ಮಹಾರಾಷ್ಟ್ರ ಸಂಪರ್ಕ ಮುಚ್ಚಿಟ್ಟ ಲ್ಯಾಬ್ ಟೆಕ್ನಿಶಿಯನ್: ಮೊಕದ್ದಮೆ
Team Udayavani, Jun 25, 2020, 6:10 AM IST
ಉಡುಪಿ: ಕೋವಿಡ್ 19 ಪಾಸಿಟಿವ್ ಕಂಡುಬಂದ ಸ್ಥಳೀಯ ಲ್ಯಾಬ್ ಟೆಕ್ನಿಶಿಯನ್‌ಗೆ ಯಾವುದೇ ಸಂಪರ್ಕವಿಲ್ಲವೆಂದು ಭಾವಿಸಿದ್ದೆವು.
ಆದರೆ ಅವರು ಮಹಾರಾಷ್ಟ್ರದಿಂದ ಬಂದವರ ಜತೆಗೆ ಕಾರ್ಯಕ್ರಮ ನಡೆಸಿದ್ದ ಕಾರಣ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಉಡುಪಿ ಡಿಸಿ ಜಿ. ಜಗದೀಶ್ ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸೋಂಕಿತ ವ್ಯಕ್ತಿಯ ಪ್ರಾಥಮಿಕ, ದ್ವಿತೀಯ ಸಂಪರ್ಕಗಳ ಸಂಪೂರ್ಣ ಮಾಹಿತಿ ನೀಡಬೇಕು. ಆ ಮೂಲಕ ಕೋವಿಡ್ 19 ವೈರಸ್ ಸಮುದಾಯಕ್ಕೆ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಯಾರೂ ಸಹ ವಿಚಾರವನ್ನು ಮುಚ್ಚಿಡಬಾರದು. ಆ ರೀತಿ ಮಾಡುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಹಾರಾಷ್ಟ್ರ ಸಹಿತ ವಿವಿಧ ಕಡೆಗಳಿಂದ ಪ್ರತಿದಿನ 200-250 ಮಂದಿ ಜಿಲ್ಲೆಗೆ ರೈಲು ಮತ್ತು ಕಾರುಗಳ ಮೂಲಕ ಆಗಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಿರ್ವಹಣೆ ಅಸಾಧ್ಯವಾಗುವುದರಿಂದ ಹೋಂ ಕ್ವಾರಂಟೈನ್ ವಿಧಿಸಲಾಗುತ್ತಿದೆ.
ಗರ್ಭಿಣಿ, ಸಣ್ಣ ಮಕ್ಕಳು 65 ವರ್ಷಗಳಿಂದ ಮೇಲ್ಪಟ್ಟವರು ಹಾಗೂ ಇತರ ಕಾಯಿಲೆ ಇರುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕ್ವಾರಂಟೈನ್ ಭೇಟಿ ಜಿಲ್ಲೆ ಪ್ರಥಮ
ಜಿಲ್ಲೆಯಲ್ಲಿ ಅಧಿಕಾರಿಗಳು ಶೇ. 91ರಷ್ಟು ಹೋಂ ಕ್ವಾರಂಟೈನ್ ವಿಧಿಸಿರುವ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಕ್ವಾರಂಟೈನ್ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ ರ್‍ಯಾಂಕಿಂಗ್ ಪಟ್ಟಿಯಲ್ಲಿ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ. ಎರಡನೇ ಸ್ಥಾನವನ್ನು ಕಲಬುರಗಿ (ಶೇ. 81) ಪಡೆದಿದೆ. ಹೋಂ ಕ್ವಾರಂಟೈನ್‌ನಲ್ಲಿರುವವರು ಸೆಲ್ಫಿ ಫೋಟೋ ಕಳುಹಿಸುವುದರಲ್ಲಿ ಉಡುಪಿ ಜಿಲ್ಲೆ ಶೇ. 48ರಷ್ಟು ಸಾಧನೆ ಮಾಡಿದೆ.
– ಜಿ. ಜಗದೀಶ್, ಜಿಲ್ಲಾಧಿಕಾರಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tamil Nadu: ಡಿಎಂಕೆ ಸರಕಾರ ಇಳಿಸುವವರೆಗೂ ಚಪ್ಪಲಿ ಧರಿಸಲ್ಲ: ಕೆ.ಅಣ್ಣಾಮಲೈ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಲೋಕ ಚುನಾವಣೆಯಲ್ಲಿ ಪುರುಷರಗಿಂತ ಸ್ತ್ರೀಯರಿಗಿಂತ ಹೆಚ್ಚು ಮತದಾನ: ಚು.ಆಯೋಗ
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
ಲಾಂಛನ ದುರ್ಬಳಕೆಗೆ 5 ಲಕ್ಷ ದಂಡ, ಜೈಲು? ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.