ಕರಾವಳಿ ಅಭಿವೃದ್ಧಿಗೆ ಸ್ಪಷ್ಟ ಕಲ್ಪನೆಯಿದೆ

ಉದಯವಾಣಿ ಅತಿಥಿ ಸಂಪಾದಕರಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

Team Udayavani, Apr 12, 2022, 7:00 AM IST

ಕರಾವಳಿ ಅಭಿವೃದ್ಧಿಗೆ ಸ್ಪಷ್ಟ ಕಲ್ಪನೆಯಿದೆ

ಉದಯವಾಣಿ ಕಚೇರಿ, ಮಣಿಪಾಲ: ಕರಾವಳಿ ಅಭಿವೃದ್ಧಿಯ ಬಗ್ಗೆ ಅನೇಕ ಯೋಚನೆ, ಯೋಜನೆ ಇದೆ. ಆದರೆ ನಮಗೆ ಸಿಆರ್‌ಝಡ್‌ ನಿಯಮ ಸಮಸ್ಯೆ ಒಡ್ಡುತ್ತಿದೆ. ಪಕ್ಕದ ಕೇರಳ ಮತ್ತು ಗೋವಾಗಳಲ್ಲಿ ಸಿಆರ್‌ಝಡ್‌ ನಿಯಮಗಳಲ್ಲಿ ಕೆಲವು ವಿನಾಯಿತಿ ಇದೆ. ಹೀಗಾಗಿ ಅಲ್ಲಿ ಬೀಚ್‌ ಟೂರಿಸಂ ಇತ್ಯಾದಿ ಚೆನ್ನಾಗಿವೆ. ನಾವು ಕೂಡ ಇತ್ತೀಚೆಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಸಿಆರ್‌ಝಡ್‌ ನಿಯಮಗಳಿಗೆ ವಿನಾಯಿತಿಗೆ ಕೇಳಿದ್ದೇವೆ. ನಮ್ಮ ಪ್ರವಾಸೋದ್ಯಮ ಸಚಿವರಾದ ಆನಂದ್‌ ಸಿಂಗ್‌ ಕೂಡ ಜತೆಗಿದ್ದರು. ನಿಯಮ ಸಡಿಲಿಕೆ ಆಗುವ ಭರವಸೆ ಸಿಕ್ಕಿದೆ ಮತ್ತು ನಮ್ಮ ಪ್ರಯತ್ನವೂ ನಡೆಯುತ್ತಿದೆ. ಒಮ್ಮೆ ವಿನಾಯಿತಿ ಸಿಕ್ಕಿದರೆ ದೊಡ್ಡ ಪ್ರಮಾಣದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಆರಂಭವಾಗಲಿವೆ. ಧಾರ್ಮಿಕ, ಬೀಚ್‌ ಪ್ರವಾಸೋದ್ಯಮದ ಜತೆಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ ಮತ್ತು ಹೂಡಿಕೆಯೂ ಜಾಸ್ತಿಯಾಗಲಿದೆ. ಜಗತ್ತಿನ ಅತೀ ಸುಂದರ ಬೀಚ್‌ಗಳು ನಮ್ಮಲ್ಲಿವೆ. ಸಿಆರ್‌ಝಡ್‌ ನಿಯಮ ಸಡಿಲವಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬಹುದಾಗಿದೆ. ಹೊಸ ಬಂದರು ನಿರ್ಮಾಣಕ್ಕೂ ಚಿಂತನೆ ನಡೆಸುತ್ತಿದ್ದೇವೆ. ಬಂದರುಗಳ ವಿಸ್ತರಣೆಗೂ ಪ್ರಯತ್ನ ಆಗುತ್ತಿದೆ. ಸ್ಪೆಷಲ್‌ ಹ್ಯಾಂಗರ್‌ ಮೂಲಕ ಲಕ್ಷದ್ವೀಪದಿಂದ ಕ್ರೂಸ್‌ ಆರಂಭ ಮಾಡಲು ವಿಶೇಷವಾದ ಸ್ಥಳವನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಕರಾವಳಿಯ ಅಭಿವೃದ್ಧಿಗೆ ಹಲವು ಯೋಚನೆಗಳು ಇವೆ ಮತ್ತು ಅದನ್ನು ಕಾರ್ಯರೂಪಕ್ಕೂ ತರಲಿದ್ದೇವೆ…

– ಸೋಮವಾರ, ಎ. 11ರಂದು ಉದಯವಾಣಿಯ ಮಣಿಪಾಲ ಕೇಂದ್ರ ಕಚೇರಿಗೆ ಭೇಟಿ ನೀಡಿ ಅತಿಥಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಬಳಿಕ ನಡೆದ ಸಂವಾದದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರಾವಳಿಯ ಅಭಿವೃದ್ಧಿಯ ಬಗ್ಗೆ ಹೊಂದಿರುವ ಯೋಜನೆಗಳ ಬಗ್ಗೆ ಹೇಳಿದ್ದಿದು.

ಸಾಫ್ಟ್ ಆಗಿದ್ದರೂ ಕಠಿನ ನಿರ್ಧಾರ ತೆಗೆದುಕೊಳ್ಳುವೆ
ಕೆಲಸ ಮಾಡದ ಮಾತ ನಾ ಡುವ ಸಿಎಂಗಿಂತ ಮಿತಭಾಷಿ ಸಿಎಂ ಉತ್ತ ಮ. ನಾವು ಗಟ್ಟಿ ಧ್ವನಿಯ ಹಲವು ಸಿಎಂ, ರಾಜಕಾರಣಿಗಳನ್ನು ನೋಡಿದ್ದೇವೆ. ಆದರೆ ಅಂತಿಮ ಫ‌ಲಿತಾಂಶ ಏನೂ ಸಿಕ್ಕಿಲ್ಲ. ಜನರ ಭಾವನೆ ಅರ್ಥಮಾಡಿಕೊಂಡು ಸೂಕ್ಷ್ಮತೆಯಿಂದ, ಸಮಸ್ಯೆಯ ಭಾಗವಾಗದೆ ಪರಿಹಾರದ ಭಾಗವಾದಾಗ ಸಮಚಿತ್ತದಿಂದ ಮುನ್ನಡೆಯಬಹುದು. ನಾವು ಹೆಚ್ಚು ಮಾತಾಡಬಾರದು, ನಮ್ಮ ಕೆಲಸವೇ ಮಾತಾಡಬೇಕು ಎಂದು ತನ್ನ ಕಾರ್ಯ ವೈಖರಿಯನ್ನು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಸಮಯ ಬಂದಾಗ ಅತ್ಯಂತ ಕಠಿನ ಕ್ರಮಗಳನ್ನು ಕೂಡ ತೆಗೆದುಕೊಂಡಿದ್ದೇವೆ. ಕರ್ನಾಟಕ ವೈಶಿಷ್ಟéಪೂರ್ಣವಾದ ರಾಜ್ಯವಾಗಿದೆ ಮತ್ತು ಅಪಾರ ನೈಸರ್ಗಿಕ ಸಂಪತ್ತಿದೆ. ಜನರಿಗೆ ಅವಕಾಶ ನೀಡಿದರೆ ಪ್ರಬಲವಾದ ಸಮರ್ಥ ಆರ್ಥಿಕ ಬೆಳವಣಿಗೆ ಸಾಧ್ಯವಿದೆ. ರಾಜ್ಯದ ಅಭಿವೃದ್ಧಿಯ ಸಂಬಂಧ ಸ್ಪಷ್ಟ ಕಲ್ಪನೆ ನನ್ನಲ್ಲಿ ಇರುವುದರಿಂದ ಯಾವುದೇ ಹೇಳಿಕೆಗಳಿಗೂ ವಿಚಲಿತನಾಗದೆ ಗುರಿ ಸಾಧನೆಗೆ ಕೆಲಸ ಮಾಡುತ್ತೇನೆ. ಕೂಲ್‌, ಸಾಫ್ಟ್ ಏನೇ ಹೇಳಿ; ಆದರೆ ಸಮಯ ಬಂದಾಗ ಕಠಿನ ಕ್ರಮ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ.

ಖಾರ್‌ಲ್ಯಾಂಡ್‌ ಯೋಜನೆ ಅನುಷ್ಠಾನ
ಪಶ್ಚಿಮ ವಾಹಿನಿ ಯೋಜನೆಗೆ 500 ಕೋಟಿ ರೂ. ಮೀಸಲಿಟ್ಟಿದ್ದೇವೆ. ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡುವ ಜತೆಗೆ ಖಾರ್‌ಲ್ಯಾಂಡ್‌ ಯೋಜನೆಯನ್ನು ಉಡುಪಿ, ದಕಿಣ ಕನ್ನಡಕ್ಕೂ ವಿಸ್ತರಣೆ ಮಾಡಿದ್ದೇವೆ. ಉ.ಕ. ಜಿಲ್ಲೆಯಲ್ಲಿ ಈಗಾಗಲೇ 300 ಕೋಟಿ ರೂ.ಗಳ ಕಾರ್ಯ ಆರಂಭವಾಗಿದೆ. ಈ ಯೋಜನೆಯಿಂದ ನದಿಯ ಸಿಹಿ ನೀರು ಉಪ್ಪಾಗುವುದನ್ನು ತಡೆಯಲು ಸಾಧ್ಯವಿದೆ ಮತ್ತು ಕೃಷಿ ಭೂಮಿಗೆ ಉಪ್ಪು ನೀರು ಹರಿಯುವುದನ್ನು ತಡೆಯಬಹುದಾಗಿದೆ. ಉಡುಪಿ, ದ.ಕ.ದಲ್ಲೂ ಯೋಜನೆ ಶೀಘ್ರ ಆರಂಭಿಸಲಿದ್ದೇವೆ.

ಮೌಲ್ಯಾಧಾರಿತ ರಾಜಕಾರಣ,
ಮೌಲ್ಯದ ರಾಜಕಾರಣ…
ಸರಕಾರಕ್ಕೆ ಸವಾಲುಗಳು ಸದಾ ಇರುತ್ತವೆ. ಜನಸಂಖ್ಯೆ ಹೆಚ್ಚಾದಂತೆ ಸರಕಾರದ ಮೇಲೆ ನಿರೀಕ್ಷೆಗಳು, ಬೇಡಿಕೆಗಳು ಹೆಚ್ಚುತ್ತವೆ ಮತ್ತು ಆ ಮೂಲಕ ಸವಾಲು ಜಾಸ್ತಿಯಾಗುತ್ತವೆ. ರಾಜಕಾರಣ ಮೂಲಭೂತವಾಗಿ ಸಾಕಷ್ಟು ಬದಲಾಗಿದೆ ಎಂದರೂ “ಮೌಲ್ಯಾಧಾರಿತ’ ರಾಜಕಾರಣಕ್ಕಿಂತ “ಮೌಲ್ಯ’ದ ರಾಜಕಾರಣವೇ ಹೆಚ್ಚಿದೆ. ಮೌಲ್ಯಾಧಾರಿತವೇ ಅಥವಾ ಮೌಲ್ಯದ ರಾಜಕಾರಣ ಆಯ್ಕೆ -ಇವೆ ರಡು ನಮ್ಮ ಮುಂದಿವೆ. “ಪೀಪಲ್‌ ಪೊಲಿಟಿಕ್ಸ್‌’ ಮೂಲಕ “ಪವರ್‌ ಪೊಲಿಟಿಕ್ಸ್‌’ ಮಾಡಬೇಕೇ ಅಥವಾ ಕೇವಲ “ಪವರ್‌ ಪೊಲಿಟಿಕ್ಸ್‌’ ಮಾಡಬೇಕೇ? ನಮ್ಮ ತಂದೆಯವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೂ ಈ ಸವಾಲಿತ್ತು, ಈಗಲೂ ಇದೆ. ನೀತಿಗಳು, ಮೌಲ್ಯಗಳು ಒಂದೇ ರೀತಿ ಇದೆ. ವ್ಯಕ್ತಿಯ ನಿಯತ್ತು ಮತ್ತು ಅದನ್ನು ನೋಡುವ ದೃಷ್ಟಿಯೂ ಬದಲಾಗಿದೆ.

ಜನರು-ನಿಸರ್ಗ-ಸುಸ್ಥಿರ ಪರಿಸರ
ಜನರು ಮತ್ತು ನಿಸರ್ಗ ಒಟ್ಟಿಗೆ ಜೀವನ ನಡೆಸಿಕೊಂಡು ಸಾಗಿದಲ್ಲಿ ಮಾತ್ರ ಸುಸ್ಥಿರ ಪರಿಸರ ನಿರ್ಮಾಣ ಸಾಧ್ಯ. ಕರಾವಳಿ, ಮಲೆನಾಡಿನ ಅರಣ್ಯದಂಚಿನ ಜನರು, ಕಾಡಂಚಿನ ಗ್ರಾಮೀಣ ಭಾಗದವರು ಸಣ್ಣ ಕೃಷಿ ಮೂಲಕ ಈ ಪರಿಸರ ವ್ಯವಸ್ಥೆಯನ್ನು ಹಿಂದಿನಿಂದಲೂ ಉತ್ತಮವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಅಲ್ಲದೆ ಹಸುರುಸ್ನೇಹಿ ಯೋಜನೆಗಳಿಗೆ ಪರಿಸರ ಬಜೆಟ್‌ನಲ್ಲಿ 100 ಕೋ. ರೂ. ಅನುದಾನವನ್ನು ಮೀಸಲಿರಿಸಲಾಗಿದೆ. ಕಸ್ತೂರಿರಂಗನ್‌ ವರದಿ ಜಾರಿ ಬಗ್ಗೆ ಅವಸರದ ತೀರ್ಮಾನ ಅಗತ್ಯವಿಲ್ಲ. ಜನರ ಬದುಕನ್ನು ತೊಂದರೆಗೆ ಸಿಲುಕಿಸುವ ಕೆಲಸವನ್ನು ಸರಕಾರ ಮಾಡುವುದಿಲ್ಲ . ನಾಡಿನ ಜನರು ಕಾಡಿನೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ.


ಮಂಗಳೂರು ಅಭಿವೃದ್ಧಿ ಹೊಂದು ತ್ತಿರುವ ನಗರ. ಇಲ್ಲಿಗೆ ಮೆಟ್ರೋ ವ್ಯವಸ್ಥೆ ಮಾಡುವ ಆಲೋಚನೆ ಇದೆಯೇ?

ಮಂಗಳೂರು ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಾಗ ಮತ್ತಷ್ಟು ಅವಕಾಶ ಸಿಗಲಿದೆ. ಮೆಟ್ರೋ ನಿರ್ಮಾಣಕ್ಕೆ ಅದರದ್ದೇ ಆದ ನಿಯಮಗಳಿವೆ. ಜನಸಂಖ್ಯೆ ದಟ್ಟನೆಗಳನ್ನು ನೋಡಿಕೊಂಡು ಮಾಡ ಲಾಗುತ್ತದೆ. ಬೆಂಗಳೂರಿನಂತೆ ಮಂಗಳೂರಿನಲ್ಲಿ ಮೆಟ್ರೋ ನಿರ್ಮಾಣ ಮಾಡುವುದು ಸಂತೋಷದ ವಿಚಾರ.

ಟಾಪ್ ನ್ಯೂಸ್

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.