ಸಿದ್ದಾಪುರ ಪೇಟೆಗೆ ಸಿಸಿ ಕೆಮರಾ ಕಣ್ಗಾವಲು
Team Udayavani, Mar 29, 2018, 8:20 AM IST
ಸಿದ್ದಾಪುರ: ವೇಗವಾಗಿ ಬೆಳೆಯುತ್ತಿರುವ ಪೇಟೆ ಇನ್ನು ಮುಂದೆ ಸಿಸಿ ಕೆಮರಾದ ಕಣ್ಗಾವಲಿಗೆ ಒಳಪಡಲಿದೆ.ಈ ಸಂಬಂಧ ಸಿದ್ದಾಪುರ ಗ್ರಾಮ ಪಂಚಾಯತ್ ಹಾಗೂ ಪೊಲೀಸ್ ಇಲಾಖೆ ಸಾರ್ವಜನಿಕರ ಸಹಕಾರದಿಂದ ಸಿಸಿ ಕೆಮರಾ ಅಳವಡಿಸಿದೆ.
ರಾಜ್ಯ ಹೆದ್ದಾರಿಯ ಪ್ರಮುಖ ಮೂರು ರಸ್ತೆ ಹಾಗೂ ಪೇಟೆಯ ಭಾಗಗಳು ಕಾಣುವ ಹಾಗೇ ಸಿದ್ದಾಪುರ ಸರ್ಕಲ್‌ನಲ್ಲಿ 5ಎಂಬಿ ಮೆಗಾಫಿಕ್ಸೆಲ್ ನ 3 ಕೆಮರಾಗಳನ್ನು ಅಳವಡಿಸಲಾಗಿದೆ. ಪೊಲೀಸ್ ಇಲಾಖೆ ಈ ಕೆಮರಾಗಳ ನಿರ್ವಹಣೆ ಮಾಡಲಿದೆ. ಇದರ ನಿಯಂತ್ರಣ ವ್ಯವಸ್ಥೆಯು ಪೊಲೀಸ್ ಠಾಣೆಯಲ್ಲಿರಲಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಸಿ.ಸಿ. ಕೆಮರಾ ಅಳವಡಿಸಲಾಗಿದೆ. ಇದ ರಿಂದ ಅಪರಾಧಗಳನ್ನು ತಡೆಗಟ್ಟಲು ಹಾಗೂ ಅಕ್ರಮಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ. ಕೆಮರಾ ಅಳವಡಿಕೆಗೆ ಇಲಾಖೆಯ ಜತೆ ಸಾರ್ವಜನಿಕರು ಹಾಗೂ ಸ್ಥಳೀಯಾಡಳಿತ ಕೈಜೋಡಿಸಿದೆ ಎನ್ನುತ್ತಾರೆ ಶಂಕರನಾರಾಯಣ ಪೊಲೀಸ್ ಠಾಣೆ ಠಾಣಾಧಿಕಾರಿ ರಾಘವೇಂದ್ರ ಸಿ..
ಅಕ್ರಮ ಚಟುವಟಿಕೆಗಳಿಗೆ ಕಡಿವಾಣ
ಪೇಟೆಯು ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಬೆಸೆಯಲಿದೆ. ನೂರಾರು ಮಂದಿ ನಿತ್ಯದ ಕೆಲಸಗಳಿಗೆ ಹೋಗುವವರಿಗೆ ಸಿದ್ದಾಪುರ ಪೇಟೆಯೇ ಪ್ರಮುಖ ಕೇಂದ್ರ. ಘಟ್ಟದ ಮೇಲಿನವರಿಗೂ ಹಾಗೂ ಕೆಳಗಿನವರಿಗೂ ವ್ಯಾಪಾರ ಕೇಂದ್ರವಾಗಿದೆ. ಕುಂದಾಪುರ ತಾಲೂಕಿ ನಲ್ಲೆ ಎರಡನೆ ಅತಿ ದೊಡ್ಡ ಪೇಟೆ ಹಾಗೂ ಸಂತೆ ನಡೆಯುವ ಸ್ಥಳವಾಗಿದೆ. ಈ ಹಿನ್ನೆಲೆಯಲ್ಲಿ ಹಣದ ವಹಿವಾಟಿನ ಜತೆಗೆ ಎಲ್ಲ ಬಗೆಯ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಸಿಸಿ ಕೆಮರಾ ನೆರವಾಗಲಿದೆ.
ಉದಯವಾಣಿ ವರದಿ
ಫೆ. 10 ರಂದು ಸಿದ್ದಾಪುರಕ್ಕೆ ಸಿಸಿ ಕೆಮರಾ ಕಣ್ಗಾವಲು ಅಗತ್ಯ ಎಂಬ ವರದಿ ಉದಯವಾಣಿಯು ಪ್ರಕಟಿಸಿತ್ತು.
ಕಾನೂನು ಸುವ್ಯವಸ್ಥೆಗೆ ಅನುಕೂಲ
ಸಿ.ಸಿ. ಕೆಮರಾ ಅಳವಡಿಕೆಯಿಂದ ಅಪರಾಧಗಳನ್ನು ತಡೆಗಟ್ಟಲು ಹಾಗೂ ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಕಾನೂನು ಸುವ್ಯವಸ್ಥೆಗೂ ಅನುಕೂಲ ವಾಗಲಿದೆ.
– ರಾಘವೇಂದ್ರ ಸಿ., ಠಾಣಾಧಿಕಾರಿ
ಪೊಲೀಸ್ ಠಾಣೆ ಶಂಕರನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.