ಬೈಂದೂರು ತಾಲೂಕು ರಚನೆ: ಜನತೆ ಹರ್ಷ
Team Udayavani, Mar 16, 2017, 2:24 PM IST
ಬೈಂದೂರು: ಇಲ್ಲಿನ ಜಂಕ್ಷನ್‌ನಲ್ಲಿ ತಾಲೂಕು ರಚನೆ ಸಂಭ್ರಮ ಆಚರಿಸಲಾಯಿತು. ಈ ಸಂದರ್ಭ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಕೆ.ಡಿ.ಪಿ. ಸದಸ್ಯ ಎಸ್. ರಾಜು ಪೂಜಾರಿ, ಮೂಕಾಂಬಿಕಾ ರೈಲ್ವೇ ಯಾತ್ರಿ ಸಂಘದ ಅಧ್ಯಕ್ಷ ವೆಂಕಟೇಶ ಕಿಣಿ, ನಾಗರಾಜ ಗಾಣಿಗ ಬೈಂದೂರು, ಜಗದೀಶ್ ಪಟ್ವಾಲ್, ಎಸ್. ಮದನ್ ಕುಮಾರ್, ಶೇಖರ ಪೂಜಾರಿ, ವಿಜಯ್ ಶೆಟ್ಟಿ ಕಾಲೊ¤àಡು, ಗೋವಿಂದ ಮಟ್ನಕಟ್ಟೆ, ಕೆ.ವಿ. ಸತೀಶ್ ಉಪಸ್ಥಿತರಿದ್ದರು.
ಬೈಂದೂರು ತಾಲೂಕು ರಚನೆಗಾಗಿ ಬೈಂದೂರು ಜನತೆಯ ಸಹಕಾರದೊಂದಿಗೆ ನಿರಂತರ ನಾಲ್ಕು ದಶಕಗಳಿಂದ ಹೋರಾಟ ನಡೆಸುತ್ತಿದ್ದೇವೆ. ಎಲ್ಲ ಪಕ್ಷದ ಮುಖಂಡರು ಪೂರ್ಣ ಪ್ರೋತ್ಸಾಹ ನೀಡಿದ್ದಾರೆ.ಈಗಾಗಲೇ ಕಂದಾಯ ಸಚಿವರು, ಮುಖ್ಯಮಂತ್ರಿಗಳಿಗೆ ಸತತ ಮನವಿ ನೀಡಿದ್ದೇವೆ. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಮಾತ್ರವಲ್ಲದೆ ನೀಡಿದ ಭರವಸೆಯಂತೆ ತಾಲೂಕು ಘೋಷಣೆ ಮಾಡಿರುವುದು ಶ್ಲಾಘನೀಯವಾಗಿದೆ.
– ಜಗನ್ನಾಥ ಶೆಟ್ಟಿ, ಅಧ್ಯಕ್ಷರು ಬೈಂದೂರು ತಾ| ರಚನೆ ಮತ್ತು ಅಭಿವೃದ್ಧಿ ಸಮಿತಿ
ಬೈಂದೂರು ತಾಲೂಕು ಘೋಷಣೆ ಸ್ವಾಗತಾರ್ಹ. ಆದರೆ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಬೈಂದೂರು ತಾಲೂಕು ಘೋಷಣೆಯಾಗಿದೆ. ಈಗಿನ ಸರಕಾರ ಪುನರ್ ಘೋಷಣೆ ಮಾಡಿದೆ. ತಾಲೂಕು ಘೋಷಣೆ ಕೇವಲ ಚುನಾವಣೆಯ ಗಿಮಿಕ್ ಆಗದೇ ಅನುದಾನ ಬಿಡುಗಡೆ ಮಾಡಬೇಕು. ಜನರ ನಿರೀಕ್ಷೆ ಸಾಕಾರಗೊಳ್ಳಬೇಕಾಗಿದೆ.
– ಬಿ.ಎಸ್. ಸುಕುಮಾರ ಶೆಟ್ಟಿ
ಬೈಂದೂರು ತಾಲೂಕು ಘೋಷಣೆ ರೈತಸಂಘದ ಹೋರಾಟಕ್ಕೆ ಸಂದ ಜಯವಾಗಿದೆ. ಈಗಾಗಲೇ ವಿಧಾನಸೌಧ ಮತ್ತು ಬೆಳಗಾಂ ಅಧಿವೇಶನದಲ್ಲಿ ಬೈಂದೂರು ತಾಲೂಕು ರಚನೆಯಾಗುವ ಕುರಿತು ಧರಣಿ ಸತ್ಯಾಗ್ರಹ ನಡೆಸಿದ್ದೇವೆ. ತಾಲೂಕು ರಚನೆಗೆ ಶೀಘ್ರ ಅನುದಾನ ಬಿಡುಗಡೆಯಾಗಬೇಕು. ರೈತರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕು.
– ದೀಪಕ್ ಕುಮಾರ ಶೆಟ್ಟಿ, ಅಧ್ಯಕ್ಷರು ರೈತ ಸಂಘ ಉಡುಪಿ ಜಿಲ್ಲೆ.
ಶಂಕರನಾರಾಯಣ ತಾ| ರಚನೆ ಕೈಬಿಟ್ಟ ಸರಕಾರ: ನಿರಾಶೆ ಆಗಿಲ್ಲ
ಈ ಸಾಲಿನ ಬಜೆಟ್‌ನಲ್ಲಿ 21 ಜಿಲ್ಲೆಗಳ 49 ತಾಲೂಕುಗಳನ್ನು ಘೋಷಿಸಲಾಗಿದೆ. ಇದರಲ್ಲಿ ಉಡುಪಿ ಜಿಲ್ಲೆಯ ಮೂರು ತಾಲೂಕು ಸೇರಿದ್ದು, ಈ ತಾಲೂಕು ರಚನೆಯಲ್ಲಿ ಶಂಕರನಾರಾಯಣ ತಾಲೂಕು ರಚನೆಯನ್ನು ಕೈ ಬಿಟ್ಟಿರುವುದರಿಂದ ಯಾವುದೇ ನಿರಾಶೆ ಆಗಿಲ್ಲ. ಸರಕಾರವು ಶಂಕರನಾರಾಯಣದಲ್ಲಿ ನಾಡ ಕಚೇರಿಯನ್ನು ತೆರೆದು ಹೋಬಳಿ ಕೇಂದ್ರ ಮಾಡುವುದಾಗಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಭೇಟಿಯಲ್ಲಿ ತಿಳಿಸಿರುತ್ತಾರೆ. ಹೋಬಳಿ ಕೇಂದ್ರ ಮಾಡುವುದಿದ್ದಲ್ಲಿ ಬಜೆಟ್‌ನಲ್ಲಿ ಘೋಷಿಸಬೇಕೆಂದಿಲ್ಲ. ಯಾವುದೇ ಸಂದರ್ಭದಲ್ಲಿ ಸರಕಾರ ಘೋಷಣೆ ಮಾಡಬಹುದು. ಅಲ್ಲಿಯ ತನಕ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ.
– ಚಿಟ್ಟೆ ರಾಜಗೋಪಾಲ ಹೆಗ್ಡೆ, ಸಂಚಾಲಕರು, ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ
ಈಗಾಗಲೇ ಬೈಂದೂರು ತಾಲೂಕು ರಚನೆಗೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ತಾಲೂಕು ರಚನೆಗೆ ಮೀಸಲಿರುವ ಅನುದಾನ ಶೀಘ್ರ ಬಿಡುಗಡೆಯಾಗಲಿದೆ ಹಂತ ಹಂತವಾಗಿ ಉಳಿದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಕೆ.ಎಸ್.ಆರ್.ಟಿ.ಸಿ. ಡಿಪೋ ಸ್ಥಾಪನೆಗೆ ಈಗಾಗಲೇ ಪ್ರಕ್ರಿಯೆ ನಡೆಯತ್ತಿದೆ. ಮುಖ್ಯಮಂತ್ರಿಗಳು ಕರಾವಳಿ ಜಿಲ್ಲೆಯ ಬೇಡಿಕೆಯ ಕುರಿತು ವಿಶೇಷ ಮನ್ನಣೆ ನೀಡಿದ್ದಾರೆ. ಬೈಂದೂರು ಕ್ಷೇತ್ರ ಸಮಗ್ರ ಅಭಿವೃದ್ಧಿಯಾಗಲಿದೆ.
– ಕೆ. ಗೋಪಾಲ ಪೂಜಾರಿ, ಶಾಸಕರು ಬೈಂದೂರು
ಬೈಂದೂರು ಕ್ಷೇತ್ರದಲ್ಲಿ ಶಾಸಕ ಗೋಪಾಲ ಪೂಜಾರಿಯವರ ಅವಧಿಯಲ್ಲಿ ದಾಖಲೆಯ ಅಭಿವ್ರದ್ದಿ ಕಾಮಗಾರಿ ನಡೆದಿದೆ. ತಾಲೂಕು ರಚನೆಯ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡುವ ಭರವಸೆ ನೀಡಿದ್ದರು. ಮಾತ್ರವಲ್ಲದೆ ನಿರಂತರ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ಬೈಂದೂರಿನ ಬಹುಕಾಲದ ಬೇಡಿಕೆ ಈಡೇರಿಸಿದ ಶಾಸಕರಿಗೆ ಬೈಂದೂರು ಜನತೆಯ ಅಭಿನಂದನೆಗಳು.
– ಎಸ್. ರಾಜುಪೂಜಾರಿ, ಜಿಲ್ಲಾ ಕೆ.ಡಿ.ಪಿ. ಸದಸ್ಯರು
ಬೈಂದೂರು ತಾಲೂಕು ರಚನೆಯಾಗುವ ಮೂಲಕ ಪ್ರವಾಸೋ ದ್ಯಮದ ಅಭಿವೃದ್ಧಿ, ಭೌಗೋಳಿಕ ಬೆಳವಣಿಗೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗಲಿದೆ. ಮಾತ್ರವಲ್ಲದೇ ಬಹುವರ್ಷದ ಕನಸು ನನಸಾಗುವಂತಾಗಿದೆ.
– ವೆಂಕಟೇಶ್ ಕಿಣಿ, ಅಧ್ಯಕ್ಷರು ಮೂಕಾಂಬಿಕಾ ರೈಲ್ವೇ ಯಾತ್ರಿ ಸಂಘ ಬೈಂದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.