“ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯತ್ ಪಾತ್ರ ಮಹತ್ತರ’
ಚಾರ ಗ್ರಾಮ ಪಂಚಾಯತ್: ನೂತನ ಕಟ್ಟಡ ಉದ್ಘಾಟನೆ
Team Udayavani, Mar 1, 2020, 5:18 AM IST
ಹೆಬ್ರಿ: ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯತ್ ಪಾತ್ರ ಮಹತ್ತರವಾಗಿದೆ.
ಈ ನಿಟ್ಟಿನಲ್ಲಿ ಚಾರಾ ಗ್ರಾ.ಪಂ. ಚಿಕ್ಕ ಕೊಠಡಿಯಲ್ಲಿ ಇದುವರೆಗೆ ಕಾರ್ಯನಿರ್ವಹಿಸುತ್ತಿದ್ದು ಇದೀಗ ವಿಶಾಲವಾದ ಸ್ವಂತ ಕಟ್ಟಡವನ್ನು ಹೊಂದಿ ಉಡುಪಿ ಜಿಲ್ಲೆಯಲ್ಲಿಯೇ ನೂತನವಾಗಿ ಘೋಷಣೆಯಾದ ಗ್ರಾಮ ಪಂಚಾಯತ್‌ಗಳಲ್ಲಿ ಮೊದಲಿಗೆ ನಿರ್ಮಾಣವಾದ ಕಟ್ಟಡಕ್ಕೆ ಚಾರಾ ಗ್ರಾ.ಪಂ. ಪಾತ್ರವಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಫೆ.29 ರಂದು ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಚಾರ ಗ್ರಾಮ ಪಂಚಾಯತ್‌ನ ಸ್ವಂತ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನೂತನ ಪಂಚಾಯತ್ ಕಟ್ಟಡವನ್ನು ಉದ್ಘಾಟಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಈಗಾಗಲೇ ಚಾರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 5ಕೋಟಿ ರೂ.ವೆಚ್ಚಕ್ಕೂ ಮಿಕ್ಕಿ ರಸ್ತೆ ಅಭಿವೃದ್ಧಿಯಾಗಿದೆ. ಮುಂದೆಯೂ ರಸ್ತೆಗಳ ಅಭಿವೃದ್ಧಿಗೆ ಅನುದಾನ ಒದಗಿಸಿ, ಪಂಚಾಯತ್‌ಗೆ ಬೇಕಾದ ಸಮಗ್ರ ಪೀಠೊಪಕರಣಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಚಾರಾ ಗ್ರಾಮ ಪಂಚಾಯತ್‌ನಲ್ಲಿ ಈ ಹಿಂದೆ ಪಿಡಿಒ ಆಗಿ ಪಂಚಾಯತ್‌ನ ಅಭಿವೃದ್ಧಿಗೆ ಶ್ರಮಿಸಿದ ಸದಾಶಿವ ಮತ್ತು ಶೇಖರ್ ಪೂಜಾರಿಅವರನ್ನು ಸಮ್ಮಾನಿಸಲಾಯಿತು.
ಸಮಾರಂಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌ಸದಸ್ಯೆ ಜ್ಯೋತಿ ಹರೀಶ್, ತಾ.ಪಂ.ಸದಸ್ಯ ಚಂದ್ರಶೇಖರ ಶೆಟ್ಟಿ, ಕಾರ್ಕಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ| ಮೇ| ಹರ್ಷ, ತಾ.ಪಂ. ಮಾಜಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಪಂಚಾಯತ್ ರಾಜ್ ಎಂಜಿನಿಯರ್ ಸತ್ಯನಾರಾಯಣ್, ಪಂ.ಅ. ಅಧಿಕಾರಿ ರಾಜೇಂದ್ರ, ಕಾರ್ಯದರ್ಶಿ ಸುಮನಾ ಭಟ್, ಉಪಾಧ್ಯಕ್ಷೆ ರೇಷ್ಮಾ ಮೊದಲಾದವರು ಉಪಸ್ಥಿತರಿದ್ದರು.
ಚಾರ ಗ್ರಾಮ ಪಂಚಾಯತ್ ಅಧ್ಯಕ್ಷ ಸಂದೀಪ್ ಸ್ವಾಗತಿಸಿ, ಪ್ರಕಾಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಪಂ.ಸದಸ್ಯ ದಿನೇಶ್ ಶೆಟ್ಟಿ ವಂದಿಸಿದರು.
ಜನರ ಸೇವೆಗೆ ಸದಾ ಸಿದ್ಧ
ಚಾರ ಗ್ರಾಮ ಪಂಚಾಯತ್ ಗೆ ಯಾವುದೇ ವಾಣಿಜ್ಯ ಕಟ್ಟಡಗಳ ತೆರೆಗೆ ವಸೂಲಿ ಮೊದಲಾದ ವಿಷಯಗಳಂತೆ ಹೆಚ್ಚಿನ ಆದಾಯ ಇಲ್ಲ. ಆದರೂ ಜನರಿಗೆ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ಪಂಚಾಯತ್ ಆಡಳಿತ ಯಾವುದೇ ಪಕ್ಷ ಬೇದವಿಲ್ಲದೆ ಸದಸ್ಯರು ಎಲ್ಲೂ ಒಟ್ಟಿಗೆ ಸೇರಿ ಜನಸೇವೆಯಲ್ಲಿ ತೊಡಗಿಕೊಂಡಿದ್ದು ಮುಂದೆಯೂ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತದೆ.ಚಾರ ಗ್ರಾಮದ ಅಭಿವೃದ್ಧಿಯಲ್ಲಿ ಶಾಸಕರ ಸಂಪೂರ್ಣ ಸಹಕಾರ ಅಗತ್ಯ ಎಂದು ಪ್ರಸ್ತಾವನೆಗೈದ ಪಂಚಾಯತ್ ಸದಸ್ಯ ಚಾರ ವಾದಿರಾಜ್ ಶೆಟ್ಟಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.