ಅಧ್ಯಯನಕ್ಕಾಗಿ ಶಾನಾಡಿಗೆ ಆಗಮಿಸಿದ ಕಾಂಬೋಡಿಯಾದ ರೈತರು
ಸಾವಯವ ಗೇರು ಕೃಷಿ
Team Udayavani, Sep 16, 2019, 5:32 AM IST
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಹಿರಿಯ ಪ್ರಗತಿ ಪರ ಸಾವಯವ ಕೃಷಿಕ ಶಾನಾಡಿ ರಾಮಚಂದ್ರ ಭಟ್ ಅವರ ಪ್ರಯೋಗಾತ್ಮಕ ಯಶಸ್ವಿ ಸಾವಯವ ಗೇರು ಕೃಷಿ ಅಧ್ಯಯನಕ್ಕಾಗಿ ಕಾಂಬೋಡಿಯ ದೇಶದ ರೈತರು ಸೆ.13 ರಂದು ಭೇಟಿ ನೀಡಿದ್ದಾರೆ.
ವಾರಣಾಶಿ ಅಭಿವೃದ್ಧಿ ಮತ್ತು ಸಂಶೋಧನಾ ಪ್ರತಿಷ್ಠಾನ ಅಡ್ಯನಡ್ಕ ಇದರ ಮುಖ್ಯಸ್ಥ ಮತ್ತು ಸಾವಯವ ಕೃಷಿಯ ಹರಿಕಾರ ಡಾ| ವಾರಣಾಶಿ ಕೃಷ್ಣಮೂರ್ತಿಯವರು ಉದಯವಾಣಿಗೆ ಪ್ರತಿಕ್ರಿಯಿಸಿ, ಕಾಂಬೋಡಿಯ ದೇಶದ ರೈತರಿಗೆ ಸಾವಯವ ಗೇರು ಕೃಷಿ ಬಗ್ಗೆ ತಿಳಿ ಹೇಳುವ ನಿಟ್ಟಿನಿಂದ ಜಪಾನಿನ ಐ.ವಿ.ವೈ. (ಯಮಗಾಟದ ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ) ಮತ್ತು ಜರ್ಮನಿಯ ಜಿ.ಐ.ಝಡ್.(ಜರ್ಮನಿಯ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ) ಪ್ರಾಯೋಜಕತ್ವದಲ್ಲಿ ಸಾವಯವ ಕೃಷಿ ಏನು?, ಏಕೆ, ಹೇಗೆ ಎಂಬ ಬಗ್ಗೆ ವಿವರ ತಿಳಿಸುವ ನಿಟ್ಟಿನಿಂದ ಕೃಷಿ ತಜ್ಞರಿಂದ ಪೂರಕವಾದ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಹಿರಿಯ ಪ್ರಗತಿ ಪರ ಸಾವಯವ ಕೃಷಿಕ ಶಾನಾಡಿ ರಾಮಚಂದ್ರ ಭಟ್ ಹಾಗೂ ನಾಲ್ವರು ಕಾಂಬೋಡಿಯದ ರೈತರು ಉಪಸ್ಥಿತರಿದ್ದರು.
ಚಿಂತನೆ ಅಗತ್ಯ
ಕಾಂಬೋಡಿಯ ದೇಶದಿಂದ ಬಂದಿರುವ ರೈತರು ನಮ್ಮ ತೋಟದಲ್ಲಿರುವ ಸಾವಯವ ಗೇರು ಕೃಷಿ, ಮಿಶ್ರ ಬೆಳೆ, ನೆಲ ಜಲ ಸಂರಕ್ಷಣೆ , ಪಶು ಪಾಲನೆ ಹಾಗೂ ಸಾವಯವ ಗೊಬ್ಬರಗಳನ್ನು ನೋಡಿ ಹಾಗೂ ಇಲ್ಲಿನ ಪರಿಸರವನ್ನು ಕಂಡು ತುಂಬಾ ಸಂತಸ ವ್ಯಕ್ತಪಡಿಸಿದರು. ಯಾವುದೋ ದೇಶದಿಂದ ಸಾವಯವ ಕೃಷಿ ಅಧ್ಯಯನಕ್ಕಾಗಿ ಭಾರತದೆಡೆಗೆ ಮುಖ ಮಾಡಿ ನಿಂತಿರುವಾಗ ಇಲ್ಲಿನ ಅತ್ಯಮೂಲ್ಯ ಕೃಷಿ ಸಂಸ್ಕೃತಿಗಳ ಉಳಿವಿನ ಬಗ್ಗೆ ನಮ್ಮ ಯುವ ಸಮುದಾಯಗಳು ಗಂಭೀರವಾದ ಚಿಂತನೆ ಮಾಡಬೇಕಾದ ಅಗತ್ಯವಿದೆ.
-ಶಾನಾಡಿ ರಾಮಚಂದ್ರ ಭಟ್,
ಹಿರಿಯ ಪ್ರಗತಿಪರ ಸಾವಯವ ಕೃಷಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.