ಚೇರ್ಕಾಡಿ ಮುಡೂರಿನಲ್ಲಿ ಹಡಿಲು ಭೂಮಿಗೆ ಮರುಜೀವ ನೀಡಿದ ಕೃಷಿಕ

ನ್ಯಾಯವಾದಿ ಮನೋಹರ ಶೆಟ್ಟರಿಂದ 10 ಎಕ್ರೆ ಮಾದರಿ ತೋಟ

Team Udayavani, Jan 10, 2020, 5:24 AM IST

0601BVRE3

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಸರಕಾರದಿಂದ ಪ್ರಶಸ್ತಿ  ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಬ್ರಹ್ಮಾವರ: ಕೃಷಿ ಆದಾಯದಿಂದ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿದಾಗ ಭೂಮಿತಾಯಿಯನ್ನು ಮರೆಯಬಾರದು. ಹಿರಿಯರ ಜಾಗ ಹಡಿಲು ಬಿಡಬಾರದು ಎನ್ನುವ ಸದುದ್ದೇಶದಿಂದ ವೃತ್ತಿಯಲ್ಲಿ ನ್ಯಾಯವಾದಿ, ನೋಟರಿಯಾದರೂ ಮನೋಹರ ಶೆಟ್ಟಿ ಅವರು ಹುಟ್ಟೂರು ಮುಡೂರಿನಲ್ಲಿ 10 ಎಕ್ರೆ ಸುಂದರ ತೋಟ ನಿರ್ಮಿಸಿದ್ದಾರೆ.

ಬ್ರಹ್ಮಾವರದಲ್ಲಿ ಕಳೆದ 28 ವರ್ಷಗಳಿಂದ ನ್ಯಾಯವಾದಿ ಹಾಗೂ ನೋಟರಿಯಾಗಿ ಸೇವೆ ಸಲ್ಲಿಸುತ್ತಿರುವ ಮನೋಹರ ಶೆಟ್ಟಿ ಅವರು ಕುಟುಂಬದ ಆಸ್ತಿ ಸಂಪೂರ್ಣ ಹಡಿಲು ಬಿದ್ದದ್ದನ್ನು ನೋಡಿ ತಾನೇಕೆ ಕೃಷಿ ಮಾಡಬಾರದು ಎಂದು ಯೋಜಿಸಿದರು.

ಮೊದಲು ನೀರಿನ ಆಶ್ರಯಕ್ಕಾಗಿ ಬೋರ್‌ ತೋಡಿಸಿದಾಗ ಉತ್ತಮ ಫಲವೇ ನೀಡಿತು. ತತ್‌ಕ್ಷಣ 5 ಎಕ್ರೆ ಜಾಗದಲ್ಲಿ ಅಡಿಕೆ, ಇನ್ನೈದು ಎಕ್ರೆಯಲ್ಲಿ ತೆಂಗಿನ ಸಸಿ ನಾಟಿ ಮಾಡಿದರು. ಸುತ್ತಲೂ ಹಲಸು, ಸಾಗುವಾನಿ, ಮಹಾಗನಿ ನೆಟ್ಟರು. ಜತೆಗೆ ಕಸೆ ಮಾವು, ಶ್ರೀಗಂಧ, ಸಂಪಿಗೆ ಹಾಕಿದ್ದಾರೆ. ಮಧ್ಯದಲ್ಲಿರುವ ನಾಗಬನ ಸುತ್ತ ಔಷಧೀಯ ಸಸಿಗಳನ್ನು ನೆಟ್ಟಿದ್ದಾರೆ. ಮುಂದೆ ಹಲವು ಉಪಬೆಳೆಗಳನ್ನು ಬೆಳೆಯುವ ಯೋಜನೆ ಹಾಕಿಕೊಂಡಿದ್ದಾರೆ.

1,500 ಅಡಿಕೆ
ಸುಮಾರು 1,500 ಅಡಿಕೆ ಗಿಡ ಫಲ ಬರಲು ಪ್ರಾರಂಭವಾಗಿದೆ. 220 ತೆಂಗಿನ ಸಸಿ ಉತ್ತಮ ಬೆಳವಣಿಗೆಯಲ್ಲಿದೆ. ಮಧ್ಯದಲ್ಲಿ ಮನೆಗೆ ಬೇಕಾದಷ್ಟು ತರಕಾರಿ ಬೆಳೆಯುತ್ತಾರೆ. ಈ ಸುಂದರ ತೋಟಕ್ಕೆ ಅಜ್ಜಿಯ ನೆನಪಿಗಾಗಿ ರಾಧಮ್ಮ ಶೆಡ್ತಿ ಫಾರ್ಮ್ ಹೆಸರಿಸಿದ್ದಾರೆ.

ಹಡಿಲು ಬಿಡಬೇಡಿ
ಇಂದು ಬಹುತೇಕ ಮಂದಿ ವಿದ್ಯಾವಂತರಾಗಿ ಪೇಟೆ ಸೇರಿದ್ದಾರೆ. ಹಳ್ಳಿಯ ಆಸ್ತಿ ಸಂಪೂರ್ಣ ಹಡಿಲು ಬಿದ್ದಿದೆ. ಉತ್ತಮ ನೌಕರಿಯಲ್ಲಿರುವವರು ಮತ್ತೆ ಕೃಷಿ ಚಟುವಟಿಕೆ ನಡೆಸಬೇಕು ಎಂದು ಮನೋಹರ ಶೆಟ್ಟಿ ಅವರು ಪ್ರೇರೇಪಿಸುತ್ತಾರೆ. ಜತೆಗೆ ನೌಕರರನ್ನು ಮನೆಯವರಂತೆ ಪ್ರೀತಿ, ವಿಶ್ವಾಸದಿಂದ ಕಾಣಬೇಕು ಎನ್ನುತ್ತಾರೆ.

ಮನಸ್ಸಿದ್ದರೆ ಮಾರ್ಗ
ಎಷ್ಟೇ ಕಾರ್ಯ ಒತ್ತಡವಿದ್ದರೂ ಮನಸ್ಸಿದ್ದರೆ ಕೃಷಿ ಸಾಧ್ಯ ಎನ್ನುವುದಕ್ಕೆ ಮನೋಹರ ಶೆಟ್ಟಿ ಅವರು ಉತ್ತಮ ನಿದರ್ಶನ. ಕಚೇರಿಯಲ್ಲಿ ಎಷ್ಟೇ ಕರ್ತವ್ಯವಿದ್ದರೂ ಮಧ್ಯಾಹ್ನದ ವೇಳೆ ತೋಟಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡುತ್ತಾರೆ.

ಹಸಿರಿನ ಕೊಡುಗೆ
ಕೇವಲ ವಾಣಿಜ್ಯ ದೃಷ್ಟಿಯಿಂದ ಅಡಿಕೆ, ತೆಂಗು ಮಾತ್ರ ಬೆಳೆಯಬಾರದು. ವಿಭಿನ್ನ ಮರಗಳನ್ನು ಬೆಳೆಸಬೇಕು. ಸಾಧ್ಯವಾದಷ್ಟು ಹಸಿರು ಬೆಳೆಸಿದರೆ ವಾತಾವರಣ ತಂಪಾಗಿರುತ್ತದೆ ಜತೆಗೆ ನೀರು ನೈಸರ್ಗಿಕವಾಗಿ ಇಂಗುತ್ತದೆ. ಇದುವೇ ನಾವು ಭೂಮಿಗೆ ಕೊಡುವ ಕೊಡುಗೆ ಎನ್ನುತ್ತಾರೆ.

ನೀರಿನ ಮಿತ ಬಳಕೆ
ಇರುವ ನೀರನ್ನು ಸಾಧ್ಯವಾದಷ್ಟು ಮಿತವಾಗಿ ಬಳಸಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪೂರ್ತಿ ತೋಟಕ್ಕೆ ಹನಿ ನೀರಾವರಿ ಅಳವಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನೀರಿನ ಲಭ್ಯತೆ ನೋಡಿಕೊಂಡು ಇನ್ನೂ 5 ಎಕ್ರೆ ಹಡಿಲು ಭೂಮಿ ಅಭಿವೃದ್ದಿಪಡಿಸುವ ಯೋಜನೆ ಹೊಂದಿದ್ದಾರೆ.

ಬೇರೆ ಬೇರೆ ಕಾರಣಗಳನ್ನು ನೀಡಿ ಇಂದು ಕೃಷಿ ಭೂಮಿ ಬಂಜರು ಮಾಡುತ್ತಿದ್ದಾರೆ. ಉದ್ಯೋಗ ನಿಮಿತ್ತ ಪೇಟೆ ಸೇರಿಕೊಂಡಿದ್ದಾರೆ. ಉದ್ಯೋಗದಲ್ಲಿರುವವರೂ, ಪೇಟೆಯಲ್ಲಿರುವವರೂ ಹಳ್ಳಿಯಲ್ಲಿ ಕೃಷಿ ಮಾಡಬಹುದು ಎಂದು ಮನೋಹರ ಶೆಟ್ಟಿ ಅವರು ತೋರಿಸಿಕೊಟ್ಟಿದ್ದಾರೆ. ಇತರರಿಗೆ ಪ್ರೇರಣೆಯಾಗಿದ್ದಾರೆ.

ಕಷ್ಟದ ದಿನ ಮರೆಯಬೇಡಿ
ಬೆಳಗ್ಗೆ ಡೈರಿಗೆ ಹಾಲು ನೀಡಿ, ಗದ್ದೆ, ತೋಟ, ದನಗಳನ್ನು ನೋಡಿಕೊಂಡು ಶಾಲೆಗೆ ಹೋದ ಬಾಲ್ಯದ ದಿನಗಳನ್ನು ಮರೆಯಬಾರದು.

ಭತ್ತದ ತೆನೆಗಳನ್ನು ಹೆಕ್ಕಿ ಅದರಿಂದ ದೀಪಾವಳಿ ಪಟಾಕಿ ತಂದ ನೆನಪು ಮರೆಯಾಗದು. ಈಗ ಉತ್ತಮ ಸಂಪಾದನೆ ಇರುವಾಗ ಅನಾವಶ್ಯಕ ಖರ್ಚುಗಳಿಗೆ ವ್ಯಯಿಸಿ ಆರೋಗ್ಯ ಕಳೆದುಕೊಳ್ಳುವುದಕ್ಕಿಂತ ಕೃಷಿ ಚಟುವಟಿಕೆಗಳಿಗೆ ವಿನಿಯೋಗಿಸಿ. ಭೂಮಿಯ ಫ‌ಲವತ್ತತೆ ಹೆಚ್ಚಿಸಲು ಅಧಿಕ ಒತ್ತನ್ನು ನೀಡಬೇಕು. ಕೃಷಿ ಬಹುತೇಕರಿಗೆ ಜೀವನದ ಆದಾಯದ ಮೂಲವಾಗಿದ್ದು ಸದಾ ನಮ್ಮನ್ನು ಕ್ರೀಯಾಶೀಲ ಚಟುವಟಿಕೆಯತ್ತ ತೋಡಗುವಂತೆ ಮಾಡುತ್ತದೆ.ಇದರಿಂದ ಉತ್ತಮ ಆರೋಗ್ಯ, ನೆಮ್ಮದಿ ಪಡೆಯಬಹುದು. ಭವಿಷ್ಯ ಇರುವುದೇ ಭೂಮಿ, ಕೃಷಿಯಲ್ಲಿ.
-ಎಂ. ಮನೋಹರ ಶೆಟ್ಟಿ
ನ್ಯಾಯವಾದಿ ಹಾಗೂ ಕೃಷಿಕ

-ಪ್ರವೀಣ್‌ ಮುದ್ದೂರು

ಟಾಪ್ ನ್ಯೂಸ್

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

11

Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.