![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Apr 17, 2024, 12:46 PM IST
ಉಡುಪಿ: ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರು ಉಡುಪಿಗೆ ಆಗಮಿಸುತ್ತಿದ್ದಾರೆ. 19 ಏಪ್ರಿಲ್ 2024 ಶುಕ್ರವಾರ ಸಂಜೆ 3:30ಕ್ಕೆ ಸರಿಯಾಗಿ ಉಡುಪಿ ನಗರದ ಹೋಟೆಲ್ ಕಿದಿಯೂರ್ ಮಾಧವ ಕೃಷ್ಣ ಸಭಾಂಗಣದಲ್ಲಿ ಕೂರ್ಮ ಫೌಂಡೇಶನ್ ವತಿಯಿಂದ ಸಂವಾದ ಕಾರ್ಯಕ್ರಮ ನಡೆಯಲಿದೆ.
ಕಳೆದ ಹತ್ತು ವರ್ಷಗಳ ನರೇಂದ್ರ ಮೋದಿ ಅವರ ಆಡಳಿತದಲ್ಲಿ ನಡೆದಿರುವ ವಿದೇಶಾಂಗ ನೀತಿಗಳ ಮತ್ತು ರಾಜ ತಾಂತ್ರಿಕ ಸುಧಾರಣೆಗಳ ಬಗ್ಗೆ ಈ ಸಂವಾದ ನಡೆಯಲಿದ್ದು ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.
ಉಡುಪಿಯ ಅಧ್ಯಯನಶೀಲ ವಿದ್ಯಾರ್ಥಿಗಳು , ಸಂಪನ್ಮೂಲ ವ್ಯಕ್ತಿಗಳು, ಪ್ರಮುಖ ಉದ್ಯಮಿಗಳು ಚಿಂತಕರು ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂವಾದದ ಕೊನೆಯಲ್ಲಿ ಸಾರ್ವಜನಿಕರಿಗೆ ಮಾನ್ಯ ಮಂತ್ರಿಗಳ ಜೊತೆ ಪ್ರಶ್ನೋತ್ತರಕ್ಕೆ ಅವಕಾಶವಿದೆ.
You seem to have an Ad Blocker on.
To continue reading, please turn it off or whitelist Udayavani.