ಸಮಗ್ರ ಕೃಷಿಯಲ್ಲಿ ಯಶ ಕಂಡ ಕೆಂಚನೂರಿನ ಚಂದ್ರಶೇಖರ ಉಡುಪ

ಹಲವು ಪ್ರಶಸ್ತಿಗಳ ಸರದಾರ

Team Udayavani, Jan 7, 2020, 5:59 AM IST

044030061921510112213112KDPP2A

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು.ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಕುಂದಾಪುರ: ಗೇರು ಕೃಷಿಯಲ್ಲಿ ಬರೋಬ್ಬರಿ 43 ತಳಿಗಳನ್ನು ದೇಶದ ಬೇರೆ ಬೇರೆ ಕಡೆಗಳಿಂದ ತಂದು ಪೋಷಿಸಿ, ಅದರಿಂದ ಉತ್ತಮ ಇಳುವರಿ ಪಡೆದ, ಹಡಿಲು ಬಿಟ್ಟ ಗದ್ದೆಗಳನ್ನೇ ಹುಡುಕಿ ಭತ್ತದ ಕೃಷಿ ಮಾಡುವ ಕಾಯಕಯೋಗಿ, ಕೃಷಿ ಬೆಳೆಯ ಕುರಿತು ರೈತರಿಗೆ ಪಾಠ ಮಾಡುವ “ಕೃಷಿ ಶಿಕ್ಷಕ’ ಕೆಂಚನೂರಿನ ಚಂದ್ರಶೇಖರ ಉಡುಪ. ಭತ್ತ, ಗೇರು, ತೆಂಗು, ಹಡಿಲು ಬಿಟ್ಟ ಗದ್ದೆಗಳಲ್ಲಿ ತರಹೇವಾರಿ ತರಕಾರಿಗಳನ್ನು ಬೆಳೆದು, ಸಮಗ್ರ ಕೃಷಿಯಲ್ಲಿ ಯಶ ಕಂಡವರು ಕೆಂಚನೂರಿನ ಸಾವಯವ ಕೃಷಿಕ ಎಕ್ರೆಗೆ 28 ಕ್ವಿಂಟಾಲ್‌ಅದರಲ್ಲೂ ಬೇರೆಲ್ಲ ತಳಿಯಿಂದ ಎಕ್ರೆಗೆ 13-14 ಕ್ವಿಂಟಾಲ್‌ ಗೇರು ಇಳುವರಿ ಸಿಕ್ಕರೆ, ವೆಂಗೂರ್ಲಾ ಗೇರು ತಳಿಯಲ್ಲಿ ಎಕ್ರೆಗೆ ಬರೋಬ್ಬರಿ 28 ಕ್ವಿಂಟಾಲ್‌ ವಾರ್ಷಿಕ ಇಳುವರಿಯನ್ನು ಗಳಿಸಿದ್ದು, 1 ಎಕರೆಗೆ 1.5 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಗೇರು ಗಿಡಗಳ ಮಧ್ಯೆ ಇತರೆ ಉಪ ಬೆಳೆಗಳನ್ನು ಮಾಡಿದರೆ ಗೇರು ಗಿಡಕ್ಕೂ ಪ್ರಯೋಜನವಾಗುತ್ತದೆ ಎನ್ನುತ್ತಾರೆ.

43 ತಳಿ ಗೇರು ಪೋಷಣೆ
ಚಂದ್ರಶೇಖರ ಉಡುಪ ಅವರು ವಿಶೇಷವಾಗಿ ಗೇರು ಕೃಷಿಯಲ್ಲಿ 43 ತಳಿಗಳನ್ನು ಬೇರೆ ಬೇರೆ ಕಡೆಯಿಂದ ತಂದು, ಪೋಷಣೆ ಮಾಡಿದ್ದಲ್ಲದೆ ಅದರಿಂದ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಉಳ್ಳಾಲ-1, 2, 3, ಭಾಸ್ಕರ, ವೆಂಗೂರ್ಲಾ -7, 8, ಕೇರಳದಿಂದ ತರಿಸಿದ ಮಡಕತ್ತರ್‌, ಪ್ರಿಯಾಂಕ, ಕನಕ, ದನ, ಸುಲಭ, ಧಾರಶ್ರೀ, ತಮಿಳುನಾಡು, ಆಂಧ್ರದಿಂದಲೂ ಗೇರು ಗಿಡಗಳನ್ನು ತಂದು ನಾಟಿ ಮಾಡಿದ್ದಾರೆ. ಇದಲ್ಲದೆ ದೇಶದ ಬೇರೆ ಬೇರೆ ಕಡೆಗಳಿಗೆ ಕೃಷಿಯ ಕುರಿತಾದ ಅಧ್ಯಯನಕ್ಕಾಗಿ ತೆರಳುತ್ತಾರೆ. ಕೃಷಿಕರಿಗೆ ಮಾಹಿತಿ ನೀಡುವ ಕಾಯಕದಲ್ಲೂ ತೊಡಗಿಸಿಕೊಂಡಿದ್ದಾರೆ.

ನೇರ ಬಿತ್ತನೆ ಪ್ರಯೋಗ
ತಮ್ಮ 1 ಎಕರೆ ಗದ್ದೆ ಹಾಗೂ ಬೇರೆಯವ ರೊಬ್ಬರು ಹಡಿಲು ಬಿಟ್ಟ ಸುಮಾರು 6 ಎಕರೆ ಗದ್ದೆಯಲ್ಲಿ ಭತ್ತದ ವಿವಿಧ ತಳಿಗಳ ನೇರ ಬಿತ್ತನೆ ಕಾರ್ಯವನ್ನು ಮಾಡಿ, ಅದರಲ್ಲೂ ಯಶಸ್ವಿ ಯಾಗಿದ್ದಾರೆ. ಇದು ಕುಂದಾಪುರ ತಾಲೂಕು ಮಾತ್ರವಲ್ಲದೆ ಉಡುಪಿ ಜಿಲ್ಲೆಯಲ್ಲಿಯೇ ಕೃಷಿ ಇಲಾಖೆಯಿಂದ ನಡೆದ ಮೊದಲ ನೇರ ಬಿತ್ತನೆ ಪ್ರಯೋಗ ಎನ್ನುವುದು ವಿಶೇಷ. ಇದರಲ್ಲಿ ಹೆಚ್ಚಿನ ಫಸಲು ಕೂಡ ಬಂದಿತ್ತು. 20-22 ಕ್ವಿಂಟಾಲ್‌ ಭತ್ತದ ಇಳುವರಿಯನ್ನು ಕೂಡ ಗಳಿಸಿದ್ದರು. ಕಳೆ ಕೂಡ ಕಡಿಮೆಯಿರುತ್ತದೆ ಎನ್ನುತ್ತಾರೆ ಚಂದ್ರಶೇಖರ ಉಡುಪ.

ಪ್ರಶಸ್ತಿಗಳು
-  2012ರಲ್ಲಿ ಉತ್ತಮ ಗೇರು ಕೃಷಿಗಾಗಿ ಗೇರು – ಕೊಕ್ಕೊ ಕೃಷಿ ವಿ.ವಿ. ಕೊಚ್ಚಿ ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿ.
-  2011 ರಲ್ಲಿ ಕೃಷಿ ವಿ.ವಿ. ಬೆಂಗಳೂರಲ್ಲಿ ಆಯೋಜಿಸಿದ ರಾಷ್ಟಿÅàಯ ಕೃಷಿ ಮೇಳದಲ್ಲಿ ತಾಲೂಕು ಮಟ್ಟದ ಪ್ರಗತಿಶೀಲ ಯುವ ರೈತ ಪ್ರಶಸ್ತಿ.
-   2017 ರಲ್ಲಿ ಕೃಷಿ ಮತ್ತು ತೋಟಗಾರಿಕೆ ವಿ.ವಿ. ಶಿವಮೊಗ್ಗ ವತಿಯಿಂದ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ.
– 2018 ರಲ್ಲಿ ಆತ್ಮ ಯೋಜನೆಯಡಿ ತೋಟಗಾರಿಕಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ.
–  2002 ರಲ್ಲಿ ತಾಲೂಕು ಮಟ್ಟದ ಫಲಪುಷ್ಪ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ.

ಹಡಿಲು ಗದ್ದೆಯಲ್ಲಿ ತರಕಾರಿ ಬೆಳೆ
ಇವರು ಬೇರೆಯವರು ಹಡಿಲು ಬಿಟ್ಟ ಸುಮಾರು 3 ಎಕರೆ ಗದ್ದೆಯಲ್ಲಿ ಹಾಗಲಕಾಯಿ, ಹೀರೆಕಾಯಿ, ಬೆಂಡೆ, ಅಲಸಂಡೆ, ಬೂದು ಕುಂಬಳಕಾಯಿ ಸೇರಿದಂತೆ ತರಹೇವಾರಿ ತರಕಾರಿ ಗಿಡಗಳನ್ನು ಬೆಳೆಸಿದ್ದಾರೆ.

ಕೃಷಿಯಲ್ಲೇ ಖುಷಿ
ಕೃಷಿಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡರೆ ಯಶಸ್ಸು ಸಾಧಿಸಬಹುದು. ಈಗಿನ ಕಾಲಕ್ಕೆ ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿಕೊಂಡು ಕೃಷಿ ಮಾಡಿದರೆ ಉತ್ತಮ. ಕೇವಲ ಬೆಳೆಸುವುದು ಮಾತ್ರವಲ್ಲದೆ, ಅದನ್ನು ಮಾರುಕಟ್ಟೆ ಮಾಡುವ ಕಲೆಯನ್ನು ಕಲಿತರೆ ರೈತರೇ ಬಹುಪಾಲು ಲಾಭ ಪಡೆಯಬಹುದು. ಕೃಷಿ ಇರಲಿ ಅಥವಾ ಯಾವುದೇ ಕ್ಷೇತ್ರವಿರಲಿ ಗೆದ್ದವರಿಗಿಂತ ಸೋತವರ ಅಭಿಪ್ರಾಯ, ಸಲಹೆ ಪಡೆಯಬೇಕು. ಯಾಕೆಂದರೆ ಅವರು ಯಾಕೆ ಸೋತರು ಎಂದು ಅರಿತರೆ ನಾವು ಮತ್ತೆ ಅಂತಹ ತಪ್ಪು ಮಾಡುವುದಿಲ್ಲ. ನಾನು ಇದನ್ನು ಸ್ವತಃ ನನ್ನಲ್ಲೂ ಅಳವಡಿಸಿ ಕೊಂಡಿದ್ದೇನೆ.
– ಚಂದ್ರಶೇಖರ ಉಡುಪ, ಕೆಂಚನೂರು    

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Malpe: ಸಮುದ್ರದ ಮಧ್ಯೆ ಮೀನುಗಾರ ನಾಪತ್ತೆ

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

Road Mishap: ಅಂಪಾರು ತಲಕಲ್‌ಗುಡ್ಡೆ: ಬೈಕ್‌ ಸ್ಕಿಡ್‌; ಸವಾರ ಸಾವು

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಸಮುದ್ರದ ಮಧ್ಯೆ ಮೀನುಗಾರ ನಾಪತ್ತೆ

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.