ಸಿನೆಮಾ, ಯೂಟ್ಯೂಬ್‌ ನೋಡಿ ಕಲಿತ ‘ಮೊಟ್ಟೆ’ಯ ಕಥೆಯ ನೇಪಥ್ಯದ ಹೀರೋ


Team Udayavani, Jul 17, 2017, 2:55 AM IST

praveen.jpg

ಕೆಮರಾ, ಎಡಿಟಿಂಗ್‌, ಕಲರಿಸ್ಟ್‌ ಪ್ರವೀಣ್‌ ಶ್ರೀಯಾನ್‌
ಉಡುಪಿ:
 ‘ಒಂದು ಮೊಟ್ಟೆಯ ಕತೆ’ ಚಿತ್ರ ರಾಜ್ಯವ್ಯಾಪಿ ಹೊಸ ಸಂಚಲನ ಮೂಡಿಸಿರುವ ಚಿತ್ರ. ಈ ಅದ್ಭುತ ಚಿತ್ರದ ತೆರೆಯ ಹಿಂದಿನ ಕ್ಯಾಮರಾ, ಎಡಿಟಿಂಗ್‌, ಗ್ರಾಫಿಕ್ಸ್‌, ಕಲರಿಸ್ಟ್‌ ಈ ಎಲ್ಲ ಕಾರ್ಯವನ್ನು ಒಬ್ಬರೇ ನಿರ್ವಹಿಸಿರುವುದು ವಿಶೇಷ. ಫಿಲ್ಮ್ ಇನ್‌ಸ್ಟಿಟ್ಯುಟ್‌ನಲ್ಲಿ ಪದವಿ ಪಡೆಯದೆ, ಸದಭಿರುಚಿಯ ಸಿನೆಮಾ ನೋಡಿ, ಯೂಟ್ಯೂಬ್‌ ಟ್ಯುಟೋರಿಯಲ್‌ನಲ್ಲಿ ಸಾಪ್ಟ್ವೇರ್‌ ಕಲಿತ ಉಡುಪಿ ಪಡು ತೋನ್ಸೆ ಬೆಂಗ್ರೆಯ ಪ್ರವೀಣ್‌ ಶ್ರೀಯಾನ್‌ ಅವರೇ ಮೊಟ್ಟೆ ಕತೆಯ ತೆರೆಯ ಹಿಂದಿನ ರೂವಾರಿ.

ಅನುಭವಿಗಳ ದಂಡೇ ಬೇಕು
ಸಿನೆಮಾವೆಂದರೆ ತೆರೆಯ ಹಿಂದೆ ಸಾಕಷ್ಟು ಕೆಲಸಗಳಿರುತ್ತವೆ. ಅದರಲ್ಲೂ ಅನುಭವಿಗಳ ದಂಡೇ ಬೇಕಾಗಿರುತ್ತದೆ. ಆದರೆ ರಾಜ್ಯದಲ್ಲೆಡೆ ಭರವಸೆ ಮೂಡಿಸಿರುವ ಒಂದು ಮೊಟ್ಟೆಯ ಕತೆ ಚಿತ್ರದ ಸಿನೆಮಾಟೋಗ್ರಫಿ (ಕೆಮೆರಾ), ಎಡಿಟಿಂಗ್‌ (ಸಂಕಲನ), ಗ್ರಾಫಿಕ್ಸ್‌, ಕಲರಿಸ್ಟ್‌, ವಿಎಫ್ಎಕ್ಸ್‌ ಜವಾಬ್ದಾರಿ ನಿರ್ವಹಿಸಿದವರು ಉಡುಪಿ ಪಡುತೋನ್ಸೆ ಬೆಂಗ್ರೆಯ ಪ್ರವೀಣ್‌ ಶ್ರೀಯಾನ್‌. ಪ್ರವೀಣ್‌ ಅವರು ಯಾವುದೇ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಪದವಿ ಪಡೆಯದಿದ್ದರೂ ಯೂಟ್ಯೂಬ್‌ ಟ್ಯುಟೋರಿಯಲ್‌ ಮೂಲಕ ಸಿನೆಮಾಟೋಗ್ರಫಿ, ಫಿಲ್ಮ್ ಎಡಿಟಿಂಗ್‌ ಕಲಿತು ಸಿನೆಮಾ ಕ್ಷೇತ್ರಕ್ಕೆ ಸಂಬಂಧಿಸಿದ ಜಾnನವನ್ನು ಸಂಪಾದಿಸಿಕೊಂಡಿರುವುದು ವಿಶೇಷ.

ಮನೆಯೇ ಮೊದಲ ಪ್ರೇರಣೆ
ಪ್ರವೀಣ್‌ಗೆ ಈ ಕ್ಷೇತ್ರದಲ್ಲಿ ಆಸಕ್ತಿ ಬೆಳೆಯಲು ಮುಂಬಯಿ ಹಾಗೂ ಮಣಿಪಾಲದಲ್ಲಿ ಗ್ರಾಫಿಕ್ಸ್‌ ಡಿಸೈನರ್‌ ಹಾಗೂ ಪ್ರೋಗ್ರಾಮರ್‌ ಆಗಿದ್ದ ಮಾವ ರಮೇಶ್‌ ಶ್ರೀಯಾನ್‌ ಅವರೇ ಪ್ರಮುಖ ಪ್ರೇರಣೆ. ಪಿಯುಸಿಯಲ್ಲಿರುವಾಗ ಮಾವನ ಗ್ರಾಫಿಕ್ಸ್‌ ಕೆಲಸದಿಂದ ಆಕರ್ಷಣೆಗೊಂಡು, ಈ ಬಗೆಗೆ ಸಂಬಂಧಿಸಿದ ಹೆಚ್ಚಿನ ವಿಷಯಗಳನ್ನು ಅವರಿಂದ ಮನೆಯಲ್ಲಿಯೇ ಕಲಿತರು.

ಪಿಯು ಶಿಕ್ಷಣ
ಬೆಂಗ್ರೆಯ ಮೊಗವೀರ ಸಮುದಾಯದ ಕಲ್ಯಾಣಿ ಶ್ರೀಯಾನ್‌ ಹಾಗೂ ಶೇಖರ್‌ ಮಾಬುಕಳ ದಂಪತಿಯ ಮಕ್ಕಳಲ್ಲಿ ಪ್ರವೀಣ್‌ ಶ್ರೀಯಾನ್‌ ಎರಡನೆಯವರಾಗಿದ್ದು, ಅಕ್ಕ, ತಮ್ಮ ಇದ್ದಾರೆ. ಕೆಮ್ಮಣ್ಣು ಸರಕಾರಿ ಕಾಲೇಜಿನಲ್ಲಿ ಪಿಯು ಶಿಕ್ಷಣ ಮುಗಿಸಿದರು. 

ಪ್ರಸಿದ್ಧಿ
ಆನಂತರ ಉಡುಪಿಯ ಖಾಸಗಿ ಚಾನೆಲ್‌ನಲ್ಲಿ ಗ್ರಾಫಿಕ್ಸ್‌ ಡಿಸೈನರ್‌, ವಿಡಿಯೋ ಎಡಿಟರ್‌, ಜಾಹೀರಾತು ರಚನೆಕಾರರಾಗಿದ್ದರು. ಇದೇ ವೇಳೆ ದೂರ ಶಿಕ್ಷಣದ ಮೂಲಕ ಬಿಕಾಂ ಪದವಿ ಪಡೆದರು. 2-3 ವರ್ಷಗಳ ಹಿಂದೆ ತನ್ನದೇ ಸ್ವಂತ ಆ್ಯಡ್‌ ಫಿಲ್ಮ್ ಪ್ರೊಡಕ್ಷನ್‌ ಹೌಸ್‌ ಆರಂಭಿಸಿ, ಉಡುಪಿಯ ಪ್ರತಿಷ್ಠಿತ ಕಂಪೆನಿಗಳ ಕಾನ್ಸೆಪ್ಟ್ ಜಾಹೀರಾತು, ಸೃಜನಶೀಲತೆಯ ಜಾಹೀರಾತಿನ ರಚನೆ ಮೂಲಕ ಪ್ರಸಿದ್ಧಿ ಪಡೆದರು. ಇದೇ ವೇಳೆ ಸಿನೆಮಾದಲ್ಲೂ ಕೆಲಸ ಮಾಡಬೇಕೆಂಬ ಹಂಬಲ ಹುಟ್ಟಿಕೊಂಡಿತು. 

ಸಿನೆಮಾ, ಪುಸ್ತಕಗಳ ಪ್ರಭಾವ
ಈ ಮಧ್ಯೆ ರಾಜ್‌ ಶೆಟ್ಟಿ ಜತೆ ಸೇರಿ “ಸುಮ್ನೆ ನಮಗೆ ಯಾಕೆ’ ಹಾಗೂ “ಫೈವ್‌ ಲೆಟರ್’  ಎನ್ನುವ ಕಿರುಚಿತ್ರ ತಯಾರಿಸಿದರು. ಈ ಎರಡೂ ಚಿತ್ರಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದನ್ನೇ ಮೊದಲ ಮೆಟ್ಟಿಲು ಎಂದು ಪರಿಗಣಿಸಿದ ಪ್ರವೀಣ್‌ ಸಿನೆಮಾ ಕ್ಷೇತ್ರಕ್ಕೆ ಕಾಲಿಡಬೇಕೆಂಬ ಗುರಿಯೊಂದಿಗೆ ಕುವೆಂಪು, ಪೂರ್ಣಚಂದ್ರ ತೇಜಸ್ವಿ ಸಹಿತ ಪ್ರಸಿದ್ಧ ಸಾಹಿತಿಗಳ ಹಲವು ಕೃತಿಗಳನ್ನು ಓದಿದರು. ಜತೆಗೆ ಸದಭಿರುಚಿಯ ಇಂಗ್ಲಿಷ್‌, ಮಲಯಾಳಂ, ಇರಾನಿ ಭಾಷೆಗಳ ಸಿನೆಮಾಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿ ಅದರ ಸಿನೆಮಾಟೋಗ್ರಫಿ, ಫ್ರೆàಮ್‌ಗಳನ್ನು ಅರಿತುಕೊಂಡರು.

ಎಮ್ಯಾನುವೆಲ್‌ ಲುಬೆಝಿR, ರೋಗರ್‌ ಡೆಕೀನ್ಸ್‌, ಸಂತೋಷ್‌ ಸಿವನ್‌, ರಾಜೀವ್‌ ರವಿ, ಸೈಜು ಖಾಲಿದ್‌, ಸಮೀರ್‌ ತಾಹೀರ್‌ರಂತಹ ಸಾಧಕ ಸಿನೆಮಾಟೋಗ್ರಾಫ‌ರ್‌ಗಳ ಸಂದರ್ಶನದಲ್ಲಿ ಅವರ ಅನುಭವದ ಮಾತು, ಕಲಿತ ರೀತಿಯೇ ಪ್ರವೀಣ್‌ರ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಮೊದಲ ಚಿತ್ರವನ್ನೇ ರೆಡ್‌ ಎಂಎಕ್ಸ್‌ ಕೆಮೆರಾದಲ್ಲಿ ಚಿತ್ರೀಕರಿಸಿ ಸೈ ಎನಿಸಿಕೊಂಡ ಪ್ರವೀಣ್‌, ಅವಿರತವಾದ ಪರಿಶ್ರಮ, ಹೊಸದನ್ನು ಕಲಿಯುವ ತುಡಿತ, ಅಗಾಧವಾದ ಆತ್ಮವಿಶ್ವಾಸವೇ ಅವರನ್ನು ಇಲ್ಲಿಯವರೆಗೆ ಮುನ್ನಡೆಸಿಕೊಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಸಿನೆಮಾಟೋಗ್ರಾಫ‌ರ್‌ ಆಗುವ ಭರವಸೆ ಮೂಡಿಸಿದ್ದಾರೆ.

ನಾವು ಈ ಸಿನೆಮಾವನ್ನು ಕೇವಲ 16 ದಿನಗಳಲ್ಲಿ ಚಿತ್ರೀಕರಣ ಮಾಡಿದ್ದು. ಅಷ್ಟು ಕಡಿಮೆ ಸಮಯದಲ್ಲಿ ಗುಣಮಟ್ಟದ ಚಿತ್ರೀಕರಣ ಮಾಡಲು ನಮಗೆ ಪ್ರತಿಭಾನ್ವಿತ ಕಲಾವಿದ ಬೇಕಾಗಿತ್ತು. ಗುಣಮಟ್ಟಕ್ಕೆ ಎಲ್ಲೂ ತೊಂದರೆ ಆಗದಂತೆ ಆ ಕೆಲಸವನ್ನು ಪ್ರವೀಣ್‌ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪ್ರವೀಣ್‌ ಈ ಸಿನೆಮಾದಲ್ಲಿ ತುಂಬಾ ಜವಾಬ್ದಾರಿ ವಹಿಸಿಕೊಂಡು ಕೆಲಸ ನಿರ್ವಹಿಸಿರುವುದಷ್ಟೆ ಅಲ್ಲದೆ ಗುಣಮಟ್ಟ ಕಾಯ್ದುಕೊಂಡಿದ್ದಾರೆ. ಅವರೊಬ್ಬ ನಿರ್ದೇಶಕನಿಗೆ ಬೇಕಾದಂತಹ ನಿಜವಾದ ಆರ್ಟಿಸ್ಟ್‌. ಕತೆಗೆ ಮಹತ್ವ ಕೊಟ್ಟು ಕೆಲಸ ಮಾಡುತ್ತಾರೆ.
– ರಾಜ್‌ ಬಿ. ಶೆಟ್ಟಿ, ನಿರ್ದೇಶಕ

ಮೊದಲ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿರುವುದಕ್ಕೆ ಖುಷಿಯಿದೆ. ನಮ್ಮ ತಂಡದ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇದು ಆರಂಭವಷ್ಟೇ. ಇನ್ನೂ ಬಹಳಷ್ಟು ದೂರ ಕ್ರಮಿಸಬೇಕಿದೆ. ಯಶಸ್ವಿ ಸಿನೆಮಾಟೋಗ್ರಾಫ‌ರ್ ಸಂದರ್ಶನ ನೋಡುತ್ತಿದ್ದೆ. ಅವರ ಅನುಭವ, ಒಂದೊಂದು ಫ್ರೆàಮ್‌ಗಳ ಅರ್ಥವನ್ನು ಬಿಡಿಸಿ ಹೇಳುತ್ತಿದ್ದರು. ಇದರಿಂದ ಸಿನೆಮಾಟೋಗ್ರಾಫ‌ರ್‌ ಏನು ಎನ್ನುವುದನ್ನು ತಿಳಿದುಕೊಂಡೆ. ಅದಲ್ಲದೆ ಕುವೆಂಪು, ತೇಜಸ್ವಿ ಅವರ ಸಾಹಿತ್ಯ, ಸದಭಿರುಚಿಯ ಸಿನೆಮಾಗಳು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿವೆ.
– ಪ್ರವೀಣ್‌ ಶ್ರೀಯಾನ್‌

ಟಾಪ್ ನ್ಯೂಸ್

Randeep-surgewala

ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

1-dee

Maha Kumbh; 7 ಕೋಟಿ ರುದ್ರಾಕ್ಷಿಗಳಿಂದ 12 ಜ್ಯೋತಿರ್ ಲಿಂಗಗಳ ರಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

puttige-8-

Puthige Matha: ವಿಶ್ವ ಗೀತಾ ಪರ್ಯಾಯಕ್ಕೆ‌ ಇಂದಿಗೆ ವರ್ಷ ಪೂರ್ಣ

7

Udupi ನಗರಸಭೆಗೆ ಸರಕಾರದಿಂದ 5 ಸದಸ್ಯರ ನಾಮ ನಿರ್ದೇಶನ

6(1

Manipal: ಮಣ್ಣಪಳ್ಳದಲ್ಲಿ ಎಲ್ಲವೂ ಇದೆ, ಉಪಯೋಗವಿಲ್ಲ!

11-society

Udupi: ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಸಮಾನ ಮನಸ್ಕ ತಂಡಕ್ಕೆ ಜಯ

Udupi: ಗೀತಾರ್ಥ ಚಿಂತನೆ-159: ಅನಂತ ದೇಶದಲ್ಲಿ ಭೂಮಿ ಸಾಸಿವೆಯೂ ಅಲ್ಲ

Udupi: ಗೀತಾರ್ಥ ಚಿಂತನೆ-159: ಅನಂತ ದೇಶದಲ್ಲಿ ಭೂಮಿ ಸಾಸಿವೆಯೂ ಅಲ್ಲ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

Randeep-surgewala

ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

puttige-8-

Puthige Matha: ವಿಶ್ವ ಗೀತಾ ಪರ್ಯಾಯಕ್ಕೆ‌ ಇಂದಿಗೆ ವರ್ಷ ಪೂರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.