಂಡರ್ ಬಳಸಿ ಬೆಂಕಿಯಿಂದ ಸುಟ್ಟಿದ್ದು,ಮೆಷಿನ್ ಮುಂಭಾಗವನ್ನು ಜಖಂಗೊಳಿಸಿದ್ದಾರೆ.ಸಿಸಿಕೆಮರಾದ ಹಾರ್ಡ್ಡಿಸ್ಕ್ ಕೂಡ ಸುಟ್ಟುಹೋಗಿದೆ. ಕಳವು ನಡೆ ಸಲು ವಿಫಲರಾದ ಬಳಿಕ ಗ್ಯಾಸ್ ಸಿಲಿಂಡರ್ ಬಿಟ್ಟು ಪರಾರಿಯಾಗಿದ್ದಾರೆ. ಕಳ್ಳರ ಕೃತ್ಯದಿಂದ ಸುಮಾರು 1.25 ಲ.ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಶಿರೂರಿನ ಮೈದಿನಪುರದ ಅಂಗಡಿ ಯೊಂದರಿಂದ ಗ್ಯಾಸ್ ಸಿಲಿಂಡರ್ ಕಳವಾಗಿದ್ದು, ಇದೇ ಸಿಲಿಂಡರನ್ನು ಕಳ್ಳತನಕ್ಕೆ ಬಳಸಲಾಗಿದೆ ಎಂದು ತಿಳಿದು ಬಂದಿದೆ.ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.