ಕಾಲುಸಂಕದಿಂದ ಮುಕ್ತಿ ಕಾಣದ ಕಲ್ಲಣ್ಕಿ – ಕುಂಜಳ್ಳಿ


Team Udayavani, Jun 30, 2018, 6:00 AM IST

2806bdre1.jpg

ಬೈಂದೂರು: ಸರಕಾರ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಸಹ ಇಂದಿಗೂ ಮೂಲ ಸೌಕರ್ಯದ ಕೊರತೆಯಿಂದ ಹೈರಾಣಾಗಿರುವ ಹಲವಾರು ನಿದರ್ಶನಗಳಿವೆ. ಕಳೆದ ಹತ್ತಾರು ವರ್ಷಗಳಿಂದ ಸಂಪರ್ಕ ಸೇತುವೆಗಾಗಿ ಹೋರಾಟ ನಡೆಸುತ್ತಿದ್ದ ಬೈಂದೂರು ಸಮೀಪದ ಕಲ್ಲಣ್ಕಿ – ಕುಂಜಳ್ಳಿನ ಜನತೆ ಈ ವರ್ಷವು ಮರದ ಹಲಗೆಯಿಂದ ನಿರ್ಮಿಸಿದ ತೂಗು ಸೇತುವೆಯ ಮೂಲಕ ಮಳೆಗಾಲ ಕಳೆಯಬೇಕಿದೆ.

ಬೈಂದೂರು ಹಾಗೂ ಯಡ್ತರೆ ಗ್ರಾಮ ಪಂಚಾಯತ್‌ ಗಡಿ ಭಾಗದಲ್ಲಿರುವ  ಕಲ್ಲಣ್ಕಿ, ಕುಂಜಳ್ಳಿ, ಮಧ್ದೋಡಿ, ತೋಕ್ತಿ ಸೇರಿದಂತೆ ಮೊದಲಾದ ಕುಗ್ರಾಮಗಳು ಬೈಂದೂರು ಪೇಟೆಯಿಂದ ಸುಮಾರು 13 ಕಿ.ಮೀ. ದೂರದಲ್ಲಿದೆ.
ಇಲ್ಲಿನ ಸಾರ್ವಜನಿಕರು, ವಿದ್ಯಾರ್ಥಿಗಳು ಪ್ರತಿದಿನ ಬೈಂದೂರಿಗೆ ಬರಬೇಕಾದರೆ ಗಂಗನಾಡು ಹೊಳೆಯನ್ನು ದಾಟಿ ಬರ ಬೇಕಾಗಿದೆ. ಆದರೆ ಮಳೆಗಾಲದಲ್ಲಿ ಈ ಹೊಳೆಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು ಹೊಳೆ ದಾಟಲು ಇಲ್ಲಿನ ಸ್ಥಳೀಯರು ಮರದ ದಿಮ್ಮಿಗಳನ್ನು ಬಳಸಿ ತಾತ್ಕಾಲಿಕ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ.  ಕೆಲವೊಮ್ಮೆ ಮಳೆ ಹೆಚ್ಚಾದಾಗ ಈ ಮರದ ಕಾಲುಸಂಕ ನದಿಪಾಲಾಗುತ್ತದೆ.

ಈ ಭಾಗದಲ್ಲಿ ಸುಮಾರು 350ರಿಂದ 400 ಪರಿಶಿಷ್ಟ ಜಾತಿ ಸೇರಿದಂತೆ ವಿವಿಧ  ಸಮುದಾಯಕ್ಕೆ ಸೇರಿದ ಮನೆಗಳಿವೆ.ಸುಮಾರು ಒಂದು ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಇಲ್ಲಿ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಈ ಕಾಲು ಸಂಕದ ಮೂಲಕ ಶಾಲಾ ಕಾಲೇಜಿಗೆ ಹೋಗಬೇಕಾಗಿದೆ. ಮಳೆಗಾಲದಲ್ಲಿ ಪ್ರತಿದಿನವೂ ಇಲ್ಲಿನ ಜನತೆ ಯಾತನಮಯ ಜೀವನ ನಡೆಸಬೇಕಾಗಿದೆ.

ದುರ್ಗಮ ಪ್ರದೇಶವಾದ ಕಾರಣ 
ಇಲಾಖೆಯ ನಿರ್ವಹಣೆಯ ಕೊರತೆ ಯಿಂದ ಸಮರ್ಪಕ ವಿದ್ಯುತ್‌  ದೊರೆಯುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. 
ಬೈಂದೂರಿನಿಂದ ಮಧ್ದೋಡಿಯ ತನಕ ಡಾಮರುಗೊಂಡ  ರಸ್ತೆಯಿದೆ. ಕಲ್ಲಣ್ಕಿ, ಕುಂಜಳ್ಳಿ, ತೋಕ್ತಿ ಮೊದ
ಲಾದ ಊರುಗಳಿಗೆ ರಸ್ತೆ,  ಸೇತುವೆಯೂ ಇಲ್ಲ. ಈಗಾಗಲೇ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಸಿ ದ್ದಾರೆ. 

ಮುಂದಿನ ದಿನದಲ್ಲಾದರೂ ಕ್ಷೇತ್ರದ ನೂತನ ಶಾಸಕರು ಸೇರಿದಂತೆ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಇಲ್ಲಿನ ಜನತೆಯ ಸಮಸ್ಯೆಗೆ ಸ್ಪಂದಿಸಬೇಕಾಗಿದೆ

ಗಮನಕ್ಕೆ ತರಲಾಗಿದೆ
ಕಲ್ಲಣ್ಕಿ ಕುಂಜಳ್ಳಿ ಜನರು ಕಳೆದ ಹಲವು ವರ್ಷಗಳಿಂದ ಸೇತುವೆಗಾಗಿ ಬೇಡಿಕೆ ನೀಡುತ್ತಿದ್ದಾರೆ.ಪಂಚಾಯತ್‌ ವ್ಯಾಪ್ತಿಯಲ್ಲಿ ಸೇತುವೆ ನಿರ್ಮಾಣ ಸಾಧ್ಯವಿಲ್ಲ.ಹೀಗಾಗಿ ಸರಕಾರದ ಅನುದಾನ ನೀಡುವ ಬಗ್ಗೆ ಈಗಾಗಲೇ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ.ಸೇತುವೆ ನಿರ್ಮಾಣ ಈ ಭಾಗಕ್ಕೆ ಅತ್ಯಗತ್ಯವಾಗಿದೆ.
– ನಾಗರಾಜ ಶೆಟ್ಟಿ,ಗ್ರಾ.ಪಂ. ಸದಸ್ಯ 

 ನಿತ್ಯದ ಗೋಳು 
ಕಳೆದ ಹತ್ತಾರು ವರ್ಷಗಳಿಂದ ಇಲ್ಲಿನ ಹೊಳೆಗೆ ಸೇತುವೆ ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳೂ ಸೇರಿದಂತೆ ಇಲಾಖೆಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ.ಸೇತುವೆ ಸಮಸ್ಯೆ ನಿತ್ಯದ ಗೋಳಾಗಿದೆ. ಜನಪ್ರತಿನಿಧಿಗಳು ಸ್ಪಂದಿಸುವ ಭರವಸೆ ಇದೆ. 
– ಜೋಸೆಫ್‌ ಸ್ಥಳೀಯರು

ಟಾಪ್ ನ್ಯೂಸ್

15-mandya

Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ

Hubli; Pig farmer assault case; Four arrested including sister’s husband

Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕ್ಮಸಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಮೆಲ್ಬೋರ್ನ್‌ ಗೆಲ್ಲಲು ಭಾರತಕ್ಕೆ ರನ್‌ ಗುರಿ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಕೊನೆಯಲ್ಲಿ ಕಾಡಿದ ಲಿಯಾನ್‌- ಬೊಲ್ಯಾಂಡ್

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

Bengaluru: New Year celebrations allowed only till 1 am: Police Commissioner

Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್‌ ಆಯುಕ್ತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-

Delhi ಗಣರಾಜ್ಯೋತ್ಸವ; ಹೆಬ್ರಿಯ ಮಹಿಳೆಗೆ ವಿಶೇಷ ಅವಕಾಶ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

puttige-6-

Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

15-mandya

Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ

1(1

Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ  ಇನ್ನೂ ಮೀನ ಮೇಷ ಎಣಿಕೆ

Hubli; Pig farmer assault case; Four arrested including sister’s husband

Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕ್ಮಸಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.