ಬೈಂದೂರು: ಗಾಂಧಿ ಮೈದಾನ ಆಟಕ್ಕೆ ಮಾತ್ರ, ಲೆಕ್ಕಕ್ಕಿಲ್ಲ
Team Udayavani, Jul 18, 2019, 5:48 AM IST
ಬೈಂದೂರು: ಸ್ವಾತಂತ್ರ್ಯ ಪೂರ್ವದಲ್ಲೇ ಚಟುವಟಿಕೆಗಳ ಕೇಂದ್ರವಾಗಿದ್ದ, ಇಲ್ಲಿನ ಪ್ರಮುಖ ಗಾಂಧಿ ಮೈದಾನ ಸ್ವಾತಂತ್ರ್ಯ ಸಿಕ್ಕಿ ವರ್ಷಗಳಾದರೂ ಇನ್ನೂ ಅಭಿವೃದ್ಧಿ ಕಾಣದೆ ಸೊರಗಿದೆ.
ವಿದ್ಯಾರ್ಥಿಗಳಿಗೆ, ಕ್ರೀಡಾಸಕ್ತರಿಗೆ ಸೂಕ್ತ ಮೈದಾನದ ಅಗತ್ಯವಿರುವುದರಿಂದ ಗಾಂಧಿ ಮೈದಾನವೇ ಉಪಯೋಗವಾಗುತ್ತಿದೆ. ಹಲವು ವರ್ಷಗಳಿಂದ ಈ ಮೈದಾನದಲ್ಲಿ ರಾಜ್ಯ, ರಾಷ್ಟ್ರಮಟ್ಟದ ಪಂದ್ಯಾಟಗಳು ನಡೆದಿವೆ. ಇಲ್ಲಿನ ಪ.ಪೂ.ಕಾಲೇಜು ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೂ ಇದು ನಿತ್ಯದ ಆಟದ ಮೈದಾನವಾಗಿದೆ.
ದಾಖಲೆಯಲ್ಲಿ ಪರೇಡ್ ಗ್ರೌಂಡ್
ಸ್ವಾತಂತ್ರ್ಯ ಪೂರ್ವದ ಇಲ್ಲಿನ ದಾಖಲೆ ಪ್ರಕಾರ ಸ.ನಂ 150, 3ಎ3ಎ ರಲ್ಲಿ 7.93 ಎಕ್ರೆ ಜಾಗ ಸರಕಾರಿ ಪರಂಬೋ ಕ್ಯಾಂಪಸ್ ಗ್ರೌಂಡ್ ಎಂದೇ ಕೈ ಬರಹದ ಪಹಣಿಯಲ್ಲಿ ನಮೂದಾಗಿದೆ.
ಇಲ್ಲಿಯವರೆಗೆ ಯಾವ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಈ ತಾಂತ್ರಿಕ ಅಂಶದ ಬಗ್ಗೆ ಗಮನಹರಿಸದ ಪರಿಣಾಮ ಮೂಲ ದಾಖಲೆ ಬದಲಾಗಿಲ್ಲ. ಜತೆಗೆ ಇದು ಈಗಲೂ ಸೇನೆಗೆ ಸೇರಿದ್ದೇ? ಅಥವಾ ರಾಜ್ಯ ಸರಕಾರದ ಬಳಿಯೇ ಇದೆ ಎಂಬ ವಿಚಾರಕ್ಕೂ ಉತ್ತರವಿಲ್ಲದಾಗಿದೆ.
ಅನುದಾನ ವಿಳಂಬ
ತಾಲೂಕಿನಲ್ಲಿ ಉತ್ತಮ ಕ್ರೀಡಾಂಗಣ ನಿರ್ಮಾಣವಾಗಬೇಕು ಎಂಬ ಬಗ್ಗೆ 50 ಲಕ್ಷ ರೂ. ವೆಚ್ಚದ ಅನುದಾನಕ್ಕೆ ನೀಲನಕಾಶೆ ಸಿದ್ಧಪಡಿಸಿ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಆದರೆ ಕ್ರೀಡಾಂಗಣದ ದಾಖಲೆ, ಮಾಲಕತ್ವದ ವಿಚಾರ ಕುರಿತಾದ ಗೊಂದಲ ಅನುದಾನ ಲಭ್ಯತೆಗೆ ವಿಳಂಬವಾಗಿದೆ.
ಸ್ವಾತಂತ್ರೊತ್ಸವಕ್ಕೆ ಸಿದ್ಧತೆ
ತಾಲೂಕು ಘೋಷಣೆಯಾದ ಬಳಿಕ ಬೈಂದೂರಿನಲ್ಲಿ ಚುನಾವಣೆ ಪ್ರಕ್ರಿಯೆ ಹೊರತುಪಡಿಸಿದರೆ ಇತರ ದೊಡ್ಡ ಕಾರ್ಯಕ್ರಮ ನಡೆದಿಲ್ಲ. ಹೀಗಾಗಿ ಈ ವರ್ಷ ಇಲ್ಲಿ ತಾಲೂಕು ವ್ಯಾಪ್ತಿಯ ಸ್ವಾತಂತ್ರೊತ್ಸವ ಸರಕಾರದ ವತಿಯಿಂದ ಆಚರಿಸುವ ಕುರಿತು ತಹಶೀಲ್ದಾರರ ನೇತೃತ್ವದಲ್ಲಿ ಸಿದ್ಧತೆಗಳೂ ನಡೆದಿವೆ.
ತೀರ್ಮಾನಿಸಬೇಕು
ಸದ್ಯ ಗಾಂಧಿ ಮೈದಾನದಲ್ಲಿ ತಾ. ಮಟ್ಟದ ಸ್ವಾತಂತ್ರೊತ್ಸವ ಸಿದ್ಧತೆಗೆ ಮುಂದಾಗಿದ್ದೇವೆ. ಕ್ರೀಡಾಂಗಣ ಅಭಿವೃದ್ಧಿ ವಿಚಾರದಲ್ಲಿ ಇದರ ದಾಖಲೆ ತಿದ್ದುಪಡಿ ಸರಕಾರದ ಮೂಲಕ ನಡೆಯಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ವ್ಯಾಪ್ತಿಗೆ ಒಳಪಟ್ಟಿದೆ.
-ಬಸಪ್ಪ ಪಿ.ಪೂಜಾರ್, ತಹಶೀಲ್ದಾರರು ತಾಲೂಕು ಕಚೆೇರಿ ಬೈಂದೂರು
ಅಭಿವೃದ್ಧಿ ಕಂಡಿಲ್ಲ
ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರ ಮಿಲಿಟರಿ ಕವಾಯತು ನಡೆಯುತ್ತಿತ್ತು. ಎಂದು ಹಿರಿಯರ ಹೇಳುತ್ತಿದ್ದರು. ಸ್ಥಳೀಯ ಕಾಲೇಜು ಅನುಮತಿ ಪಡೆದು ಆಟದ ಮೈದಾನ ಬಳಸಿಕೊಂಡಿದೆ. ಮಿಲಿಟರಿ ಆಗಿರುವ ಕಾರಣ ಯಾವ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ದಾಖಲೆ ಬದಲಿಸುವ ಪ್ರಯತ್ನ ಮಾಡಿಲ್ಲ. ಹೀಗಾಗಿ ಕ್ರೀಡಾಂಗಣ ಅಭಿವೃದ್ಧಿ ಆಗಿಲ್ಲ.
– ಪಿ.ಶೇಷಪ್ಪಯ್ಯ ಹೆಬ್ಟಾರ್, ನಿವೃತ್ತ ಶಿಕ್ಷಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.