ಮತದಾರರ ಜಾಗೃತಿಗೆ ಚು.ಆಯೋಗ ನಾನಾ ತಂತ್ರ


Team Udayavani, Mar 4, 2019, 1:00 AM IST

matadara-jagrati.jpg

ಉಡುಪಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರ ರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ “ಸ್ವೀಪ್‌'(ಮತದಾರರ ಜಾಗೃತಿ ಅಭಿಯಾನ) ತಂಡ ವಿವಿಧ ತಂತ್ರಗಳ ಮೊರೆ ಹೋಗುತ್ತಿದೆ. 

35 ಅಂಬಾಸಿಡರ್‌ಗಳು
ಜಿಲ್ಲೆಯ ಸರಕಾರಿ, ಅನುದಾನಿತ, ಖಾಸಗಿ ಕಾಲೇಜುಗಳ ಸುಮಾರು 35 ಮಂದಿ ವಿದ್ಯಾರ್ಥಿಗಳು ಸ್ವಯಂ ಆಗಿ 
ಅಂಬಾಸಿಡರ್‌ಗಳಾಗಲು ಮುಂದೆ ಬಂದಿದ್ದು ಅವರಿಗೆ ತರಬೇತಿ ನಡೆಯಲಿದೆ. ತಮ್ಮ ಕಾಲೇಜಿನ ವಿದ್ಯಾರ್ಥಿ ಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವಂತೆ ನೋಡಿಕೊಳ್ಳುವುದು, ಮತದಾನ ಮಾಡಲು 
ಸ್ಫೂರ್ತಿ ತುಂಬಿಸುವುದು ಮೊದಲಾದ ಕೆಲಸ ಇವರು   ಮಾಡುತ್ತಾರೆ.  ಮುಖ್ಯವಾಗಿ ಯಾವುದೇ ಆಮಿಷಕ್ಕೆ ಒಳಗಾಗದೆ “ನೈತಿಕ ಮತದಾನ’ ಮಾಡಲು ಜಾಗೃತಿ ಮೂಡಿಸಲಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿ ಕೊಂಡಿರದವರನ್ನು ಕ್ಯಾಂಪಸ್‌  ಅಂಬಾಸಿಡರ್‌ಗಳನ್ನಾಗಿ ಆಯ್ಕೆ ಮಾಡಲಾಗುತ್ತದೆ. 

ತಂತಿಯಲ್ಲಿ ಮೂಡಿದ ಜಾಗೃತಿ
ಮತದಾನ ಜಾಗೃತಿ ಕಾರ್ಯ ಕ್ರಮಗಳಲ್ಲಿ ಪ್ರದರ್ಶಿಸುವ ಉದ್ದೇಶದಿಂದ ಆಲೂರು ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ರಾಜಶೇಖರ ಎಂ.ತಾಳಿಕೋಟೆ ಅವರು ತಂತಿ ಮತ್ತು ಪೇಪರ್‌ ಗಮ್‌ನಿಂದ ಕಲಾಕೃತಿ ರಚಿಸಿದ್ದು ಇದನ್ನು ಜಿಲ್ಲಾ ಸ್ವೀಪ್‌ ಸಮಿತಿಗೆ ನೀಡಿದ್ದಾರೆ. ಈ ಕಲಾಕೃತಿ ಯುವಕ – ಯುವತಿಯರು, ಹಿರಿಯರು ಸೇರಿದಂತೆ ಒಟ್ಟು 6 ಮಂದಿಯ ಸಣ್ಣ ಪ್ರತಿಕೃತಿಗಳನ್ನು ಹೊಂದಿದೆ. ಈ ಗುಂಪಿನಲ್ಲಿ ಅಂಗವಿಕಲರೋರ್ವರ ಪ್ರತಿಕೃತಿಯೂ ಇದೆ. ಅಂಗವಿಕಲರು ಕೂಡ ಜನತಂತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಸಂದೇಶ ಇದರಲ್ಲಿದೆ. ಪ್ರತಿಯೋರ್ವರ ಕೈಯಲ್ಲಿಯೂ ತಲಾ ಎರಡು ಮತದಾನ ಜಾಗೃತಿ ಘೋಷವಾಕ್ಯಗಳ ಫ‌ಲಕಗಳಿವೆ. ಜತೆಗೆ ಮತದಾನದ ಮೂಲಕ ಸದೃಢ ಭಾರತ ನಿರ್ಮಾಣ ಪರಿಕಲ್ಪನೆಯಂತೆ ರಾಷ್ಟ್ರಧ್ವಜವನ್ನು ಇಡಲಾಗಿದೆ.  

7 ಮಂದಿಯ ಯಕ್ಷ ತಂಡ 
ರಾಜ್ಯವೊಂದರಲ್ಲಿ ಮತದಾನ ನಡೆದುದರಿಂದ ಜನರಿಗೆ ಏನು ಮತ್ತು ಹೇಗೆ ಪ್ರಯೋಜನವಾಯಿತು ಎಂದು ತಿಳಿಸುವ ಕಥೆಯೂ ಸೇರಿದಂತೆ ಜನತಂತ್ರಕ್ಕೆ ಪೂರಕ ವಾದ ಕಥಾ ಪ್ರಸಂಗವನ್ನೊಳಗೊಂಡ ಯಕ್ಷಗಾನ ಸಿದ್ಧಗೊಳ್ಳುತ್ತಿದ್ದು ಇದಕ್ಕೆ 7 ಮಂದಿ ಪ್ರಮುಖ ಕಲಾವಿದರನ್ನು ಗುರುತಿಸಲಾಗಿದೆ. ಸುಮಾರು 30 ನಿಮಿಷ ಗಳ ಕಾಲಾವಧಿಯ ಈ ಸಂಚಾರಿ ಯಕ್ಷಗಾನ ಪ್ರದರ್ಶನ ವಿವಿಧೆಡೆ ನಡೆಯಲಿದೆ. ಯಕ್ಷಗಾನದಿಂದ ಸ್ಥಳೀಯರನ್ನು ಸುಲಭ ವಾಗಿ ಆಕರ್ಷಿಸಬಹುದು ಎಂಬ ಲೆಕ್ಕಾಚಾರ ಸ್ವೀಪ್‌ ಸಮಿತಿಯದ್ದು.   

ಸ್ಥಳೀಯ ಕಲಾವಿದರು
ಪ್ರತಿಭಾವಂತ ಶಿಕ್ಷಕರು, ಸ್ಥಳೀಯ ಜಾನಪದ ಕಲಾವಿದರ ಮೂಲಕ ಜಿಂಗಲ್ಸ್‌, ಹಾಡುಗಳು, ನಾಟ್ಯ ಪ್ರದರ್ಶನ, ಘೋಷಣೆ ಸಿದ್ಧಪಡಿಸಲು ಸ್ವೀಪ್‌ ನಿರ್ಧರಿಸಿದೆ. ಜಿಲ್ಲೆಯ ಐಕಾನ್‌ಗಳ ಮೂಲಕವೂ ಮತದಾನ ಜಾಗೃತಿಗೆ ಯೋಜನೆ ಇದೆ.  ತುಳುಭಾಷೆ ಸೇರಿದಂತೆ ಸ್ಥಳೀಯ ಭಾಷೆಗಳಿಗೂ ಪ್ರಾಧಾನ್ಯತೆ ದೊರೆಯಲಿದೆ. ಕಸ ವಿಲೇವಾರಿ ವಾಹನ  ಕೂಡ ಮತದಾನ ಜಾಗೃತಿಯ ಹಾಡು, ಘೋಷಣೆಗಳನ್ನು ಮೊಳಗಿಸಲಿವೆ.  

ರ್‍ಯಾಂಪ್‌ ಕಡ್ಡಾಯ
ಈ ಬಾರಿ ಹೊಸ ಮತದಾನ ಕೇಂದ್ರಗಳು ಸೇರಿದಂತೆ ಎಲ್ಲ ಕಡೆ ರ್‍ಯಾಂಪ್‌ ನಿರ್ಮಾಣ ಕಡ್ಡಾಯ.  ಗ್ರಾ.ಪಂ.ಗಳು ತಮ್ಮ 14ನೇ ಹಣಕಾಸು ಅನುದಾನ ಬಳಕೆ ಮಾಡಿ ತಮ್ಮ ವ್ಯಾಪ್ತಿಯ ಮತದಾನ ಕೇಂದ್ರಗಳಲ್ಲಿ ರ್‍ಯಾಂಪ್‌ ನಿರ್ಮಿಸುವ ಕೆಲಸ ಮಾಡುತ್ತಿವೆ.

ರಾಜ್ಯ ಮಟ್ಟದಲ್ಲಿ  ಪ್ರಶಂಸೆ
ಕಳೆದ ವಿಧಾನಸಭಾ ಚುನಾವಣೆ ವೇಳೆ ಉಡುಪಿ ಜಿಲ್ಲೆಯಲ್ಲಿ ಸ್ವೀಪ್‌ ನೇತೃತ್ವದಲ್ಲಿ ನಡೆದ ವಿಭಿನ್ನ ರೀತಿಯ ಮತದಾನ ಜಾಗೃತಿ ಚಟುವಟಿಕೆಗಳಿಗೆ ರಾಜ್ಯಮಟ್ಟದಲ್ಲಿಯೇ ಪ್ರಶಂಸೆ ವ್ಯಕ್ತವಾಗಿತ್ತು. ಅದೇ ರೀತಿ ಈ ಬಾರಿಯೂ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು.
-ಸಿಂಧೂ ರೂಪೇಶ್‌,  ಸ್ವೀಪ್‌ ಸಮಿತಿ ಅಧ್ಯಕ್ಷರು 

ಟಾಪ್ ನ್ಯೂಸ್

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

Snuff: ನಶ್ಯ ತಂದಿಟ್ಟ ಸಮಸ್ಯೆ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-girish

Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ

16

Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Missing Case: ಮಗುವಿನೊಂದಿಗೆ ತಾಯಿ ನಾಪತ್ತೆ

Missing Case: ಮಗುವಿನೊಂದಿಗೆ ತಾಯಿ ನಾಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

Snuff: ನಶ್ಯ ತಂದಿಟ್ಟ ಸಮಸ್ಯೆ

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.