ಕಾನೂನುಗಳು ಕಾರ್ಯರೂಪಕ್ಕೆ ಬಂದಾಗ ಬದಲಾವಣೆ
ಲಿಂಗತ್ವ ಅಲ್ಪಸಂಖ್ಯಾಕರಿಗೆ ಕಾನೂನು ಅರಿವು ಉದ್ಘಾಟಿಸಿ ಸಿ.ಎಂ.ಜೋಶಿ
Team Udayavani, Aug 8, 2019, 5:38 AM IST
ಉಡುಪಿ: ಎಲ್ಲ ಸಮು ದಾಯಗಳ ಅಭ್ಯುದಯವಾಗಬೇಕೆಂಬ ಉದ್ದೇಶದಿಂದ ಹಲವಾರು ಕಾನೂನು ಗಳು ರೂಪಿಸಲ್ಪಟ್ಟಿವೆ. ಆದರೆ ಆ ಕಾನೂನುಗಳು ಕಾರ್ಯಗತಗೊಂಡರೆ ಮಾತ್ರ ಸಮಾಜದಲ್ಲಿ ಉತ್ತಮ ಬದ ಲಾವಣೆ ಕಾಣಲು ಸಾಧ್ಯ ಎಂದು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ. ಜೋಶಿ ಹೇಳಿದರು.
ಆ. 7ರಂದು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ವಕೀಲರ ಸಂಘ, ಬೆಂಗಳೂರಿನ ಆಶ್ರಯ ಸಮುದಾಯ ಸಂಘಟನೆ, ಸಾರಥ್ಯ, ಪಯಣ ಸಂಘಟನೆಗಳ ಸಹಭಾಗಿತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣ ದಲ್ಲಿ ಜರಗಿದ ಲಿಂಗತ್ಪ ಅಲ್ಪಸಂಖ್ಯಾಕರ ಸಮುದಾಯದವರಿಗಾಗಿ ಜಿಲ್ಲಾ ಮಟ್ಟದ ಕಾನೂನು ಅರಿವು ಕಾರ್ಯಕ್ರಮ ವನ್ನು ಉದ್ಘಾಟಿಸಿ ನ್ಯಾಯಾಧೀಶರು ಮಾತನಾಡಿದರು.
ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಆದರೆ ಕೆಲವು ಸಮಾಜದವರು, ಕೆಲವು ಭಾಗದವರು ಇನ್ನೂ ಕೂಡ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಇದಕ್ಕೆ ಕಾನೂನು ಸಮರ್ಪಕವಾಗಿ ಪಾಲನೆಯಾಗದಿರುವುದು ಕೂಡ ಕಾರಣ. ಕೆಲವು ವರ್ಷಗಳ ಹಿಂದೆ ಲಿಂಗತ್ವ ಅಲ್ಪಸಂಖ್ಯಾಕ ಸಮುದಾಯದವರ ಪರ ದನಿ ಎತ್ತುವವರು ಇರಲಿಲ್ಲ. ಕಾನೂನು ಸೇವೆಗಳ ಪ್ರಾಧಿಕಾರ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅವರ ಪರ ದನಿ ಎತ್ತುವ ಕೆಲಸ ಆರಂಭಿಸಿತು. ಅವರನ್ನು ಮುಖ್ಯವಾಹಿನಿಗೆ ತರಲು ನಿರಂತರವಾಗಿ ಪ್ರಯತ್ನಿಸುತ್ತಿದೆ. 10 ವರ್ಷಗಳ ಹಿಂದೆ ಯಾವುದೇ ಅರ್ಜಿ ಫಾರಂಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾಕರು ಎಂಬ ಕಾಲಂ ಇರಲಿಲ್ಲ. ಬಳಿಕ ನ್ಯಾಯಾಲಯ ಇದಕ್ಕೆ ಅವಕಾಶ ಮಾಡಿಕೊಟ್ಟಿತು. ನ್ಯಾಯಾಲಯಗಳಲ್ಲಿಯೂ ಲಿಂಗತ್ವ ಅಲ್ಪಸಂಖ್ಯಾಕರ ಕುರಿತಾಗಿ ನ್ಯಾಯಾ ಧೀಶರಿಗೆ ಮಾಹಿತಿ ಕಾರ್ಯಕ್ರಮಗಳು ಆಗಾಗ್ಗೆ ನಡೆಯುತ್ತಿರುತ್ತವೆ ಎಂದು ಸಿ.ಎಂ.ಜೋಷಿ ಹೇಳಿದರು.
ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಎಎಸ್‌ಪಿ ಕುಮಾರಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಎಲ್.ಗೊನ್ಸಾಲ್ವಿಸ್, ಸಾರಥ್ಯ ಸಂಸ್ಥೆಯ ಅಧ್ಯಕ್ಷ ಪೆದ್ದಣ್ಣ, ಆಶ್ರಯ ಸಮುದಾಯ ಸಂಘಟನೆಯ ಪ್ರತಿನಿಧಿ ಸಂಜೀವ ವಂಡ್ಸೆ , ತ್ರಿಮೂರ್ತಿ ಉಪಸ್ಥಿತರಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಸಂತೋಷ್ ಸ್ವಾಗತಿಸಿದರು.
ಗುರುತಿನ ಚೀಟಿ ವಿತರಣೆ
ಲಿಂಗತ್ವ ಅಲ್ಪಸಂಖ್ಯಾಕರಿಗೆ ಗುರುತು ಕಾರ್ಡ್ ವಿತರಿಸಲು ಜಿಲ್ಲಾಡಳಿತ ತೀರ್ಮಾನಿಸಿದ್ದು ಅದರಂತೆ ಸಮಾ ರಂಭದಲ್ಲಿ 7 ಮಂದಿಗೆ ಸಾಂಕೇತಿಕವಾಗಿ 7 ಮಂದಿಗೆ ವಿತರಿಸಲಾಯಿತು. ಜಿಲ್ಲೆಯಲ್ಲಿ 280ಕ್ಕೂ ಅಧಿಕ ಲಿಂಗತ್ವ ಅಲ್ಪಸಂಖ್ಯಾಕರು ಇದ್ದಾರೆ ಎನ್ನಲಾಗಿದ್ದು ಈ ಕುರಿತಾದ ಸಮೀಕ್ಷೆಯನ್ನು ಸಮಿತಿ ನಡೆಸಲಿದೆ.
ಲಿಂಗತ್ವ ಅಲ್ಪಸಂಖ್ಯಾಕರು ಗುರುತು ಕಾರ್ಡ್‌ಗಾಗಿ ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಬಹುದು. ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಈ ಕಾರ್ಡ್‌ಗಳು ಬಳಕೆಯಾಗಲಿವೆ.
ಅಲ್ಪಸಂಖ್ಯಾಕ ನೀತಿ ಜಾರಿ
ಲಿಂಗತ್ವ ಅಲ್ಪಸಂಖ್ಯಾಕರು ಸೇರಿದಂತೆ ಸಮಾಜದಲ್ಲಿ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳದವರಿಗೆ ಸಹಾಯ ಮಾಡಬೇಕೆಂಬ ಇಚ್ಛೆ ಅನೇಕ ಅಧಿಕಾರಿಗಳಿಗೆ ಇರುತ್ತದೆ. ಆದರೆ ಇದಕ್ಕೆ ಪೂರಕವಾಗಿ ನೀತಿ ನಿಯಮಗಳು ಇಲ್ಲದಿದ್ದರೆ ಅಡ್ಡಿಯಾಗುತ್ತದೆ. ಇದೀಗ ಲಿಂಗತ್ವ ಅಲ್ಪಸಂಖ್ಯಾಕರಿಗೆ ಸಂಬಂಧಿಸಿದ ನೀತಿ ಜಾರಿಗೆ ಬಂದಿದೆ. ಇದರಿಂದಾಗಿ ಆಡಳಿತವರ್ಗ ಕೂಡ ಮುನ್ನಡೆಯಲು ಅನುಕೂಲವಾಗಿದೆ. ಲಿಂಗತ್ವ ಅಲ್ಪಸಂಖ್ಯಾಕರ ಪರವಾಗಿ ನಿರಂತರವಾಗಿ ಕೆಲಸಗಳನ್ನು ಮಾಡುತ್ತಿದ್ದರೆ ಸಮಾಜದಲ್ಲಿ ನಿಧಾನಕ್ಕೆ ಬದಲಾವಣೆಯುಂಟಾಗುವ ವಿಶ್ವಾಸವಿದೆ.
-ಸಿಂಧೂ ಬಿ. ರೂಪೇಶ್, ಜಿ.ಪಂ. ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.