Padubidri; ಕಾರು ಢಿಕ್ಕಿ: ಪಾದಚಾರಿ ಸಾವು
Team Udayavani, May 27, 2024, 11:45 PM IST
ಪಡುಬಿದ್ರಿ: ಬಡಾ ಎರ್ಮಾಳು ಕಲ್ಯಾಣಿ ಬಾರ್ ಎದುರಿನ ರಿಕ್ಷಾ ನಿಲ್ದಾಣದತ್ತ ರವಿವಾರ ಸಂಜೆ ವೇಳೆ ನಡೆದು ಬರುತ್ತಿದ್ದ ಬಡಾ ಗ್ರಾಮದ ನಿವಾಸಿ ರಮೇಶ್ (66) ಅವರಿಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು ಕಡೆಯಿಂದ ಉಡುಪಿಯತ್ತ ಹೋಗುತ್ತಿದ್ದ ಕಾರೊಂದು ಢಿಕ್ಕಿಯಾಗಿ ತಲೆಗೆ ತೀವ್ರ ಗಾಯಗೊಂಡವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೇ 26ರ ರಾತ್ರಿ ಸಾವನ್ನಪ್ಪಿದ್ದಾರೆ.
ಹೆದ್ದಾರಿಯ ತೀರಾ ಎಡಬದಿಗೆ ಚಲಾಯಿಸಿದ ಕಾರು ಚಾಲಕನ ಅತೀ ವೇಗ ಹಾಗೂ ಅಜಾಗ್ರತೆಯ ಚಾಲನೆಯೇ ಈ ಘಟನೆಗೆ ಕಾರಣವಾಗಿದ್ದು, ಆತನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.
ಸರ್ವೀಸ್ ರಸ್ತೆಯಿಲ್ಲ; ಹೆದ್ದಾರಿ ದೀಪಗಳೂ ಇಲ್ಲ
ಪಡುಬಿದ್ರಿಯಿಂದ ಉಚ್ಚಿಲದ ಬಸ್ ನಿಲ್ದಾಣದವರೆಗೂ ಅಪಘಾತ ವಲಯವಾಗಿದ್ದು, ಈಗಾಗಲೇ ಹಲವು ಪ್ರಾಣಹಾನಿಗಳು ಸಂಭವಿಸಿವೆ. ಈ ಪ್ರದೇಶದಲ್ಲಿ ಸರ್ವೀಸ್ ರಸ್ತೆ ನಿರ್ಮಾಣವೂ ಆಗಿಲ್ಲ. ಹೆದ್ದಾರಿ ದೀಪಗಳನ್ನೂ ಅಳವಡಿಸಲಾಗಿಲ್ಲವೆಂದು ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಅವರು ಕೆಕೆಆರ್ ಟೋಲ್ ಕಂಪೆನಿ ವಿರುದ್ಧ “ಉದಯವಾಣಿ’ಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Udupi: ಗೀತೆಯ ಸಂದೇಶ ಪ್ರತೀ ಮನೆಯನ್ನೂ ಪ್ರವೇಶಿಸಲಿ: ಕಾಂಚಿ ಶ್ರೀ
Udupi: ಎಂಜಿಎಂ ಕಾಲೇಜಿನಲ್ಲಿ ನ.29 ರಿಂದ ಡಿ.1ವರೆಗೆ ಅಮೃತ ಮಹೋತ್ಸವ ಸಂಭ್ರಮ
Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
MUST WATCH
ಹೊಸ ಸೇರ್ಪಡೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.