ವ್ಯಂಗ್ಯಚಿತ್ರಕಾರರು ವಿಪಕ್ಷ ನಾಯಕರಿದ್ದಂತೆ: ಬಾದಲ್ ನಂಜುಂಡಸ್ವಾಮಿ
Team Udayavani, Nov 25, 2019, 5:37 AM IST
ಕುಂದಾಪುರ: ಪ್ರಸ್ತುತ ವಿದ್ಯಮಾನಗಳ ಬಗ್ಗೆ ಸದಾ ಎಚ್ಚರದಿಂದ ಇರುವ, ಆಳುವ ವರ್ಗ ಎಡವಿದಾಗ ಬಡಿದೆಬ್ಬಿಸುವ ವ್ಯಂಗ್ಯ ಚಿತ್ರಕಾರರು ಒಂದು ರೀತಿಯಲ್ಲಿ ವಿಪಕ್ಷ ನಾಯಕರಿದ್ದಂತೆ. ಕಾರ್ಟೂನಿಸ್ಟ್‌ಗಳಾಗುವುದು ಅಷ್ಟೊಂದು ಸುಲಭದ ಮಾತಲ್ಲ. ಅಪಾರವಾದ ಜ್ಞಾನವಿರಬೇಕು. ಪ್ರತಿದಿನ ಬೆಳವಣಿಗೆಗಳ ಬಗ್ಗೆ ಅರಿವಿರಬೇಕು ಎಂದು ಬೆಂಗಳೂರಿನ ಸ್ಟ್ರೀಟ್‌ಆರ್ಟ್ ಕಲಾವಿದ ಬಾದಲ್ ನಂಜುಂಡಸ್ವಾಮಿ ಹೇಳಿದರು.
ಅವರು ರವಿವಾರ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನ. 23ರಿಂದ 26ರ ವರೆಗೆ ನಡೆಯುತ್ತಿರುವ “ನಗುವಿನ ಹಾದಿಯಲ್ಲಿ ಕಾರ್ಟೂನ್ ಯಾತ್ರೆ – ಕಾರ್ಟೂನ್ ಹಬ್ಬ ಹಬ್ಬ’ದಲ್ಲಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಖ್ಯಾತ ವ್ಯಂಗ್ಯ ಚಿತ್ರಕಾರೊಂದಿಗಿನ “ಮಾಸ್ಟ್ರರ್ ಸ್ಟೋಕ್ಸ್’ ಸಂವಾದದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಟೂನ್ ಬಿಡಿಸುವ ಮೂಲಕ ಉದ್ಘಾಟಿಸಿದ ದಿ ಹಿಂದೂ ಪತ್ರಿಕೆಯ ಹಿರಿಯ ವ್ಯಂಗ್ಯ ಚಿತ್ರಕಾರರಾದ ಸುರೇಂದ್ರ ಅವರು, ಕಾರ್ಟೂನ್ ಗಳ ಮಹತ್ವ ಹಾಗೂ ಅದು ಬೀರುವ ಪ್ರಭಾವದ ಬಗ್ಗೆ ತಿಳಿಸಿ, ಪತ್ರಿಕೆಗಳಲ್ಲಿ ಒಂದು ಕಾರ್ಟೂನ್ ಬಹಳಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.
ಪ್ರಸ್ತುತ
ಗಾಂಧೀಜಿ ಅವರನ್ನು ಇಂದಿನ ಯುವ ಜನಾಂಗ ಮರೆಯುತ್ತಿರುವ ಕಾಲಘಟ್ಟದಲ್ಲಿಯೇ ಈಶ್ವರ ಅಲ್ಲಾ ತೇರೋ ನಾಮ್ ಎನ್ನುವ ಸಂದೇಶ ಸಾರುವ ಕಾರ್ಟೂನ್ ಹಬ್ಬ ಆಯೋಜಿಸಿರುವುದು ಇಂದಿಗೆ ಅತ್ಯಂತ ಪ್ರಸ್ತುತವಾಗಿದೆ. ಆ ಮೂಲಕ ಗಾಂಧಿ ಅವರನ್ನು ಉಳಿಸಿಕೊಳ್ಳುವ ಕಾರ್ಯ ಆಗಬೇಕಾಗಿದೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಹೇಳಿದರು.ಕನ್ನಡಪ್ರಭದ ಹಿರಿಯ ವ್ಯಂಗ್ಯಚಿತ್ರಕಾರ ವಿ.ಜಿ. ನರೇಂದ್ರ ಮಾತನಾಡಿದರು.
ಸಮ್ಮಾನ
ಈ ಸಂದರ್ಭದಲ್ಲಿ ಬೆಂಗಳೂರಿನ ಸ್ಟಿಟ್ ಆರ್ಟ್ ಕಲಾವಿದ ಬಾದಲ್ ನಂಜುಂಡಸ್ವಾಮಿ, ವ್ಯಂಗ್ಯಚಿತ್ರಕಾರರಾದ ದತ್ತಾತ್ರಿ ಎಂ.ಎನ್. ಹಾಗೂ ನಂಜುಂಡಸ್ವಾಮಿ ಅವರನ್ನು ಸಮ್ಮಾನಿಸಲಾಯಿತು. ಎಡಿಟೂನ್ಸ್ ಕಾರ್ಟೂನ್ ಕಾರ್ಯಾಗಾರ, ನಗೆ ಹಬ್ಬ ಸಹಿತ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದೆ.
ಕಾರ್ಯಕ್ರಮದ ಸಂಘಟಕ, ಕಾರ್ಟೂ ನಿಸ್ಟ್ ಸತೀಶ್ ಆಚಾರ್ಯ ಉಪಸ್ಥಿತರಿದ್ದರು. ಸಮುದಾಯ ಕುಂದಾಪುರದ ಉದಯ ಗಾಂವ್ಕರ್ ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕೃತಿಕ ಕಾಡ್ಗಿಚ್ಚು
ಅನೇಕ ಮಂದಿ ಖ್ಯಾತನಾಮ ವ್ಯಂಗ್ಯಚಿತ್ರಕಾರರ, ಕಲಾವಿದರ ಸಮಾಗಮದ ಈ ಕಾರ್ಟೂನ್ ಹಬ್ಬ ಒಂದು ರೀತಿಯಲ್ಲಿ ಸಾಂಸ್ಕೃತಿಕ ಮಿಂಚನ್ನು ಸೃಷ್ಟಿಸಿದ್ದು, ಇದು ಇನ್ನೂ ಮುಂದಕ್ಕೆ ಹೋಗಿ ಸಾಂಸ್ಕೃತಿಕ ಕಾಡ್ಗಿಚ್ಚಾಗಿ ಹಬ್ಬಲಿ. ಕಾರ್ಟೂನ್ ಪಂಚ್ ಕೊಡುವುದಕ್ಕೆ ಮಾತ್ರ ಸೀಮಿತವಾಗದೇ, ಅದರ ಇನ್ನೊಂದು ಆಯಾಮವನ್ನು ತೆರೆದುಕೊಳ್ಳಲಿ ಎಂದು ಸುಧಾ ಪತ್ರಿಕೆಯ ಹಿರಿಯ ಕಲಾವಿದ ಚಂದ್ರನಾಥ ಆಚಾರ್ಯ ಹೇಳಿದರು.
ಜನಾಕರ್ಷಿಸಿದ ಕಾರ್ಟೂನ್ ಹಬ್ಬ
ಇಲ್ಲಿನ ಕಲಾಮಂದಿರದಲ್ಲಿ ಶನಿವಾರದಿಂದ ನಡೆಯುತ್ತಿರುವ ಕಾರ್ಟೂನ್ ಹಬ್ಬ ರವಿವಾರವೂ ಜನಾಕರ್ಷಣೆಯ ಕೇಂದ್ರವಾಗಿತ್ತು. ಹಲವು ಖ್ಯಾತನಾಮ ವ್ಯಂಗ್ಯಚಿತ್ರಕಾರರು ಬಿಡಿಸಿರುವ ನೂರಾರು ಕಾರ್ಟೂನ್ ಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಕುಂದಾಪುರದ ಭಾಗದ ವ್ಯಂಗ್ಯಚಿತ್ರ ಆಸಕ್ತರು, ಬೇರೆ ಬೇರೆ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಈ ಕಾರ್ಟೂನ್ ಹಬ್ಬಕ್ಕೆ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಪ್ರದರ್ಶನಕ್ಕೆ ಇಡಲಾದ ಕ್ಯಾರಿಕೇಚರ್,ಕಾರ್ಟೂನ್ ಗಳ ಪೈಕಿ ಕೆಲವರು ತಮ್ಮ ನೆಚ್ಚಿನ ವ್ಯಂಗ್ಯಚಿತ್ರಗಳ ಜತೆಗೆ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಪಟ್ಟರು. ವಿದ್ಯಾರ್ಥಿಗಳಿಗೆ ಕಾರ್ಟೂನು ಸ್ಪರ್ಧೆಯನ್ನು ಆಯೋಜಿಸಿದ್ದು, ಬೇರೆ ಕಡೆಗಳ ವಿದ್ಯಾರ್ಥಿಗಳು ಬಂದು ಆಸಕ್ತಿಯಿಂದ ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.