ಎಳಜಿತ್: ಹಟ್ಟಿಯಿಂದ ಜಾನುವಾರು ಕಳವು
ಆರೋಪಿಗಳ ಪತ್ತೆಗೆ ಹಿಂದೂ ಸಂಘಟನೆಗಳಿಂದ ಗಡುವು
Team Udayavani, Jun 20, 2019, 9:46 AM IST
ಬೈಂದೂರು: ಹಟ್ಟಿಯಿಂದ ದನಗಳನ್ನು ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ಬೈಂದೂರು ಠಾಣಾ ವ್ಯಾಪ್ತಿಯ ಎಳಜಿತ್‌ನಲ್ಲಿ ನಡೆದಿದೆ.
ಇಲ್ಲಿನ ಸದೆಯಮ್ಮ ಗೌಡ್ತಿ ಅವರ ಮನೆಯಿಂದ 3 ದನ ಹಾಗೂ ಪಕ್ಕದ ಕೊಟ್ಟಿಗೆಯಲ್ಲಿದ್ದ 2 ದನಕರುಗಳನ್ನು ಕದ್ದೊಯ್ಯಲಾಗಿದೆ. ನಡೆಯಲಾಗದ ವಯಸ್ಸಾದ ದನವನ್ನು ಬಿಟ್ಟು ಉಳಿದೆಲ್ಲವನ್ನೂ ಕದ್ದೊಯ್ಯಲಾಗಿದೆ.
ಪತ್ತೆಗೆ 24 ಗಂಟೆ ಗಡುವು
ಬೈಂದೂರು ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅನಧಿಕೃತ ಮರಳು ಸಾಗಾಟದಂಥವುಗಳಿಗೆ ನೀಡುವ ಆದ್ಯತೆಯನ್ನು ಪೊಲೀಸರು ಇತರ ಅಪರಾಧ ಪ್ರಕರಣಗಳಿಗೆ ನೀಡುತ್ತಿಲ್ಲ. ಗೋಕಳವು ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸದಿದ್ದರೆ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಧರಣಿ ನಡೆಸುತ್ತೇವೆ ಎಂದು ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ ನೆಲ್ಯಾಡಿ ಹೇಳಿದ್ದಾರೆ.
ಎಳಜಿತ್ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಗೋ ಕಳ್ಳತನ ಪ್ರಕರಣದ ಕುರಿತು ದೂರು ನೀಡಿದರೆ ಪೊಲೀ ಸರು ಲಘುವಾಗಿ ಪರಿಗಣಿಸುತ್ತಾರೆ ಎಂದು ಹಿಂದೂ ಸಂಘಟನೆ ಮುಖಂಡ ಸುಧಾಕರ ಶೆಟ್ಟಿ ನೆಲ್ಯಾಡಿ ಹೇಳಿದ್ದಾರೆ.
ಪೊಲೀಸರಿಗೆ ಮನವಿ
ಜಾನುವಾರು ಕಳವು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಸಂತ್ರಸ್ತರು ಬೈಂದೂರು ಠಾಣಾಧಿಕಾರಿಗೆ ಮನವಿ ಸಲ್ಲಿಸಿದರು. ಸುಧಾಕರ ಶೆಟ್ಟಿ ನೆಲ್ಯಾಡಿ, ದೀಪಕ್ ಕುಮಾರ್ ಶೆಟ್ಟಿ ನೆಲ್ಯಾಡಿ, ಶರತ್ ಶೆಟ್ಟಿ ಉಪ್ಪುಂದ, ಆಕಾಶ್ ಪೂಜಾರಿ ಮುಂತಾದವರಿದ್ದರು.
ನಿರಂತರ ಕಳವು
ಠಾಣಾ ವ್ಯಾಪ್ತಿಯಲ್ಲಿ ಹಲCattle stolenವು ದಿನಗಳಿಂದ ನಿರಂತರ ಕಳವು ನಡೆಯುತ್ತಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.