ಮಣಿಪಾಲದಲ್ಲಿ ಮೂಡುತ್ತಿದೆ 700 ಕಾರುಗಳ ಪಾರ್ಕಿಂಗ್ ಸಂಕೀರ್ಣ
Team Udayavani, Jul 11, 2018, 5:33 PM IST
ಉಡುಪಿ: ಈಗ ಎಲ್ಲೆಲ್ಲೂ ವಾಹನ ಪಾರ್ಕಿಂಗ್ ಸಮಸ್ಯೆ ಇದೆ. ಮಣಿಪಾಲವೂ ಹೊರತೇನಲ್ಲ. ಮಣಿಪಾಲದ ಮಾಹೆ ವಿ.ವಿ.ಯವರು ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳುತ್ತಿದ್ದಾರೆ. ಇದು ಎಂಎಲ್‌ಸಿಪಿ (ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್).
ಮಣಿಪಾಲ ಆಸ್ಪತ್ರೆ ಹೊರರೋಗಿ ವಿಭಾಗ ಮತ್ತು ಮರೆನಾ ಕ್ರೀಡಾ ಸಂಕೀರ್ಣದ ಬಳಿ ನಾಲ್ಕು ಅಂತಸ್ತುಗಳ (ತಳ + 3 ಅಂತಸ್ತು) ಸಂಕೀರ್ಣವೊಂದು ನಿರ್ಮಾಣಗೊಳ್ಳುತ್ತಿದೆ. 2.5 ಲಕ್ಷ ಚದರಡಿಯ ಈ ಸಂಕೀರ್ಣದಲ್ಲಿ ವಾಹನ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದಾರಿ ಇದೆ. ಮೂರು ಲಿಫ್ಟ್ ಮತ್ತು ಐದು ಮೆಟ್ಟಿಲುಗಳನ್ನು ಅಳವಡಿಸಲಾಗಿದೆ. ವ್ಯವಸ್ಥಿತವಾಗಿ ನಿರ್ಮಿಸಲಾಗುತ್ತಿದ್ದು, ಅಂತಿಮ ಹಂತದಲ್ಲಿದೆ.
ಪರಿಸರಸ್ನೇಹಿ: ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೇಲ್ಭಾಗದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. ಇದರಿಂದ 530 ಕೆ.ವಿ. ವಿದ್ಯುತ್ ಉತ್ಪಾದನೆಯಾಗಲಿದೆ.
ಮಣಿಪಾಲ ಆಸ್ಪತ್ರೆಯ ಸಿಬಂದಿ, ರೋಗಿಗಳು, ರೋಗಿಗಳ ಸಂಬಂಧಿಕರಿಗೆ ಮಾತ್ರ ಇದರ ಬಳಕೆಗೆ ಅವಕಾಶ ಕಲ್ಪಿಸಲಾಗುವುದು. ಒಟ್ಟು 700 ಚತುಷ್ಕಕ್ರ ವಾಹನ (ಕಾರು), 500 ದ್ವಿಚಕ್ರ ವಾಹನಗಳನ್ನು ನಿಲುಗಡೆಗೊಳಿಸಲು ಅವಕಾಶವಿದೆ.
ಆಗಸ್ಟ್‌ನಲ್ಲಿ ಉದ್ಘಾಟನೆ
ವಾಹನ ಪಾರ್ಕಿಂಗ್ ಸಂಕೀರ್ಣದ ಕಾಮಗಾರಿ ಜುಲೈಯಲ್ಲಿ ಮುಕ್ತಾಯವಾಗಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ಉದ್ಘಾಟನೆಯಾಗಲಿದೆ.
– ಡಾ|ಎಚ್.ಎಸ್. ಬಲ್ಲಾಳ್, ಸಹಕುಲಾಧಿಪತಿಗಳು, ಮಣಿಪಾಲ ಮಾಹೆ ವಿ.ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.