“ಸಮಾನತೆಗೆ ಹೋರಾಡಿದ ಧೀರ’
Team Udayavani, Sep 7, 2017, 6:15 AM IST
ಕಾರ್ಕಳ: ಅಸಮಾನತೆ ವಿರುದ್ದ ಹೋರಾಡಿ ಸಾಮಾಜಿಕ ನ್ಯಾಯವನ್ನು ದೊರಕಿಕೊಟ್ಟ ಮಹಾನ್ ಸಾಮಾಜಿಕ ಪರಿವರ್ತನೆ ಹರಿಕಾರ ನಾರಾಯಣಗುರುಗಳು,ಅವರ ಆದರ್ಶಗಳು ಇಂದಿನ ದಿನಗಳಲ್ಲಿಯೂ ಮುಖ್ಯವಾಗಿ ಬೇಕಾಗಿದೆ.ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ ಅಸಮಾನತೆ ಎಂಬುದು ಇಂದಿಗೂ ಪೂರ್ಣವಾಗಿ ಹೋಗಿಲ್ಲ.ಹಾಗಾಗಿ ನಾರಾಯಣ ಗುರುಗಳ ಆದರ್ಶವನ್ನು ಇಂದಿಗೂ ಪಾಲಿಸುವ ಮತ್ತು ಅಳವಡಿಸುವ ಕೆಲಸವಾಗಬೇಕು ಎಂದು ಕಾರ್ಕಳ ಶಾಸಕ ವಿ ಸುನಿಲ್‌ಕುಮಾರ್ ಹೇಳಿದ್ದಾರೆ.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಆಡಳಿತ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ತಾ.ಪಂ. ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವವನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಸಂಘರ್ಷಗಳ ಮೂಲಕ ಜಾತಿ ಮತ ಒಡೆಯುವ ಸಾಮರಸ್ಯ ಕೆಡಿಸುವ ಕಾರ್ಯಗಳು ಎಲ್ಲಿಯೂ ನಡೆಯದಿರಲಿ.ಸಂಘಟನೆಯಿಂದ ಸಮಾಜ ಬಲಯುತವಾಗುತ್ತದೆ ಹಾಗೂ ವಿದ್ಯೆಯಿಂದ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ತೋರಿಸಿಕೊಟ್ಟ ನಾರಾಯಣಗುರುಗಳ ದಾರಿಯಲ್ಲಿ ಎಲ್ಲರೂ ನಡೆಯುವಂತಾಗಲಿ ಎಂದವರು ಹೇಳಿದರು.
ಹಿರಿಯಡ್ಕ ಕಾಲೇಜಿನ ಉಪನ್ಯಾಸಕಿ ನಳಿನಾದೇವಿ ವಿಶೇಷ ಉಪನ್ಯಾಸ ನೀಡಿದದರು.ತಾ.ಪಂ ಅಧ್ಯಕ್ಷೆ ಮಾಲಿನಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೇಶವ್ ಶೆಟ್ಟಿಗಾರ್, ಪುರಸಭೆಯ ಮುಖ್ಯಾಧಿಕಾರಿ ಮೇಬಲ್ ಡಿ’ಸೋಜಾ, ಜಿ.ಪಂ. ಸದಸ್ಯೆಯರಾದ ರೇಶ್ಮಾ ಶೆಟ್ಟಿ, ದಿವ್ಯಶ್ರೀ, ಜ್ಯೋತಿ ಹರೀಶ್ ತಾ.ಪಂ. ಉಪಾಧ್ಯಕ್ಷ ಗೋಪಾಲ ಮೂಲ್ಯ, ಪುರಸಭೆಯ ಉಪಾಧ್ಯಕ್ಷ ಗಿರಿಧರ್ ನಾಯಕ್, ಎಪಿಎಂಸಿ ಅಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.ತಹಶೀಲ್ದಾರ್ ಟಿ.ಜಿ. ಗುರುಪ್ರಸಾದ್ ಸ್ವಾಗತಿಸಿದರು.ರೇಶೆ¾ ಇಲಾಖಾಧಿಕಾರಿ ಹನುಮಂತ ಕೋರಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.